ಗರ್ಭಿಣಿ ಮಹಿಳಾ ಪೊಲೀಸ್ ಪೇದೆ ಆತ್ಮಹತ್ಯೆ

ಗರ್ಭಿಣಿ ಮಹಿಳಾ ಪೊಲೀಸ್ ಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಸಂಭಾಪೂರ ರಸ್ತೆಗೆ ಹೊಂದಿಕೊಂಡಿರುವ ಪೊಲೀಸ್ ಕ್ವಾಟರ್ಸ್​ನಲ್ಲಿ ಶುಕ್ರವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗದಗ: ಗರ್ಭಿಣಿ ಮಹಿಳಾ ಪೊಲೀಸ್ ಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಸಂಭಾಪೂರ ರಸ್ತೆಗೆ ಹೊಂದಿಕೊಂಡಿರುವ ಪೊಲೀಸ್ ಕ್ವಾಟರ್ಸ್​ನಲ್ಲಿ ಶುಕ್ರವಾರ ನಡೆದಿದೆ.

ಎರಡು ತಿಂಗಳ ಗರ್ಭಿಣಿ ಸೀಮಾ ಶಿವನಗೌಡರ (25) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಇವರು ಕಳೆದ ವರ್ಷ ಗದಗ ಜಿಲ್ಲೆಯ ಎಲಿಶಿರೂರು ಮೂಲದ ಕುಮಾರ್​ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕುಮಾರ್​ ಸವಣೂರು ಕೋರ್ಟ್​ನಲ್ಲಿ ಪ್ರಾಸೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಗದಗ ಬೆಟಗೇರಿ ಬಡಾವಣೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com