ಮಂಡ್ಯ, ಮೈಸೂರು ಜಿಲ್ಲೆಗಳ ರೈತರಿಗೆ ಸಾಲಮನ್ನಾ ಚಿಂತೆ

ಮಂಡ್ಯ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. ಅದಕ್ಕೆ ...

Published: 21st May 2019 12:00 PM  |   Last Updated: 21st May 2019 11:52 AM   |  A+A-


Counting of votes will take place at Government Boys College on May 23

ಮಂಡ್ಯ ಜಿಲ್ಲೆಯಲ್ಲಿ ಮತ ಎಣಿಕೆ ನಡೆಯಲಿರುವ ಸರ್ಕಾರಿ ಬಾಲಕರ ಕಾಲೇಜು

Posted By : SUD SUD
Source : The New Indian Express
ಮೈಸೂರು: ಮಂಡ್ಯ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. ಅದಕ್ಕೆ ಕಾರಣ ಪೂರ್ವ ಮುಂಗಾರು ಕೊರತೆ. ಆದರೆ ಜಿಲ್ಲೆಯ ಗ್ರಾಮಸ್ಥರು ಲೋಕಸಭೆ ಚುನಾವಣೆಯ ಬೆಟ್ಟಿಂಗ್ ದಂಧೆಯಲ್ಲಿ ಮಗ್ನರಾಗಿದ್ದಾರೆ.

ಗ್ರಾಮಗಳ ಅಲ್ಲಲ್ಲಿ ಟೀ ಅಂಗಡಿಗಳು, ಜ್ಯೂಸ್ ಕೇಂದ್ರಗಳು, ದೇವಸ್ಥಾನಗಳಲ್ಲಿ ರೈತರು ನಿನ್ನೆಯಿಂದ ಗುಂಪು ಗುಂಪಾಗಿ ನಿಂತು ಚುನಾವಣೋತ್ತರ ಸಮೀಕ್ಷೆಗಳು, ಚರ್ಚೆಯಲ್ಲಿ ತೊಡಗಿದ್ದಾರೆ. ಹಲವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಪರವಾಗಿ ಮಾತನಾಡುತ್ತಿದ್ದರೆ, ಇನ್ನು ಹಲವರು ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಮೈತ್ರಿ ಸರ್ಕಾರದ ಭವಿಷ್ಯದ ಪರವಾಗಿ ಮಾತನಾಡುತ್ತಿದ್ದಾರೆ.
ಈ ಚರ್ಚೆ, ಮಾತುಕತೆ ತುಮಕೂರಿನವರೆಗೆ ಹೋಗಿ ಜೆಡಿಎಸ್ ವರಿಷ್ಠ ದೇವೇಗೌಡರ ಭವಿಷ್ಯದ ಬಗ್ಗೆಯೂ ನಡೆಯುತ್ತಿದೆ.

ಏಳು ಜನ ಜೆಡಿಎಸ್ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರನ್ನು ಹೊಂದಿರುವ ಮಂಡ್ಯ ಜನತೆಯ ತೀರ್ಪು ರಾಜ್ಯ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ಕೂಡ ನಿರ್ಧರಿಸುತ್ತದೆ. ಇಲ್ಲಿನ ಹಲವು ರೈತರ ಸಾಲ ಇನ್ನೂ ಮನ್ನಾ ಆಗಿಲ್ಲ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜಿಲ್ಲೆಯ ಗ್ರಾಮಗಳ ಕೆಲವು ರೈತರ ಬಳಿ ಹೋಗಿ ಮಾತನಾಡಿಸಿದಾಗ ಅವರ ಮನದಾಳದಲ್ಲಿನ ಬಯಕೆಗಳು ತಿಳಿದುಬಂದವು. ರೈತರ ಸಾಲಮನ್ನಾ ಸಂಪೂರ್ಣವಾಗುವವರೆಗೆ ಮತ್ತು ಹೊಸ ಸಕ್ಕರೆ ಕಾರ್ಖಾನೆ ಯೋಜನೆ ಆರಂಭವಾಗುವವರೆಗೆ ಈ ಸರ್ಕಾರ ಉಳಿಯಬೇಕೆಂಬುದು ನಮ್ಮ ಆಸೆ ಎನ್ನುತ್ತಾರೆ ಯಲಿಯೂರಿನ ರೈತ ಮಾದೇ ಗೌಡ.

ಯಾವುದೇ ಸರ್ಕಾರ ಬಂದರೂ ರೈತರ ಸಾಲಮನ್ನಾ ಆಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ ಮತ್ತೊಬ್ಬ ರೈತ ಕುಂಟನಹಳ್ಳಿಯ ಶಿವಣ್ಣ. ಬಿಜೆಪಿ ಆಡಳಿತವಿರುವ ಸರ್ಕಾರಗಳಲ್ಲಿ ಸಹ ರೈತರ ಸಾಲಮನ್ನಾ ಆಗಿದೆ. ಬಿಜೆಪಿ ರಾಜ್ಯದಲ್ಲಿ ಬಂದರೆ ರೈತರ ಸಾಲಮನ್ನಾ ಆಗುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಅವರು.

ಇನ್ನು ಜಿಲ್ಲೆಯಲ್ಲಿ ಸಿದ್ದರಾಮಯ್ಯ ವಿಷಯ ಕೂಡ ಚರ್ಚೆಗೆ ಬಂತು. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಭಿನ್ನಾಭಿಪ್ರಾಯ ತಲೆದೋರಿದ್ದು ರಾಹುಲ್ ಗಾಂಧಿಯವರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಕಠಿಣ ಎಚ್ಚರಿಕೆ ನೀಡಿದರೂ ಸಹ ರಾಜ್ಯದ ಹಲವು ಕಾಂಗ್ರೆಸ್ ನಾಯಕರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp