ತನ್ನ ಮೃತದೇಹದ ಫೋಟೋವನ್ನು ತಾನೇ ಕಳಿಸಿದ ವ್ಯಕ್ತಿ: ದಾವಣಗೆರೆಯಲ್ಲಿ ಕೆಲಕಾಲ ಆತಂಕ!

ಯುವಕನೋರ್ವ ತನ್ನದೇ ಮೃತದೇಹದ ಫೋಟೊಗಳನ್ನು ತಾನೆ ಕಳಿಸಿ ಆತಕ ಪೋಷಕರು, ಸ್ನೇಹಿತರು ಕಂಗಾಲಾಗುವಂತೆ ಮಾಡಿದ್ದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.

Published: 20th May 2019 12:00 PM  |   Last Updated: 20th May 2019 01:04 AM   |  A+A-


Man sends pictures of his ‘dead body,’ creates panic in Davanagere

ತನ್ನ ಮೃತದೇಹದ ಫೋಟೋವನ್ನು ತಾನೇ ಕಳಿಸಿದ ವ್ಯಕ್ತಿ: ದಾವಣಗೆರೆಯಲ್ಲಿ ಕೆಲಕಾಲ ಆತಂಕ !

Posted By : SBV SBV
Source : IANS
ದಾವಣಗೆರೆ: ಯುವಕನೋರ್ವ ತನ್ನದೇ ಮೃತದೇಹದ ಫೋಟೊಗಳನ್ನು ತಾನೆ ಕಳಿಸಿ ಆತಕ  ಪೋಷಕರು, ಸ್ನೇಹಿತರು ಕಂಗಾಲಾಗುವಂತೆ ಮಾಡಿದ್ದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. 

ಘಟನೆಯ ವಿವರ ತಿಳಿಯುತ್ತಿದ್ದಂತೆಯೇ ಆ ಯುವಕನ ಉದ್ದೇಶ ಬಹಿರಂಗವಾಗುತ್ತಿದ್ದಂತೆಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ದಾವಣಗೆರೆಯ ಯೆಲ್ಲಮ್ಮ ನಗರದ ನಿವಾಸಿ 23 ವರ್ಷದ ಪರಶುರಾಮ್  ಬಂಧಿತ ವ್ಯಕ್ತಿಯಾಗಿದ್ದು, ಪೋಷಕರು ಹಾಗೂ ಸ್ನೇಹಿತರಿಗೆ ಆತಂಕ ಉಂಟುಮಾಡುವುದಕ್ಕಾಗಿಯೇ ಈ ರೀತಿ ಮಾಡಿದ್ದಾನೆಂದು ತಿಳಿದುಬಂದಿದೆ. 

ದಾವಣಗೆರೆಯಲ್ಲಿ ಕಳೆದ ಕೆಲವು ದಿನಗಳಿಂದ ಸರಣಿ ಕೊಲೆಗಳು ನಡೆಯುತ್ತಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದದ್ದನ್ನು ಕಂಡ ಜನತೆ ಆತಂಕಕ್ಕೊಳಗಾಗಿದ್ದರು. ಪೊಲೀಸರು ವಿಚಾರಣೆಗೊಳಪಡಿಸಿದ ನಂತರ ಪರಶುರಾಮ್ ಎಂಬ ಯುವಕ ಸ್ಮಾರ್ಟ್ ಫೋನ್ ಗಾಗಿ ಹೀಗೆ ಮಾಡಿದ್ದಾನೆಂದು ತಿಳಿದುಬಂದಿದೆ. 

ಪರಶುರಾಮ್ ಹಾಗೂ ಸ್ನೇಹಿತರಿಗೆ ಆಕಸ್ಮಿಕವಾಗಿ ಸ್ಮಾರ್ಟ್ ಫೋನ್ ಸಿಕ್ಕಿದೆ, ಅದನ್ನು ಸ್ನೇಹಿತರಿಗೆ ಕೊಡುವುದಕ್ಕೆ ಇಷ್ಟ ಇಲ್ಲದೇ, ತಾನೆ ಇಟ್ಟುಕೊಳ್ಳಲು, ಸ್ನೇಹಿತರು ಹಾಗೂ ಕುಟುಂಬ ಸದಸ್ಯರನ್ನು ಭಯಪಡಿಸುವ ಉದ್ದೇಶದಿಂದ, ಟೊಮ್ಯಾಟೋ ಕೆಚ್ ಅಪ್, ಕುಂಕುಮದ ನೀರನ್ನು ತನ್ನ ಮೇಲೆ ಹಾಕಿಕೊಂಡು ಈ ರೀತಿ ತನ್ನದೇ ಮೃತದೇಹದ ಫೋಟೋವನ್ನು ವೈರಲ್ ಮಾಡಿದ್ದಾನೆಂದು ತಿಳಿದುಬಂದಿದೆ. 
Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp