ರಾಜ್ಯದಲ್ಲಿ ಮತ್ತೊಂದು ವಿಷಪ್ರಸಾದ ಪ್ರಕರಣ! ಒಬ್ಬ ಸಾವು, 20ಕ್ಕೂಹೆಚ್ಚು ಜನ ಅಸ್ವಸ್ಥ

ಸುಳ್ವಾಡಿ ಮಾರಮ್ಮದೇವಸ್ಥಾನ, ಚಿಂತಾಮಣಿ ಗಂಗಮ್ಮ ದೇವಾಲಯ ವಿಷ ಪ್ರಸಾದ ದುರಂತ ಮಾಸುವ ಮುನ್ನವೇ ರಾಜ್ಯದಲ್ಲಿ ಇನ್ನೊಂದು ಅಂತಹುದೇ ಪ್ರಕರಣ ನಡೆದಿದೆ. ತುಮಕೂರು ಜಿಲ್ಲೆ ಪಾವಗಡ ನಿಡಗಲ್ಲು....

Published: 22nd May 2019 12:00 PM  |   Last Updated: 22nd May 2019 01:38 AM   |  A+A-


One boy died and more than 20 people fall ill after having Prasada in Nidagal Veerabhadraswamy temple at Tumkur

ರಾಜ್ಯದಲ್ಲಿ ಮತ್ತೊಂದು ವಿಷಪ್ರಸಾದ ಪ್ರಕರಣ! ಒಬ್ಬ ಸಾವು, 20ಕ್ಕೂಹೆಚ್ಚು ಜನ ಅಸ್ವಸ್ಥ

Posted By : RHN RHN
Source : Online Desk
ತುಮಕೂರು: ಸುಳ್ವಾಡಿ ಮಾರಮ್ಮದೇವಸ್ಥಾನ, ಚಿಂತಾಮಣಿ ಗಂಗಮ್ಮ ದೇವಾಲಯ ವಿಷ ಪ್ರಸಾದ ದುರಂತ ಮಾಸುವ ಮುನ್ನವೇ ರಾಜ್ಯದಲ್ಲಿ ಇನ್ನೊಂದು ಅಂತಹುದೇ ಪ್ರಕರಣ ನಡೆದಿದೆ. ತುಮಕೂರು ಜಿಲ್ಲೆ ಪಾವಗಡ ನಿಡಗಲ್ಲು ವೀರಭದ್ರಸ್ವಾಮಿ ದೇವಾಲಯದಲ್ಲಿ ಹರಿಸೇವೆ ಪ್ರಸಾದ ಸ್ವೀಕರಿಸಿದ ಓರ್ವ ಸಾವನ್ನಪ್ಪಿದ್ದು ಇಪ್ಪತ್ತಕ್ಕೆ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.

ಹರಿಸೇವೆ ಬಳಿಕದ ಪ್ರಸಾದ ಸೇವಿಸಿದ ಓರ್ವ ಬಾಲಕ ಸಾವನ್ನಪ್ಪಿದ್ದರೆ ಹಲವಾರು ಮಂದಿ ಅಸ್ವಸ್ಥರಾಗಿದ್ದಾರೆ. ಸಾವನ್ನಪ್ಪಿರುವ ಬಾಲಕನನ್ನು ವೀರಭದ್ರ (11) ಎಂದು ಗುರುತಿಸಲಾಗಿದ್ದು ಪ್ರಸಾದ ಸೇವಿಸಿದ ಕೆಲವೇ ಹೊತ್ತಲ್ಲಿ ಆತ ಅಸ್ವಸ್ಥನಾಗಿದ್ದಾನೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ ಎಂದು ಮಾದ್ಯಮಗಳಲ್ಲಿ ವರದಿಯಾಗಿದೆ.

ಸೋಮವಾರ ಸಿರಾ ಮೂಲದ ಕೆಲ ಭಕ್ತರು ವೀರಭದ್ರಸ್ವಾಮಿ ದೇವಾಲಯಕ್ಕೆ ತೆರಳಿದ್ದರು. ಆ ವೇಳೆ ದೇವಾಲಯದಲ್ಲಿ ಅಡಿಗೆಗೆ ನೀರಿಲ್ಲದಿದ್ದ ಕಾರಣ ತೊಟ್ಟಿ ನೀರನ್ನೇ ಬಳಸಿ ಪ್ರಸಾದ ತಯಾರಿಸಲಾಗಿತ್ತು. ಹೀಗೆ ತೊಟ್ಟಿ ನೀರಿನ ಬಳಕೆ ಂಆಡಿದ್ದ ಪ್ರಸಾದ ತಿಂದು ಬಹುತೇಕ ಜನರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.

ಸಧ್ಯ ಅಸ್ವಸ್ಥರಾದ ಭಕ್ತರನ್ನು ಸಿರಾ ಸರ್ಕಾರಿ ಆಸ್ಪತ್ರೆಗೆ ದಾಕಲಿಸಿ ಚಿಕಿತ್ಸೆ ಒದಗಿಸಲಾಗಿದೆ. 
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp