ಈ ಎರಡು ಕಾಲುವೆಗಳಿಂದ 1,96,132 ಹೆಕ್ಟೇರ್ ಕೃಷಿಭೂಮಿಗೆ ನೀರು ಒದಗಿಸಲಾಗುತ್ತದೆ.,ನವೆಂಬರ್-ಡಿಸೆಂಬರ್ ಸಮಯದಲ್ಲಿ ಕೃಷಿಗಾಗಿ 14 ಟಿಎಂಸಿ ನರು ಹರಿಸಲಾಗುತ್ತದೆ. ಆದರೆ ಇಂದು ಪರಿಸ್ಥಿತಿ ಹದಗೆಟ್ಟಿರುವ ಕಾರಣ, ಕೇವಲ ಕುಡಿಯವ ನೀರಿಗಾಗಿ ಮಾತ್ರ ಬಳಕೆ ಮಾಡಲಾಗುತ್ತಿದೆ,. ಕೇವಲ ಕುಡಿಯುವ ನೀರಿಗಾಗಿ ಬಳಕೆ ಮಾಡಿದರೇ ಜೂನ್ ತಿಂಗಳ ಅಂತ್ಯದವರೆಗೆ ಸಾಕಾಗುತ್ತದೆ. ಜೂನ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಮಳೆಯಾದರೇ ಕುಡಿಯುವ ನೀರಿಗೆ ಸಮಸ್ಯೆಯಾಗುವುದಿಲ್ಲ ಎಂದು ಜಲಾಶಯದ ಎಂಜಿನೀಯರ್ ತಿಳಿಸಿದ್ದಾರೆ.