ಕೋಲಾರ: ಹೆರಿಗೆ ನೋವಿಂದ ಆಸ್ಪತ್ರೆ ನೆಲದಲ್ಲೇ 4 ಗಂಟೆ ನರಳಿದ ಮಹಿಳೆ, ವೀಡಿಯೋ ವೈರಲ್

ಚಿನ್ನದ ನಾಡು ಕೆಜಿಎಫ್ ನ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬಳು ಹೆರಿಗೆ ನೋವಿನಿಂಡ ಬಳಲುತ್ತಿದ್ದರೂ ಸೂಕ್ತ ಸಮಯಕ್ಕೆ ವೈದ್ಯರು ಶುಶ್ರೂಷೆ ಮಾಡದ ಕಾರಣ ತಾಯಿಯೊಬ್ಬಳು ತನ್ನ ಮಗುವನ್ನು ಕಳೆದುಕೊಂಡ ಅಮಾನವೀಯ ಘಟನೆ ನಡೆದಿದೆ.

Published: 29th May 2019 12:00 PM  |   Last Updated: 29th May 2019 02:18 AM   |  A+A-


Mother lost his baby after did not get treatment for labor pain at Kola

ಅಮಾನವೀಯ ಘಟನೆ! ಹೆರಿಗೆ ನೋವಿಂದ ಆಸ್ಪತ್ರೆ ನೆಲದಲ್ಲೇ 4 ಗಂಟೆ ನರಳಿದ ಮಹಿಳೆ, ವೀಡಿಯೋ ವೈರಲ್

Posted By : RHN RHN
Source : Online Desk
ಕೋಲಾರ: ಚಿನ್ನದ ನಾಡು ಕೆಜಿಎಫ್ ನ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬಳು ಹೆರಿಗೆ ನೋವಿನಿಂಡ ಬಳಲುತ್ತಿದ್ದರೂ ಸೂಕ್ತ ಸಮಯಕ್ಕೆ ವೈದ್ಯರು ಶುಶ್ರೂಷೆ ಮಾಡದ ಕಾರಣ  ತಾಯಿಯೊಬ್ಬಳು ತನ್ನ ಮಗುವನ್ನು ಕಳೆದುಕೊಂಡ ಅಮಾನವೀಯ ಘಟನೆ ನಡೆದಿದೆ. ಗರ್ಭಿಣಿ ಮಹಿಳೆ ಹೆರಿಗೆ ನೋವಿನಿಂದ ಒದ್ದಾಡುತ್ತಿರುವ ವೀಡಿಯೋ ದೃಶ್ಯಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಕೆಜಿಎಫ್  8ನೇ ಬ್ಲಾಕ್‍ನ ರಿಯಾಜ್ ಎಂಬವರ ಪತ್ನಿ ಸಮೀನಾ ಅವರಿಗೆ ಸೋಮವ್ರ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿದೆ. ಆಕೆಯನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿ ಆಕೆ ಹೆರಿಗೆ ನೋವಿನಿಂದ ನರಳಾಡಿದ್ದರೂ ಸಹ ವೈದ್ಯರಾಗಲಿ, ಸಿಬ್ಬಂದಿಗಳಾಗಲಿ ಹತ್ತಿರ ಸುಳಿದಿಲ್ಲ. ಸುಮಾರು ನಾಲ್ಕು ಗಂಟೆಗಳ ಕಾಲ ಮಹಿಳೆ ಹೀಗೆ ನೋವಿನಿಂದ ಒದ್ದಾಡಿದ್ದಾರೆ. ವೈದ್ಯರು ಮಾತ್ರ ಯಾವ ಕ್ರಮ ಕೈಗೊಳ್ಳದೆ ಚಿಕಿತ್ಸೆ ಒದಗಿಸದೆ ಅಹಂಕಾರ ಮೆರೆದಿದ್ದಾರೆ.

ಕಡೆಗೆ ಸಂಜೆ ಐದರ ವೇಳೆಗೆ ಆಕೆಯನ್ನು ಕೋಲಾರ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿದೆ. ಆದರೆ ಸಮಯಕ್ಕೆ ಚಿಕಿತ್ಸೆ ದೊರಕದ ಕಾರಣ ಗಂಡು ಮಗು ಹೊಟ್ಟೆಯಲ್ಲೇ ಮೃತಪಟ್ಟಿದೆ.

ತಮ್ಮ ಮಗಳಿಗೆ ಆದ ಸ್ಥಿತಿ ಇನ್ನಾರಿಗೂ ಆಗಬಾರದು, ಸರ್ಕಾರ ಈ ತಕ್ಷಣ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ಸೂಕ್ತ ವೈದ್ಯಕೀಯ ಸಿಬ್ಬಂದಿಗಳ ನೇಮಕ ಮಾಡಬೇಕು ಎಂದಿರುವ ಸಮೀನಾ ಪೋಷಕರು ಆಸ್ಪತ್ರೆ ಸಿಬ್ಬಂದಿಗಳ ವರ್ತನೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

7 ತಿಂಗಳ ಗರ್ಭಿಣಿಯಾಗಿದ್ದ ಸಮೀನಾ ಹೆರಿಗೆ ನೋಈವಿನಿಂದ ನರಳಾಡುತ್ತಿರುವ ವೀಡಿಯೋ ನಿನ್ನೆ ಸಂಜೆಯಿಂದ ಜಾಅತಾಣದಲ್ಲಿ ಫುಲ್ ವೈರಲ್ ಆಗಿದೆ.
ಈ ನಡುವೆ ಕೋಲಾರ ನೂತನ ಸಂಸದ ಎನ್. ಮುನಿಸ್ವಾಮಿ ಸಮೀನಾ ಕುಟುಂಬವನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. 
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp