ಬೆಂಗಳೂರು: ಸ್ನೇಹಿತರಿಂದಲೇ ಮಾಜಿ ರೌಡಿಗೆ ಚಾಕು ಇರುದು ಬರ್ಬರ ಕೊಲೆ

ಮದ್ಯದ ನಶೆಯಲ್ಲಿರುವಾಗಲೇ ಮಾಜಿ ರೌಡಿಯೊಬ್ಬನನ್ನು ಆತನ ಸ್ನೇಹಿತರೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬ್ವೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.

Published: 26th May 2019 12:00 PM  |   Last Updated: 26th May 2019 11:19 AM   |  A+A-


Bengaluru: 5 friends stab history-sheeter to death, cops on prowl

ಬೆಂಗಳೂರು: ಸ್ನೇಹಿತರಿಂದಲೇ ಮಾಜಿ ರೌಡಿಗೆ ಚಾಕು ಇರುದು ಬರ್ಬರ ಕೊಲೆ

Posted By : RHN RHN
Source : The New Indian Express
ಬೆಂಗಳೂರು: ಮದ್ಯದ ನಶೆಯಲ್ಲಿರುವಾಗಲೇ ಮಾಜಿ ರೌಡಿಯೊಬ್ಬನನ್ನು ಆತನ ಸ್ನೇಹಿತರೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬ್ವೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ನಡೆದ ಘಟನೆಯಲ್ಲಿ ಹಳೆಯ ರೌಡಿ ವಿಜಯ್ ಅಲಿಯಾಸ್ ವಿಜಿ (29) ಕೊಲೆಯಾಗಿದ್ದಾನೆ. ಹತ್ಯೆಗೆ ಕಾರಣಗಳೇನು ಎಂಬುದು ಇನ್ನೂ ತಿಳಿದಿಲ್ಲ.ಗೊರಗುಂಟೆಪಾಳ್ಯ ನಿವಾಸಿಯಾದ ವಿಜಿ ತನ್ನ ಕುಟುಂಬದೊಡನೆ ವಾಸವಿದ್ದನೆನ್ನಲಾಗಿದೆ.

ರಾತ್ರಿ ಊಟಕ್ಕೆಂದು ವಿಜಯ್ ತನ್ನ ಮೂರು-ನಾಲ್ಕು ಸ್ನೇಹಿತರೊಂದಿಗೆ ಕಾರ್ ನಲ್ಲಿ ಹೋಟೆಲ್ ಗೆ ತೆರಳಿದ್ದಾನೆ. ಆ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಕಾರಿನಲ್ಲಿದ್ದಂತೆಯೇ ಜಗಳ ತಾರಕಕ್ಕೇರಿದ್ದು ಚಾಕುವಿನಿಂದ ವಿಜಯ್ ಕುತ್ತಿಗೆಗೆ ಇರಿದಿದ್ದಾರೆ.

ಬಳಿಕ ಕಾರಿನಿಂದಿಳಿದು ಅವರಿಂದ ತಪ್ಪಿಸಿಕೊಂಡು ಓಡಿದ್ದ ವಿಜಯ್ ನನ್ನು ಹಿಂಬಾಲಿಸಿದ ಕೊಲೆಗಡುಕರು ಯಶವಂತಪುರ ಮಸೀದಿ ಬಳಿಯ ಬಜಾಜ್ ಸರ್ಕಲ್ ಸಮೀಪ ಮತ್ತೆ ಕುತ್ತಿಗೆಗೆ ಬಲವಾಗಿ ಚಾಕು ಚುಚ್ಚಿ ಹತ್ಯೆ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಯಶವಂತಪುರ ಪೋಲೀಸರು ಆಗಮಿಸಿ ಪರಿಶೀಲಿಸಿದ್ದು ಶವವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಕೊಲೆಗಡುಕರ ಪತ್ತೆಗೆ ವಿಶೇಷ ತಂಡ ರಚನೆಯಾಗಿದ್ದು ಳಿಯ ಹಿಂದಿನ ಉದ್ದೇಶವನ್ನು ಪೊಲೀಸರು ಇನ್ನೂ ತಿಳಿಯಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.ಪ್ರಾಥಮಿಕ ತನಿಖೆಯಿಂದ ವಿಜಯ್ ಕಿರಿಕ್ ಮಂಜ ಜಗಳವಾಗಿದ್ದು ಅದೇ ಕಾರಣಕ್ಕೆ ಮುಖ್ಯ ಆರೋಪಿ ಮಂಜನೇ ಕೊಲೆ ಮಾಡಿದ್ದಾನೀಂದು ತಿಳಿದುಬಂದಿದೆ.
Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp