ಚಿಕ್ಕಮಗಳೂರು: ವಿದೇಶದಲ್ಲಿ ಉದ್ಯೋಗದ ಕನಸು ಕಂಡಿದ್ದ ಯುವತಿ ರಸ್ತೆ ಗುಂಡಿಗೆ ಬಲಿ!

ವಿದೇಶದಲ್ಲಿ ಉದ್ಯೋಗಮಾಡಬೇಕೆಂದುಕೊಂಡಿದ್ದ ಯುವತಿಯೊಬ್ಬಳು ರಸ್ತೆಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

Published: 04th November 2019 02:49 PM  |   Last Updated: 04th November 2019 02:49 PM   |  A+A-


ಸಿಂದೂಜಾ

Posted By : Raghavendra Adiga
Source : Online Desk

ಚಿಕ್ಕಮಗಳೂರು: ವಿದೇಶದಲ್ಲಿ ಉದ್ಯೋಗ ಮಾಡಬೇಕೆಂದುಕೊಂಡಿದ್ದ ಯುವತಿಯೊಬ್ಬಳು ರಸ್ತೆಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ತಿಪಟೂರು ನಗರದಲ್ಲಿ ನಡೆದ ಘಟನೆಯಲ್ಲಿ ಸಿಂದೂಜಾ (23) ಎಂಬ ಯುವತಿ ರಸ್ತೆ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ.

ಸಿಂಧೂಜಾ ವಿದೇಶದಲ್ಲಿ ಉದ್ಯೋಗ  ಪಡೆಯುವ ಉದ್ದೇಶದೊಡನೆ ಪಾಸ್​ಪೋರ್ಟ್​ ಗೆ ಅಪ್ಲೇ ಮಾಡಿದ್ದಳು. ಅದರ ವೆರಿಫಿಕೇಷನ್ ಗಾಗಿ ತನ್ನ ತಂದೆಯ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ದಂಡರಮಕ್ಕಿ ಸಮೀಪದಲ್ಲಿನ ರಸ್ತೆಯಲ್ಲಿದ್ದ ದೊಡ್ಡ ಗಾತ್ರದ ಗುಂಡಿಯನ್ನು ಗಮನಿಸದೆ ಹೋಗಿದ್ದು ಬೈಕ್ ಗುಂಡಿಗೆ ಇಳಿದಿದಿದೆ. ಇದರಿಂದಾಗಿ ಸಿಂಧೂಜಾ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದರು. ತಲೆಗೆ ಗಂಭೀರ ಗಾಯವಾಗಿದ್ದ ಕಾರಣ ಅವರನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇಂಜಿನಿಯರಿಂಗ್ ಪದವಿ ಪಡೆದಿದ್ದ ಸಿಂಧೂಜಾಗೆ ವಿದೇಶದಲ್ಲಿ ಉದ್ಯೋಗ ಅವಕಾಶ ಸಿಕ್ಕಿತ್ತು. ಅದಕ್ಕಾಗಿ ಆಕೆ ತಂದೆಯ ಬೈಕ್ ನಲ್ಲಿ ತೆರಳಿದ್ದರು. ಘಟನೆ ವೇಳೆ ತಂದೆ ಹೆಲ್ಮೆಟ್ ಹಾಕಿದ್ದ ಹಿನ್ನೆಲೆ ಹೆಚ್ಚಿನ ಅಪಾಯವಿಲ್ಲದೆ ಪಾರಾಗಿದ್ದಾರೆ.

ರಸ್ತೆ ಸರಿಯಿಲ್ಲದ ಕಾರಣ ನನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ಸಿಂಧೂಜಾ ತಂದೆ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರಿತ್ತಿದ್ದಾರೆ. ಇನ್ನು ಯುವತಿಯ ಸಾವಿನ ಬಳಿಕ ಹಲವು ಸಂಘಟನೆಗಳು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದೆ.ಇತ್ತ ಸಾಮಾಜಿಕ ತಾಣಗಳಲ್ಲಿ ಸಹ ರಸ್ತೆ ಗುಂಡಿ ಮುಚ್ಚದ ಸರ್ಕಾರಿ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
 

Stay up to date on all the latest ರಾಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp