ತರಬೇತಿ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ದೂರು ದಾಖಲು

ಆನ್ ಲೈನ್ ಪೋರ್ಟಲ್ ನಲ್ಲಿ ಫಿಟ್ ನೆಸ್ ತರಬೇತುದಾರರನ್ನು ಬುಕ್ಕಿಂಗ್ ಮಾಡಿದ 28 ವರ್ಷದ ...

Published: 21st May 2019 12:00 PM  |   Last Updated: 21st May 2019 02:40 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ಬೆಂಗಳೂರು: ಆನ್ ಲೈನ್ ಪೋರ್ಟಲ್ ನಲ್ಲಿ ಫಿಟ್ ನೆಸ್ ತರಬೇತುದಾರರನ್ನು ಬುಕ್ಕಿಂಗ್ ಮಾಡಿದ 28 ವರ್ಷದ ಮಹಿಳೆಗೆ ಕಹಿ ಘಟನೆ ಎದುರಾದ ಪ್ರಸಂಗ ನಡೆದಿದೆ. ತರಬೇತುದಾರ ಮಹಿಳೆಯ ಮನೆಗೆ ಫಿಟ್ ನೆಸ್ ಸೆಷನ್ ಗೆಂದು ಬಂದು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಈ ಸಂಬಂಧ ಕಸವನಹಳ್ಳಿಯ ಪುಷ್ಪಾ(ಹೆಸರು ಬದಲಿಸಲಾಗಿದೆ)  ದೂರು ದಾಖಲಿಸಿದ್ದಾರೆ. ಕಳೆದ ಏಪ್ರಿಲ್ 27ರಂದು ಅರ್ಬನ್ ಕ್ಲಾಪ್ ವೆಬ್ ಪೋರ್ಟಲ್ ನಲ್ಲಿ ಮನೆಯಲ್ಲಿ ಫಿಟ್ ನೆಸ್ ತರಬೇತಿ ಹೇಳಿಕೊಡಲು ಬುಕ್ಕಿಂಗ್ ಮಾಡಿಕೊಂಡಿದ್ದರು. ಪೋರ್ಟಲ್ ನಲ್ಲಿ ಗೋಪಾಲ ಕೃಷ್ಣ ಶೆಟ್ಟಿ ಎಂಬ ತರಬೇತುದಾರರನ್ನು ಬುಕ್ ಮಾಡಲಾಗಿತ್ತು.

ಅವರು ಪುಷ್ಪಾಗೆ ಕರೆ ಮಾಡಿ ಮನೆಗೆ ಬರುವುದಾಗಿ ಹೇಳಿ ಸಂಜೆ ಬಂದಿದ್ದರು. ಆ ಸಂದರ್ಭದಲ್ಲಿ ಪುಷ್ಪಾ ಒಬ್ಬರೇ ಮನೆಯಲ್ಲಿದ್ದರು. ತರಬೇತಿ ವೇಳೆ ಶೆಟ್ಟಿ ಪುಷ್ಪಾರನ್ನು ಅನಗತ್ಯವಾಗಿ ಕಿರಿಕಿರಿ ಉಂಟುಮಾಡುವಂತೆ ಮುಟ್ಟುತ್ತಿದ್ದರು. ತರಬೇತಿ ನೆಪದಲ್ಲಿ ಪುಷ್ಪಾರನ್ನು ಮೇಲಕ್ಕೆತ್ತಿ ಅನಗತ್ಯವಾಗಿ ದೇಹದ ಭಾಗವನ್ನು ಮುಟ್ಟಿದರು, ಇದರಿಂದ ಪುಷ್ಪಾರಿಗೆ ಕಿರಿಕಿರಿಯುಂಟಾಯಿತು
.
ಅಲ್ಲದೆ ಪುಷ್ಪಾರ ಹೊಟ್ಟೆಗೆ ಮುತ್ತಿಕ್ಕಿದರು. ಅವರಿಂದ ಬಿಡಿಸಿಕೊಂಡು ಬಂದು ಪುಷ್ಪಾ ತಮ್ಮ ಕೆಲಸದಲ್ಲಿ ಮನೆಯಲ್ಲಿ ತೊಡಗಿದ್ದಾಗ ಗೋಪಾಲ ಕೃಷ್ಣ ಶೆಟ್ಟಿ ಮನೆಯ ಸುತ್ತ ಓಡಾಡಿ ಪುಷ್ಪಾರ ಮನೆಯ ಕಬೋರ್ಡ್ ತೆಗೆದು ಅವರ ಖಾಸಗಿ ವಸ್ತುಗಳನ್ನು ತೆಗೆಯಲಾರಂಭಿಸಿದರು. ಇವುಗಳನ್ನೆಲ್ಲ ಸಹಿಸಲಾಗದೆ ಆಕ್ಷೇಪವೆತ್ತಿದಾಗ ಇವಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ, ನಾನು ಮಾಡುತ್ತಿರುವುದು ತಮಾಷೆಗೆ, ನನಗೆ ಈಗ 40 ವರ್ಷ, ಆದರೂ ನಾನಿನ್ನೂ ಸಿಂಗಲ್ ಎಂದೆಲ್ಲಾ ಹೇಳಿದನು ಎಂದು ಪುಷ್ಪಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.

ಇವೆಲ್ಲ ನಡೆದ ನಂತರ ಇಬ್ಬರ ಮಧ್ಯೆ ಜಗಳ ನಡೆದಿದೆ. ತರಬೇತುದಾರನನ್ನು ಮನೆಯಿಂದ ಹೊರಹೋಗುವಂತೆ ಪುಷ್ಪಾ ಹೇಳಿದ್ದಾರೆ. ನಂತರ ತಮ್ಮ ಪತಿಗೆ ಕರೆ ಮಾಡಿ ಅವರು ಬಂದ ನಂತರ ಅರ್ಬನ್ ಕ್ಲಾಪ್ ವೆಬ್ ಪೋರ್ಟಲ್ ಗೆ ದೂರು ಸಲ್ಲಿಸಿದರು.

ನಾನು ದೂರು ಸಲ್ಲಿಸಿದ ನಂತರ ಅರ್ಬನ್ ಕ್ಲಾಪ್ ನವರು ನನ್ನ ಜೊತೆ ನಿತ್ಯ ಸಂಪರ್ಕದಲ್ಲಿದ್ದು ಪ್ರಾಥಮಿಕ ತನಿಖೆ ನಡೆಸಿದ ನಂತರ ಪೊಲೀಸರಿಗೆ ದೂರು ನೀಡುವಂತೆ ನನಗೆ ಹೇಳಿದರು. ಈ ಸಂಬಂಧ ಪುಷ್ಪಾ ಕಳೆದ 18ರಂದು ಬೆಳ್ಳಂದೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಐಪಿಸಿ ಸೆಕ್ಷನ್ 354(ಎ)ಯಡಿ ಲೈಂಗಿಕ ಕಿರುಕುಳ ಕೇಸನ್ನು ಶೆಟ್ಟಿ ವಿರುದ್ಧ ದಾಖಲಿಸಲಾಗಿದ್ದು ಅರ್ಬನ್ ಕ್ಲಾಪ್ ಕಂಪೆನಿ ಬಳಿ ಗೋಪಾಲಕೃಷ್ಣ ಶೆಟ್ಟಿ ಬಗ್ಗೆ ಹೆಚ್ಚಿನ ವಿವರ ಕೇಳಲಾಗಿದೆ. ಸದ್ಯದಲ್ಲಿಯೇ ಬಂಧಿಸಲಿದ್ದೇವೆ ಎಂದರು ಪೊಲೀಸ್ ಅಧಿಕಾರಿಯೊಬ್ಬರು.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp