9 ಗ್ರಾಮಗಳಿಗೆ ಒಬ್ಬನೇ ಪೌರಕಾರ್ಮಿಕ: ವೇತನ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ

9 ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಅಧಿಕಾರಿಗಳು ಒಬ್ಬ ಕಾರ್ಮಿಕನನ್ನು ನೇಮಿಸಿದ್ದು, ವೇತನ ನೀಡುವಲ್ಲಿ ಅಧಿಕಾರಿಗಳು ವಹಿಸುತ್ತಿರುವ ನಿರ್ಲಕ್ಷ್ಯ ತಮ್ಮ ಮಕ್ಕಳ ಕನಸ್ಸನ್ನು ನನಸು ಮಾಡಲು ದಿನವಿಡೀ ಕಷ್ಟ ಪಡುವ ಈ ಪೌರಕಾರ್ಮಿಕನನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. 

Published: 04th November 2019 12:09 PM  |   Last Updated: 04th November 2019 12:09 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: 9 ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಅಧಿಕಾರಿಗಳು ಒಬ್ಬ ಕಾರ್ಮಿಕನನ್ನು ನೇಮಿಸಿದ್ದು, ವೇತನ ನೀಡುವಲ್ಲಿ ಅಧಿಕಾರಿಗಳು ವಹಿಸುತ್ತಿರುವ ನಿರ್ಲಕ್ಷ್ಯ ತಮ್ಮ ಮಕ್ಕಳ ಕನಸ್ಸನ್ನು ನನಸು ಮಾಡಲು ದಿನವಿಡೀ ಕಷ್ಟ ಪಡುವ ಈ ಪೌರಕಾರ್ಮಿಕನನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. 

ಚಾಮರಾಜನಗರ ಜಿಲ್ಲೆಯ ಗೌಡಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಪೌರಕಾರ್ಮಿಕರಾಗಿರುವ ಮಹೇಂದ್ರ ಅವರ ಕಷ್ಟ ಹೇಳತೀರದಾಗಿದೆ. ಗ್ರಾಮಗಳಲ್ಲಿ 7 ವಾಟರ್ ಮ್ಯಾನ್'ಗಳು, ಇಬ್ಬರು ಬಿಲ್ ಸಂಗ್ರಹಕಾರರಿದ್ದಾರೆ. ಆದರೆ, 9 ಗ್ರಾಮಗಳಿಗೆ ಮಹೇಂದ್ರ ಒಬ್ಬರನ್ನೇ ಪೌರಕಾರ್ಮಿಕರನ್ನಾಗಿ ನೇಮಿಸಲಾಗಿದೆ. 

9 ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವ ಮಹೇಂದ್ರ ಅವರಿಗೆ ವೇತನ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದು. ಇದರಿಂದ ತಮ್ಮ ಮಕ್ಕಳ ಕನಸು ನನಸು ಮಾಡಲು ಹೊರಟಿರುವ ಮಹೇಂದ್ರ ಅವರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. 

ಮಾಡಿದ ಕೆಲಸಕ್ಕೆ ಸ್ಥಳೀಯ ಅಧಿಕಾರಿಗಳು ಸೂಕ್ತ ರೀತಿಯ ವೇತನ ಹಾಗೂ ಗೌರವಗಳನ್ನು ನೀಡುತ್ತಿಲ್ಲ. ಪ್ರತೀ ಗ್ರಾಮಕ್ಕೂ ಬಸ್ ನಲ್ಲಿಯೇ ತೆರಳಿ ಸ್ವಚ್ಛಗೊಳಿಸುತ್ತಿದ್ದೇನೆ. ಬಸ್ ನಲ್ಲಿ ತೆರಳಲು ಆಗುವಂತಹ ವೆಚ್ಚವನ್ನು ಸರ್ಕಾರ ನೀಡುತ್ತಿಲ್ಲ. ಪ್ರತೀನಿತ್ಯ ಮೂರು, ಮೂರು ಗ್ರಾಮಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಗ್ರಾಮಗಳನ್ನು ಸ್ವಚ್ಛ ಮಾಡುತ್ತಿಲ್ಲ ಎಂದು ಸಾಕಷ್ಟು ಮಂದಿ ನನ್ನ ವಿರುದ್ಧ ದೂರು ನೀಡುತ್ತಾರೆ. ಒಂದೇ ದಿನಗಲ್ಲಿ 9 ಗ್ರಾಮಗಳನ್ನು ಸ್ವಚ್ಛಗೊಳಿಸುವುದು ಸಾಧ್ಯವಾಗುವುದಿಲ್ಲ. ವೇತನಕ್ಕಾಗಿ ಪ್ರತೀ ಬಾರಿ ಹೋರಾಟ ಮಾಡಬೇಕು. ಅಧಿಕಾರಿಗಳೊಂದಿಗೆ ಮಾತನಾಡಲು ಮುಂದಾದರೆ, ಬೆಂಗಳೂರಿಗೆ ಹೋಗಿ ಉನ್ನತಾಧಿಕಾರಿಗಳೊಂದಿಗೆ ಮಾತನಾಡಿ ಎಂದು ಹೇಳುತ್ತಾರೆ ಎಂದು ಹೇಳಿದ್ದಾರೆ. 

ಈ ನಡುವೆ ರಾಜ್ಯ ಪೌರಕಾರ್ಮಿಕ ಸಮಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಅವರಿಗೆ ಮನವಿ ಮಾಡಿಕೊಂಡಿದ್ದು, ಗ್ರಾಮಗಳಲ್ಲಿ ಪೌರ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವಂತೆ ತಿಳಿಸಿದ್ದಾರೆ. 

ಜು.23ರ ಸರ್ಕಾರದ ಆದೇಶದ ಪ್ರಕಾರ  5000 ಮಂದಿಗೆ ಒಬ್ಬ ಪೌರ ಕಾರ್ಮಿಕ ಇರಬೇಕೆಂದು ತಿಳಿಸಿದೆ. ಐಪಿಡಿ ಸಾಲಪ್ಪ ವರದಿ ಪ್ರಕಾರ 500 ಮಂದಿಗೆ ಒಬ್ಬ ಪೌರಕಾರ್ಮಿಕನಿರಬೇಕೆಂದು ತಿಳಿಸಿದೆ. 

ಮನವಿ ಸ್ವೀಕರಿಸಿರುವ ಉಮಾ ಮಹದೇವನ್ ಅವರು, ಗ್ರಾಮಗಳಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಲಾಗುತ್ತದೆ ಎಂದಿದ್ದಾರೆ. 

ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕ ಅಶ್ರಫ್ ಉಲ್ ಹಸನ್ ಮಾತನಾಡಿ, ವೇತನ ನಿಯಮಾವಳಿಗಳನ್ನು ಬದಲಾವಣೆ ಮಾಡಲು ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

Stay up to date on all the latest ರಾಜ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp