
ಉಡುಪಿ: ಸಾಲಬಾಧೆಯಿಂದ ಬೇಸತ್ತು ಮೀನುಗಾರನ ಆತ್ಮಹತ್ಯೆ
Source : UNI
ಉಡುಪಿ: ಹಣಕಾಸು ಸಂಸ್ಥೆಗಳಿಂದ ಪಡೆದಿದ್ದ ಸಾಲ ತೀರಿಸಲು ಸಾಧ್ಯವಾಗದೆ ಮೀನುಗಾರನೊಬ್ಬ ಆತ್ಮಹತ್ಯೆಗೊಳಗಾಗಿರುವ ಘಟನೆ ಕುಂದಾಪುರ ತಾಲೊಕು ಗಂಗೊಳ್ಳಿ ಸಮೀಪದ ಹೊಸಾಡು ನಲ್ಲಿ ನಡೆದಿದೆ.
ಸುಬ್ರಾಯ ಖಾರ್ವಿ (40) ಎಂಬುವವರೇ ಮೃತ ದುದೈವಿ. ಕಳೆದ ಕೆಲವು ದಿನಗಳಿಂದ ಮೀನುಗಾರಿಕೆ ಕಸುಬು ನಷ್ಟ ಉಂಟುಮಾಡಿದ ಕಾರಣ ಖಾರ್ವಿ ತೀವ್ರ ಖಿನ್ನತೆಗೊಳಗಾಗಿದ್ದರು ಎಂದು ಕುಟುಂಬ ಮೂಲಗಳು ಹೇಳಿವೆ.
ಅನಾರೋಗ್ಯದ ಕಾರಣ ಇತ್ತೀಚಿಗೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
Stay up to date on all the latest ರಾಜ್ಯ news with The Kannadaprabha App. Download now