ಮಗನ ಶಾಲಾ ಶುಲ್ಕ ಕಟ್ಟಲು ಡ್ರಾ ಮಾಡಿದ ಹಣ ದೋಚಿದ ಕಳ್ಳರು

ಮಗನ ಶಾಲಾ ಶುಲ್ಕ ಕಟ್ಟಲು ಡ್ರಾ ಮಾಡಿ ಬೈಕ್ ನಲ್ಲಿಟ್ಟಿದ್ದ ಹಣವನ್ನು ಕಳ್ಳರು ಎಗರಿಸಿ ಪರಾರಿಯಾಗಿರುವ ಘಟನೆ ನಿನ್ನೆ ಮಧ್ಯಾಹ್ನ ನಗರದ ಕೆ.ಆರ್.ಪುರಂ ಸಮೀಪದ ‌ಭಟ್ಟರಹಳ್ಳಿ‌ ಉಡುಪಿ ಗಾರ್ಡನ್ ಹೋಟೆಲ್

Published: 22nd May 2019 12:00 PM  |   Last Updated: 22nd May 2019 02:48 AM   |  A+A-


Robbers steal money from man in a broad daylight robbery in Bengaluru

ಮಗನ ಶಾಲಾ ಶುಲ್ಕ ಕಟ್ಟಲು ಡ್ರಾ ಮಾಡಿದ ಹಣ ದೋಚಿದ ಕಳ್ಳರು

Posted By : SBV SBV
Source : UNI
ಬೆಂಗಳೂರು: ಮಗನ ಶಾಲಾ ಶುಲ್ಕ ಕಟ್ಟಲು ಡ್ರಾ ಮಾಡಿ ಬೈಕ್ ನಲ್ಲಿಟ್ಟಿದ್ದ ಹಣವನ್ನು ಕಳ್ಳರು ಎಗರಿಸಿ ಪರಾರಿಯಾಗಿರುವ ಘಟನೆ ನಿನ್ನೆ ಮಧ್ಯಾಹ್ನ ನಗರದ ಕೆ.ಆರ್.ಪುರಂ ಸಮೀಪದ ‌ಭಟ್ಟರಹಳ್ಳಿ‌ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗದಲ್ಲಿ ನಡೆದಿದೆ.

ಶ್ರೀನಾಥ್ ಎಂಬುವವರು ಮಗನ ಶಾಲಾ ಶುಲ್ಕ ಹಾಗೂ ಪುಸ್ತಕ ಖರೀದಿಗಾಗಿ ಆವಲಹಳ್ಳಿಯ ಬ್ಯಾಂಕ್ ಆಫ್ ಇಂಡಿಯಾದಲ್ಲಿ 48 ಸಾವಿರ ರೂ. ಹಣ ಡ್ರಾ ಮಾಡಿದ್ದರು. ನಂತರ ಪತ್ನಿ, ಮಗನೊಂದಿಗೆ ಊಟ ಮಾಡಲು ಓಲ್ಡ್ ಮದ್ರಾಸ್ ರಸ್ತೆಯ ಭಟ್ಟರಹಳ್ಳಿ‌ ಉಡುಪಿ ಗಾರ್ಡನ್ ಹೋಟೆಲ್ ತೆರಳುವಾಗ ಡ್ರಾ ಮಾಡಿದ ಹಣವನ್ನ ತಮ್ಮ ಆಕ್ಟೀವಾ ಬೈಕ್ ನ ಡಿಕ್ಕಿಯಲ್ಲಿ ಇಟ್ಟಿದ್ದಾರೆ. ಈ ಹಣವನ್ನು ಕಳ್ಳರು ಎಗರಿಸಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಆವಲಹಳ್ಳಿ ಬ್ಯಾಂಕ್ ನಿಂದ ಸುಮಾರು 2 ಕಿ.ಮೀ ದೂರದವರೆಗೆ ಶ್ರೀನಾಥ್ ಅವರನ್ನು ಆರೋಪಿಗಳು ಹಿಂಬಾಲಿಸಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ದುಡ್ಡು ಕಳೆದುಕೊಂಡ ದಂಪತಿಗಳು ಕಂಗಾಲಾಗಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp