ದೇವೇಗೌಡ ಕುಟುಂಬದ ಕುರಿತು 'ಸುಳ್ಳು ಸುದ್ದಿ': ಕನ್ನಡ ದಿನಪತ್ರಿಕೆ ಸಂಪಾದಕರ ವಿರುದ್ಧ ಎಫ್ಐಆರ್

ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಕುಟುಂಬದ ಕುರಿತು ಸುಳ್ಳು ಸುದ್ದಿ ಪ್ರಕಟಿಸಿದ ಆರೋಪ ಮೇರೆಗೆ ಕನ್ನಡ ದಿನಪತ್ರಿಕೆ ಸಂಪಾದಕ ಹಾಗೂ ಸಂಪಾದಕೀಯ ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಕುಟುಂಬದ ಕುರಿತು ಸುಳ್ಳು ಸುದ್ದಿ ಪ್ರಕಟಿಸಿದ ಆರೋಪ ಮೇರೆಗೆ ಕನ್ನಡ ದಿನಪತ್ರಿಕೆ ಸಂಪಾದಕ ಹಾಗೂ ಸಂಪಾದಕೀಯ ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ.

ದೇವೇಗೌಡ ಹಾಗೂ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ವಿಶ್ವವಾಣಿ ಪತ್ರಿಕೆ ಶನಿವಾರ ಸುಳ್ಳು ವರದಿಯನ್ನು ಪ್ರಕಟಿತ್ತು ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಸ್. ಪಿ. ಪ್ರದೀಪ್ ಕುಮಾರ್  ದೂರು ಸಲ್ಲಿಸಿದ್ದಾರೆ.

ವಿಶ್ವವಾಣಿಯ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಸಂಪಾದಕೀಯ ಸಿಬ್ಬಂದಿ ವಿರುದ್ಧ ಐಪಿಸಿ ಸೆಕ್ಷನ್  420 (ವಂಚನೆ ) 499 ( ಮಾನನಷ್ಟ ) ಹಾಗೂ 406 ( ನಂಬಿಕೆಯ ಅಪರಾಧ ಉಲ್ಲಂಘನೆ)   ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ  ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಮಂಡ್ಯದಲ್ಲಿ ಮಹಿಳೆ ಎದುರು ಸೋಲಲು ನೀವೆ ಹೊಣೆ ಎಂದು ಆರೋಪಿಸಿ ನಿಖಿಲ್ ಕುಮಾರಸ್ವಾಮಿ, ದೇವೇಗೌಡರ ಜೊತೆಗೆ ಜಗಳ ಮಾಡಿದ್ದಾರೆ ಎಂದು ಸುಳ್ಳು ವರದಿ ಪ್ರಕಟಿಸಲಾಗಿತ್ತು ಎಂದು ಕುಮಾರ್ ಹೇಳಿದ್ದಾರೆ.

ಎಫ್ ಐಆರ್ ಕುರಿತಂತೆ ಪ್ರತಿಕ್ರಿಯಿಸಿರುವ ವಿಶ್ವೇಶ್ವರ್ ಭಟ್,  ಮೂಲ ಆಧಾರದ ಮೇಲೆ ವರದಿ ಪ್ರಕಟಿಸಲಾಗಿದೆ.  ಈ ಬಗ್ಗೆ ಯಾರಾದರೂ ಯಾವುದೇ ಆಕ್ಷೇಪಣೆ ಹೊಂದಿದ್ದಲ್ಲಿ, ಅವರು ಸ್ಪಷ್ಟನೆಗೆ ಆದೇಶ ಹೊರಡಿಸಬಹುದಿತ್ತು. ಕಳೆದ 19 ವರ್ಷಗಳಿಂದಲೂ ಸಂಪಾದಕನಾಗಿ ಕೆಲಸ ಮಾಡುತ್ತಿದ್ದೇನೆ. ಇಂತಹ ಘಟನೆ ಯಾವಾಗಲೂ ನಡೆದಿರಲಿಲ್ಲ ಎಂದು ಹೇಳಿದ್ದಾರೆ.

ಹೆಚ್ಚಿನ ರೀತಿಯ ಮಾನನಷ್ಟ ಮೊಕದ್ದಮೆ ದಾಖಲಿಸಬಹುದು. ಆದರೆ, ಉದ್ದೇಶಪೂರ್ವಕವಾಗಿ ಎಫ್ ಐಆರ್ ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ಎದುರಿಸುವುದಾಗಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com