ಬೆಂಗಳೂರಲ್ಲಿ ಕೇಂದ್ರೀಕೃತ ಪ್ರಾಧಿಕಾರ ರಚನೆಗೆ ಸದಾನಂದ ಗೌಡ ಸಲಹೆ

ನಗರದ ನಾಗರಿಕ ಸೌಲಭ್ಯಗಳ ಕುಂದು ಕೊರತೆಯನ್ನು ಹದ್ದು ಬಸ್ತಿನಲ್ಲಿಡಲು, ಬೆಳೆಯುತ್ತಿರುವ ...
ಡಿ ವಿ ಸದಾನಂದ ಗೌಡ
ಡಿ ವಿ ಸದಾನಂದ ಗೌಡ
ಬೆಂಗಳೂರು: ನಗರದ ನಾಗರಿಕ ಸೌಲಭ್ಯಗಳ ಕುಂದು ಕೊರತೆಯನ್ನು ಹದ್ದು ಬಸ್ತಿನಲ್ಲಿಡಲು, ಬೆಳೆಯುತ್ತಿರುವ ಬೆಂಗಳೂರು ನಗರದ ನಾಗರಿಕರಿಗೆ ಕ್ಲಿಷ್ಟ ಸಮಯದಲ್ಲಿ ಬೇಕಾದ ಸೌಲಭ್ಯಗಳನ್ನು ಜಾರಿಗೊಳಿಸಲು ಕೇಂದ್ರೀಕೃತ ಪ್ರಾಧಿಕಾರವೊಂದರ ರಚನೆ ಅತ್ಯಂತ ಪ್ರಸ್ತುತ ಮತ್ತು ಅತ್ಯಗತ್ಯ ಎಂದು ಸಂಸದ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜನರ ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರೀಕೃತ ಪ್ರಾಧಿಕಾರ ರಚನೆಗೆ ಪಕ್ಷಾತೀತ ನಿರ್ಣಯ ಬೇಕು. ಚುನಾಯಿತ ಜನಪ್ರತಿನಿಧಿಗಳು, ಸಮರ್ಪಕ ಅಧಿಕಾರಿಗಳು ಮತ್ತು ಕೆಲ ನಾಗರಿಕರನ್ನು ಒಳಗೊಂಡ ಈ ಪ್ರಾಧಿಕಾರ, ನಿಯಮಾನುಸಾರ ರಚನೆಯಾಗಿ ತನ್ನ ಪರಿಮಿತಿಯಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರ ಬೆಂಗಳೂರನ್ನು ನಾಗರಿಕ ಸೌಲಭ್ಯದಲ್ಲಿ ವಿಶ್ವ ದರ್ಜೆಗೆ ಏರಿಸಲು ಸಾಧ್ಯ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com