ಪ್ರಯಾಣಿಕರೊಂದಿಗೆ ರಾಜ್ಯೋತ್ಸವ ಆಚರಿಸಿದ ಲೋಕೋ ಪೈಲಟ್

ಮೈಸೂರು- ಬೆಂಗಳೂರು ನಡುವೆ ಸಂಚರಿಸುವ ಚಾಮುಂಡಿ ಎಕ್ಸ್ ಪ್ರೆಸ್ ರೈಲಿನ  ಲೋಕೋ ಪೈಲಟ್ ಹಾಗೂ ಪ್ರಯಾಣಿಕರು ಕ್ರಾಂತಿವೀರ  ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ.
ಸಿಂಗಾರಗೊಂಡ ಚಾಮುಂಡಿ ಎಕ್ಸ್ ಪ್ರೆಸ್
ಸಿಂಗಾರಗೊಂಡ ಚಾಮುಂಡಿ ಎಕ್ಸ್ ಪ್ರೆಸ್

ಬೆಂಗಳೂರು:  ಮೈಸೂರು- ಬೆಂಗಳೂರು ನಡುವೆ ಸಂಚರಿಸುವ ಚಾಮುಂಡಿ ಎಕ್ಸ್ ಪ್ರೆಸ್ ರೈಲಿನ  ಲೋಕೋ ಪೈಲಟ್ ಹಾಗೂ ಪ್ರಯಾಣಿಕರು ಕ್ರಾಂತಿವೀರ  ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ.

ರೈಲಿಗೆ ಕನ್ನಡ ಭಾವುಟ, ರಿಬ್ಬನ್, ಹೂವು, ಬಾಳೆಕಂದುಗಳಿಂದ ಅಲಂಕರಿಸಿ ಪೂಜೆ ಮಾಡಲಾಗಿದೆ. ನಂತರ ಸಿಹಿ ಹಂಚಿ ಸಂಭ್ರಮಿಸಲಾಗಿದೆ. 

ಲೋಕೋ ಪೈಲಟ್ ಡಿ ರವಿ ಕಳೆದ 15 ವರ್ಷಗಳಿಂದಲೂ ಪ್ರಯಾಣಿಕರೊಂದಿಗೆ ಕನ್ನಡ ರಾಜ್ಯೋತ್ಸವ ಹಾಗೂ ಆಯುಧ ಪೂಜೆಯನ್ನು ಮಾಡುತ್ತಾ ಬಂದಿದ್ದಾರೆ. ಕರ್ತವ್ಯದಲ್ಲಿದಾಗ ಯಾವ ರೈಲಿನಲ್ಲಿರುತ್ತಾರೋ ಆ ರೈಲನ್ನು ಅಲಂಕರಿಸಿ ಪೂಜಿಸುತ್ತಾರೆ. ಅವರಿಗೆ ಇತರ ನಾಲ್ವರು ಸಿಬ್ಬಂದಿ ಹಾಗೂ ಪ್ರಯಾಣಿಕರು ಸಹಕರಿಸಿದ್ದಾರೆ. 

ಚಾಮುಂಡಿ ಎಕ್ಸ್ ಪ್ರೆಸ್ ರೈಲು ಬೆಂಗಳೂರಿನಿಂದ ಮೈಸೂರಿಗೆ ತಲುಪಿದಾಗ ಅಲ್ಲೂ ಕೂಡಾ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ. ರವಿ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ನಾಡು, ನುಡಿ ಮೇಲಿನ ಪ್ರೀತಿಯಿಂದಾಗಿ ಈ ರೀತಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾಗಿ ರವಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com