ಆಟೋ ರಿಕ್ಷಾದಲ್ಲಿ ಬಿಟ್ಟಿದ್ದ ಪರ್ಸ್ ನ್ನು ಯುವತಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ

ಆಟೋ ರಿಕ್ಷಾವೊಂದರಲ್ಲಿ ಪರ್ಸ್ ಮರೆತು ಬಿಟ್ಟು ಹೋಗಿದ್ದ ಯುವತಿಗೆ ಆಟೋ ಚಾಲಕ ಪುನಃ ...

Published: 26th May 2019 12:00 PM  |   Last Updated: 26th May 2019 02:35 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : Online Desk
ಬೆಂಗಳೂರು: ಆಟೋ ರಿಕ್ಷಾವೊಂದರಲ್ಲಿ ಪರ್ಸ್ ಮರೆತು ಬಿಟ್ಟು ಹೋಗಿದ್ದ ಯುವತಿಗೆ ಆಟೋ ಚಾಲಕ ಪುನಃ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಶ್ರೀಕಂಠಯ್ಯ ಎಂಬ ಆಟೋ ಚಾಲಕರು ಮಹದೇವಪುರ ಹತ್ತಿರದ ಮಾಲ್ ನಿಂದ ಯುವತಿಯೊಬ್ಬರು ನಿನ್ನೆ ಹತ್ತಿ ಒಂದು ಕಿಲೋ ಮೀಟರ್ ದೂರದಲ್ಲಿ ಇಳಿದುಹೋಗಿದ್ದರು. ಆದರೆ ಈ ವೇಳೆ ಅವರು ತಮ್ಮ ಪರ್ಸನ್ನು ಆಟೋದಲ್ಲೇ ಮರೆತು ಹೋಗಿದ್ದರು. ಇದನ್ನು ಗಮನಿಸಿದ್ದ ಆಟೋ ಚಾಲಕ ಶ್ರೀಕಂಠಯ್ಯ ಅದನ್ನು ನೇರವಾಗಿ ಪೊಲೀಸ್ ಆಯುಕ್ತರ ಕಚೇರಿಗೆ ಒಪ್ಪಿಸಿದ್ದರು.

ಪೊಲೀಸರು ಅದನ್ನು ಪರಿಶೀಲಿಸಿದಾಗ, ಅದರಲ್ಲಿ 4 ಎಟಿಎಂ ಕಾರ್ಡ್, 4 ಶಾಪಿಂಗ್ ಕಾರ್ಡ್, ಮೂರು ಗುರುತಿನ ಚೀಟಿ ಇತ್ತು. ಯುವತಿಯ ಹೆಸರು ಭಕ್ತಿಮಂತ್ರಿ ಎಂದು ತಿಳಿದುಬಂದಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp