ಮರವೇರಿ ಮಾವಿನ ಕಾಯಿ ಕಿತ್ತು ಪತ್ನಿಗೆ ಕೊಟ್ಟ ಗಾಲಿ ಜನಾರ್ದನ ರೆಡ್ಡಿ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮರವೇರಿ ಮಾವಿನ ಕಾಯಿ ಕಿತ್ತು ಪತ್ನಿಗೆ ನೀಡಿರುವ ...

Published: 21st May 2019 12:00 PM  |   Last Updated: 21st May 2019 12:44 PM   |  A+A-


Gali Janardana Reddy

ಗಾಲಿ ಜನಾರ್ದನ ರೆಡ್ಡಿ

Posted By : SUD SUD
Source : Online Desk
ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮರವೇರಿ ಮಾವಿನ ಕಾಯಿ ಕಿತ್ತು ಪತ್ನಿಗೆ ನೀಡಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಖಾಸಗಿ ಕಾರ್ಯಕ್ರಮ ಸಲುವಾಗಿ ಜನಾರ್ದನ ರೆಡ್ಡಿ ಪತ್ನಿ ಸಮೇತ ಆಂಧ್ರಪ್ರದೇಶದಲ್ಲಿರುವ ಮಾವನ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪತ್ನಿ ಅರುಣಾ ಅವರೊಂದಿಗೆ ಮಾವಿನ ತೋಟಕ್ಕೆ ಹೋಗಿ ಮಾವಿನ ಕಾಯಿ ಕಿತ್ತು ಪತ್ನಿಗೆ ಕೊಟ್ಟಿದ್ದಾರೆ. ಈ ಖುಷಿಯ ಕ್ಷಣವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡು ಸಂಭ್ರಮಿಸಿದ್ದಾರೆ.

ಪತ್ನಿಯ ತವರೂರು ಆಂಧ್ರ ಪ್ರದೇಶಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಾವನವರ ತೋಟಕ್ಕೆ ಹೋಗಿ ಮಾವಿನ ಕಾಯಿ ಕಿತ್ತು ಪತ್ನಿಗೆ ಕೊಟ್ಟೆ. ಮರವೇರಿ ಇಳಿದ ತಕ್ಷಣ ಬಾಲ್ಯದ ದಿನಗಳಲ್ಲಿ ಸ್ನೇಹಿತರೊಂದಿಗೆ ಸೇರಿ ಮರವೇರಿ ಆಡುತ್ತಿದ್ದ ಆಟಗಳು ಜೊತೆಯಲ್ಲಿದ್ದ ಸ್ನೇಹಿತರು ನೆನಪಿಗೆ ಬಂದರು ಎಂದು ಬರೆದುಕೊಂಡಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp