ಲಾಠಿಯನ್ನೇ ಕೊಳಲನ್ನಾಗಿ ಮಾರ್ಪಡಿಸಿದ ಪೊಲೀಸ್ ಹೆಡ್ ಕಾನ್ಸ್ ಟೇಬಲ್!

ಹುಬ್ಬಳ್ಳಿಯ ಪೊಲೀಸ್ ಹೆಡೆ ಕಾನ್ಸ್ ಟೇಬಲ್ ಚಂದ್ರಕಾಂತ್ ಹುಟ್ಗಿ ತನ್ನ ಲಾಠಿಯನ್ನೇ ಕೊಳಲನ್ನಾಗಿ ಮಾಡಿ ಸುಂದರವಾಗಿ ನುಡಿಸುತ್ತಾರೆ. ಅವರನ್ನು ಬೆಂಗಳೂರಿನ ತಮ್ಮ ಕಚೇರಿಗೆ ಕರೆಸಿಕೊಂಡ ಭಾಸ್ಕರ ರಾವ್ , ತಮ್ಮ ಸಿಬ್ಬಂದಿಯೊಂದಿಗೆ ಕೊಳಲಿನ ಗಾಯನ ಕೇಳಿ ಖುಷಿಪಟ್ಟಿದ್ದಾರೆ.
ಎಡಿಜಿಪಿ ಕಚೇರಿಯಲ್ಲಿ ಕೊಳಲು ನುಡಿಸುತ್ತಿರುವ ಪೊಲೀಸ್ ಹೆಡ್ ಕಾನ್ಸ್ ಟೇಬಲ್
ಎಡಿಜಿಪಿ ಕಚೇರಿಯಲ್ಲಿ ಕೊಳಲು ನುಡಿಸುತ್ತಿರುವ ಪೊಲೀಸ್ ಹೆಡ್ ಕಾನ್ಸ್ ಟೇಬಲ್

ಬೆಂಗಳೂರು: ಕಲೆ ಎನ್ನುವುದು ದೇವರು ಕೊಟ್ಟ ಉಡುಗೊರೆ.  ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಕಲೆ ಇರುತ್ತದೆ . ಆದರೆ, ಎಷ್ಟೋ ಮಂದಿಗೆ ತಮ್ಮೊಳಗಿನ ಕಲೆ ಗೊತ್ತಿರಲಿಲ್ಲ, ಗೊತ್ತಿದ್ದರೂ ಪ್ರೋತ್ಸಾಹ ಸಿಕ್ಕಿರುವುದಿಲ್ಲ. ಇಂತಹದ್ದೇ ಕಲೆಯನ್ನು ಹೊಂದಿದ್ದ  ಪೊಲೀಸ್ ಸಿಬ್ಬಂದಿಯೊಬ್ಬರನ್ನು  ಪ್ರೋತ್ಸಾಹಿಸುವ  ಕೆಲಸವನ್ನು ಎಡಿಜಿಪಿ ಭಾಸ್ಕರರಾವ್  ಮಾಡಿದ್ದಾರೆ.

ಹುಬ್ಬಳ್ಳಿಯ ಪೊಲೀಸ್ ಹೆಡೆ ಕಾನ್ಸ್ ಟೇಬಲ್ ಚಂದ್ರಕಾಂತ್ ಹುಟ್ಗಿ ತನ್ನ ಲಾಠಿಯನ್ನೇ ಕೊಳಲನ್ನಾಗಿ ಮಾಡಿ ಸುಂದರವಾಗಿ ನುಡಿಸುತ್ತಾರೆ. ಅವರನ್ನು ಬೆಂಗಳೂರಿನ ತಮ್ಮ ಕಚೇರಿಗೆ  ಕರೆಸಿಕೊಂಡ ಭಾಸ್ಕರ ರಾವ್ ,  ತಮ್ಮ ಸಿಬ್ಬಂದಿಯೊಂದಿಗೆ ಕೊಳಲಿನ ಗಾಯನ ಕೇಳಿ ಖುಷಿಪಟ್ಟಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಹಿನ್ನೆಲೆಯಲ್ಲಿ ತಮ್ಮಗೆ ನೀಡಿರುವ ಲಾಠಿಯನ್ನೇ ಕೊಳಲಾಗಿ ಮಾರ್ಪಡಿಸಿಕೊಂಡ ಚಂದ್ರಕಾಂತ್ ಹುಟ್ಗಿ ಅವರ ಕಲೆ ಕಂಡು ಎಲ್ಲರೂ ಬೆರಗಾದರಲ್ಲದೆ, ಅವರನ್ನು ಪ್ರೋತ್ಸಾಹಿಸಿದರು.
ಚಂದ್ರಕಾಂತ್ ಹುಟ್ಗಿ ಅವರನ್ನು ಎಡಿಜಿಪಿ ಭಾಸ್ಕರ್ ರಾವ್ ಟ್ವೀಟರ್ ಮೂಲಕ ಅಭಿನಂದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com