ಸಿಲಿಕಾನ್ ಸಿಟಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕ ಸಾವು

ಶನಿವಾರ-ಭಾನುವಾರ ರಾತ್ರಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳುರು: ಶನಿವಾರ-ಭಾನುವಾರ ರಾತ್ರಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದೆ. ಈ ವೇಳೆ ಮನೆ ಮೇಲೆ ಬಿದ್ದಿದ್ದ ತೆಂಗಿನ ಗರಿಗಳನ್ನು ತೆರವು ಮಾಡಲು ಹೋದ  ಕಾರ್ಮಿಕ ಸತೀಶ್ ಶ್ (32) ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾರೆ.
ಶನಿವಾರ, ಭಾನುವಾರಗಳೆರಡೂ ದಿನ ಬೆಂಗಳೂರಿನಲ್ಲಿ ರಾತ್ರಿ ವೇಳೆ ಧಾರಾಕಾರ ಮಳೆಯಾಗಿದೆ. ಮಳೆಯಿಂದಾಗಿ ಹಲವೆಡೆ ಮರಗಳು ಉರುಳಿದ್ದು ಅವುಗಳ ತೆರವು ಕಾರ್ಯಾಚರಣೆ ಇಂದೂ ಸಹ ಮುಂದುವರಿದಿದೆ.
ದಿನಗೂಲಿ ಕಾರ್ಮಿಕರಾಗಿದ್ದ ಸತೀಶ್ ಕಾಕ್ಸ್ ಟೌನ್ ಸಮೀಪ ರಾಮಚಂದ್ರಪ್ಪ ಲೇಔಟ್ ನಲ್ಲಿ ತಾಯಿಯೊಡನೆ ವಾಸವಿದ್ದರು. ಮನೆ ಪಕ್ಕ ಇದ್ದ ತೆಂಗಿನಮರದ ಗರಿಗಳು ರಾತ್ರಿ ಮಳೆಗೆ ವಿದ್ಯುತ್ ತಂತಿ ಮೇಲೆ ಬಿದ್ದಿತ್ತು.ಆಗ ವಿದ್ಯುತ್ ತಂತಿ ಸಘಿತ ತೆಂಗಿನ ಗರಿಗಳು ಮನೆ ಮೇಲೆ ಬಿದ್ದಿದ್ದನ್ನು ಕಂಡ ಸತೀಶ್ ಅವುಗಳನ್ನು ತೆರವುಗೊಳಿಸಲು ಹೋಗಿದ್ದಾರೆ. ಆದರೆ ಆವೇಳೆಗೆ ಗರಿಗಳ ನಡುವಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ ಸತೀಶ್ ವಿದ್ಯುತ್ ಸ್ಪರ್ಶದಿಂದ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶನಿವಾರ ನಡೆದ ಘಟನಾ ಮಾಹಿತಿ ಪಡೆದ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಭಾನುವಾರ ಕಾರ್ಮಿಕ ಸತೀಶ್ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಲ್ಲದೆ ಐದು ಲಕ್ಷ ಪರಿಹಾರ ನೀಡುವುದಾಗಿ ಭರವಸೆ ಇತ್ತರು.
ಇತ್ತೀಚೆಗೆ ಬೆಸ್ಕಾಂ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು ಕಳೆದ ತಿಂಗಳಲ್ಲಿ ಇಬ್ಬರು ಬಾಲಕರು ಸಹ ವಿದ್ಯುದಾಘಾತಕ್ಕೆ ಬಲಿಯಾದದ್ದನ್ನು ನಾವಿಲ್ಲಿ ಸ್ಮರಿಸಬಹುದು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com