ಗದಗ ಜಿಲ್ಲೆಯ ಈ ಗ್ರಾಮದಲ್ಲಿ ಚಹಾ, ಕಿರಾಣಿ, ಪಾನ್ ಶಾಪ್ ಗಳಲ್ಲಿ ಸಹ ದೊರಕುತ್ತದೆ ಲಿಕ್ಕರ್!

ಭವ್ಯವಾದ ದೇವಾಲಯಗಳು ಮತ್ತು ಹಂತ ಹಂತದ ಬಾವಿಗಳಿಗೆ ಹೆಸರುವಾಸಿಯಾಗಿದ್ದ ಗದಗ ಜಿಲ್ಲೆಯ ...

Published: 21st May 2019 12:00 PM  |   Last Updated: 21st May 2019 11:45 AM   |  A+A-


Representational Image.

ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ಗದಗ: ಭವ್ಯವಾದ ದೇವಾಲಯಗಳು ಮತ್ತು ಬಾವಿಗಳಿಗೆ ಹೆಸರುವಾಸಿಯಾಗಿದ್ದ ಗದಗ ಜಿಲ್ಲೆಯ ದಂಬಲ್ ಗ್ರಾಮ ಇಂದು ಅನೈತಿಕ ಚಟುವಟಿಕೆಗಳಿಂದ ಕುಖ್ಯಾತಿ ಪಡೆಯುತ್ತಿದೆ. ಇಲ್ಲಿನ ಚಹಾ, ಪಾನ್, ಕಿರಾಣಿ ಅಂಗಡಿಗಳು ಮತ್ತು ಹೊಟೇಲ್ ಗಳು ಮಿನಿಬಾರ್ ಗಳಾಗಿ ಬದಲಾಗಿದ್ದು ಇಲ್ಲಿ ಆಲ್ಕೋಹಾಲ್ ಗಳನ್ನು ಉಚಿತವಾಗಿ ಪೂರೈಸಲಾಗುತ್ತಿದೆ.

ಇಲ್ಲಿನ ಚಹಾ ಮಾರುವ ಅಂಗಡಿಯಲ್ಲಿ ಗ್ರಾಹಕರು ಹೋಗಿ ಮದ್ಯ ಬೇಕೆಂದರೆ ಕುಡಿಯಬಹುದು. ಅದರ ಜೊತೆ ಖಾರಕ್ಕೆ ಬಜ್ಜಿ ಮತ್ತು ಚುರುಮುರಿ ಮಂಡಕ್ಕಿಯನ್ನು ತಿನ್ನಬಹುದು. ಅಷ್ಟೇ ಅಲ್ಲ, ಅಲ್ಲಿ ಕೊಡು-ಕೊಳ್ಳುವ ಸೇವೆ ಕೂಡ ನೆರವೇರುತ್ತದೆ.

ಗ್ರಾಮದ ಹಲವು ಅಂಗಡಿಗಳಲ್ಲಿ ಮದ್ಯವನ್ನು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡಿ ಪ್ರತಿದಿನ ಸಾವಿರ ರೂಪಾಯಿಗಳಷ್ಟು ವ್ಯಾಪಾರ ನಡೆಸುತ್ತಾರೆ. ಪೆಟಲೂರು, ಮೇವುಂಡಿ, ಕಡಂಪೂರು, ಜಂಟ್ಲಿ-ಶಿರೂರು, ಹಳ್ಳಿಕೇರಿ ಮತ್ತು ಹೊಸ ದಂಬಲ್ ಗ್ರಾಮಸ್ಥರು ಅಂಗಡಿಗಳಿಗೆ ಹೋಗಿ ಮದ್ಯ ಸೇವಿಸಿ ಬರುತ್ತಾರೆ.

ಹಿಂದೆಲ್ಲಾ ಕೆಲವು ಅಂಗಡಿಗಳಲ್ಲಿ ಮಾತ್ರ ಈ ರೀತಿ ಮದ್ಯ ಮಾರಾಟವಾಗುತ್ತಿತ್ತು. ಆದರೆ ಈಗ ಪಾನ್ ಮತ್ತು ಕಿರಾಣಿ ಅಂಗಡಿಗಳಲ್ಲಿ ಸಹ ಮದ್ಯ ಮಾರಾಟವಾಗುವುದರಿಂದ ಜನರಿಗೆ ಸುಲಭವಾಗಿ ಮದ್ಯ ಸಿಗುತ್ತದೆ. ಕುಡುಕರಿಂದಾಗಿ ಸಭ್ಯ ನಿವಾಸಿಗಳಿಗೆ ಭಾರೀ ತೊಂದರೆಯಾಗುತ್ತಿದೆ.

ಹೊಟೇಲ್ ಗಳಲ್ಲಿ ಮತ್ತು ಕಿರಾಣಿ ಅಂಗಡಿಗಳಲ್ಲಿ ಕೂಡ ಮದ್ಯ ಸಿಗುವುದು ದುಃಖದ ವಿಷಯ. ಎಂಆರ್ ಪಿ ಮಳಿಗೆಗಳಿಂದ ಹೊಟೇಲ್ ಮಾಲೀಕರು ಮದ್ಯಗಳನ್ನು ಖರೀದಿಸಿ ಗದಗ ಜಿಲ್ಲೆಯ ಗ್ರಾಮಗಳ ಅಂಗಡಿಗಳಿಗೆ ಗರಿಷ್ಠ ಬೆಲೆಗೆ ಮಾರಾಟ ಮಾಡುತ್ತಾರೆ. ಎಂಆರ್ ಪಿ ಶಾಪ್ ಗಳಲ್ಲಿ ಲಿಕ್ಕರ್ ಪ್ರತಿ ಪ್ಯಾಕೆಟ್ ಗೆ 100ಕ್ಕೆ ಸಿಕ್ಕಿದರೆ ಅದನ್ನು 140 ರೂಪಾಯಿಗೆ ಮಾರಾಟ ಮಾಡುತ್ತಾರೆ. ಇಲ್ಲಿ ಅಂಗಡಿಗಳು ಮತ್ತು ಹೊಟೇಲ್ ಗಳು ಮಿನಿ ಬಾರ್ ಗಳಾಗಿ ಕಾರ್ಯನಿರ್ವಹಿಸುತ್ತವೆ ಎನ್ನುತ್ತಾರೆ ದಂಬಲ್ ಗ್ರಾಮದ ವಾಸಿ ಭೀಮಪ್ಪ ತಲ್ವರ್.

ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಮತ್ತೊಬ್ಬ ಗ್ರಾಮಸ್ಥ ಕಲಾವತಿ ದೊಡ್ಡಮಾಣಿ. ಮುಂಡರ್ಗಿ ತಾಲ್ಲೂಕಿನ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತದೆ ಎಂಬ ಆರೋಪವನ್ನು ಅಲ್ಲಗಳೆಯುತ್ತಾರೆ. ಇಂತಹ ಯಾವುದೇ ಪ್ರಕರಣ ನಮ್ಮ ಗಮನಕ್ಕೆ ಬಂದಿಲ್ಲ. ನಮಗೆ ಯಾವುದೇ ದೂರುಗಳು ಬಂದಿಲ್ಲ. ನಮಗೆ ದೂರುಗಳು ಬಂದಲ್ಲಿ ನಾವು ಖಂಡಿತಾ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp