ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೆದ 157 ಬೋರ್ ವೆಲ್ ಗಳಲ್ಲಿ ನೀರೇ ಇಲ್ಲ!

ಸರ್ಕಾರದ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೆಯಲಾದ ಸುಮಾರು 157 ಬೋರ್ ವೆಲ್ ಗಳು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕಾರವಾರ: ಸರ್ಕಾರದ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೆಯಲಾದ ಸುಮಾರು 157 ಬೋರ್ ವೆಲ್ ಗಳು ವಿಫಲವಾಗಿದ್ದು ಸಾರ್ವಜನಿಕರ ಹಣವನ್ನು ಸರ್ಕಾರ ಪೋಲು ಮಾಡುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಉತ್ತರ ಕನ್ನಡ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈಮರ್ಲ್ಯ ಇಲಾಖೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸುಮಾರು 677 ಬೋರ್ ವೆಲ್ ಗಳನ್ನು ಕೊರೆಸಿತ್ತು. ಅವುಗಳಲ್ಲಿ ಸುಮಾರು 157 ಬೋರ್ ವೆಲ್ ಗಳು ವಿಫಲವಾಗಿವೆ.
ಕಳೆದ 5-6 ವರ್ಷಗಳಿಂದ ಸತತ ಬರಗಾಲದಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿತ್ತು. ಇದರಿಂದಾಗಿ ನದಿ, ತೊರೆಗಳು ಬತ್ತಿ ಹೋಗಿವೆ. ಜಿಲ್ಲೆಯಲ್ಲಿರುವ ಅಂತರ್ಜಲ ಮಟ್ಟ ಕುಸಿದು ಹೋಗಿದೆ. ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಸಹ ನೀರಿನಲ್ಲಿ ಕೊರತೆಯುಂಟಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಮುಂಡಗೋಳು, ಹಳಿಯಾಳ, ಕುಮಟಾ, ಭಟ್ಕಳ ಮತ್ತು ಸಿದ್ದಾಪುರ ತಾಲ್ಲೂಕುಗಳಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಗಿದೆ.
ಈ ಗ್ರಾಮಗಳಿಗೆ ನೀರು ಒದಗಿಸಲು ಟ್ಯಾಂಕರ್ ಗಳ ಟೆಂಡರ್ ಕರೆಯುವಿಕೆಗೆ ಜಿಲ್ಲಾಡಳಿತ ಪ್ರತಿವರ್ಷ ಹಣ ನೀಡುತ್ತದೆ. ನದಿ ಮತ್ತು ನೀರಿನ ಮೂಲದ ಕೊರತೆಯಿರುವ ಸಂದರ್ಭದಲ್ಲಿ ಜಿಲ್ಲಾಡಳಿತ ಖಾಸಗಿ ಬೋರ್ ವೆಲ್ ಗಳಿಂದ ನೀರನ್ನು ಎತ್ತಿ ಜನರಿಗೆ ನೀರು ಒದಗಿಸುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ನೀರು ಬೇಕಾದವರಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತದೆ. ಇದೀಗ ಸರ್ಕಾರ ಬೋರ್ ವೆಲ್ ಕೊರೆಯಲು ಖಾಸಗಿ ಸಂಸ್ಥೆಗಳಿಗೆ ಟೆಂಡರ್ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com