ಸಚಿವ ಸಿ.ಟಿ. ರವಿಯನ್ನು ತರಾಟೆಗೆ ತೆಗೆದುಕೊಂಡ ಹಂಪಿ ಸ್ವಾಮೀಜಿ

ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಅವರನ್ನು ಹಂಪಿಯ ವಿದ್ಯಾರಣ್ಯ ಭಾರತಿ ಶ್ರೀ ಅವರು ತರಾಟೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ. 

Published: 05th November 2019 08:35 PM  |   Last Updated: 05th November 2019 08:39 PM   |  A+A-


ct-ravi

ಸಿಟಿ ರವಿ - ಹಂಪಿ ಶ್ರೀ

Posted By : Lingaraj Badiger
Source : RC Network

ಹೊಸಪೇಟೆ: ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಅವರನ್ನು ಹಂಪಿಯ ವಿದ್ಯಾರಣ್ಯ ಭಾರತಿ ಶ್ರೀ ಅವರು ತರಾಟೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ.

ಸಚಿವ ಸಿಟಿ ರವಿ ಅವರು ಇಂದು ಹಂಪಿಯ ಶ್ರೀ ವಿದ್ಯಾರಣ್ಯ ಭಾರತಿ ಶ್ರೀಗಳನ್ನು ಭೇಟಿ ಮಾಡಿದರು. ಈ ವೇಳೆ ವಿಶ್ವ ಪ್ರಸಿದ್ದ ಹಂಪಿಯಲ್ಲಿ ಮೂಲಸೌಲಭ್ಯಗಳಿಗೆ ಸಂಬಂಧಿಸಿದಂತೆ ಸಚಿವರನ್ನು ತರಾಟೆಗೆ ತೆಗೆದುಕೊಂಡರು.

ಹಂಪಿಯ ಮೂಲಸೌಲಭ್ಯದ ಸಮಸ್ಯೆ ಬಗ್ಗೆ ಎಲ್ಲರಿಗೂ ಹೇಳಿದ್ದಾಯಿತು. ಈಗ ನೀವು ಬಂದಿದ್ದೀರಿ. ನಿಮಗೂ ಹೇಳುತ್ತಿದ್ದೇನೆ
ನೀವೇನು ಮಾಡುತ್ತೀರೋ ನೋಡಿ. ಪ್ರದಾನಿ ಮೋದಿಗೆ ಹೇಳುವುದೊಂದೇ ಬಾಕಿ ಇದೆ. ಇಲ್ಲಿ ಕುಡಿಯುವ ನೀರು, ಶೌಚಾಲಯ ಇಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಕುಡಿಯುವ ನೀರು ಹಾಗೂ ಶೌಚಾಲಯ ಇಲ್ಲದೆ ಹಂಪಿಗೆ ಬರುವ ಸಾವಿರಾರು ಭಕ್ತರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಹಿಳೆಯರ ಪಾಡಂತೂ ಇನ್ನು ಕೆಟ್ಟದ್ದಾಗಿದೆ. ಇಲ್ಲಿ ಅಭಿವೃದ್ದಿ ಮಾಡಲು, ಕೊನೆ ಪಕ್ಷ ಶೌಚಾಲಯ ಕಟ್ಟಲು ಬಿಡುತ್ತಿಲ್ಲ. ಸ್ವಚ್ಚ ಭಾರತ್ ಅಂತೀರಿ, ಗಂಗಾ ಸ್ನಾನ್ ತುಂಗಾ ಪಾನ್ ಅಂತೀರಿ. ಆದರೆ ಇಲ್ಲಿ ಸ್ವಚ್ಚತೆ ಹೇಗಿದೆ. ನೀವೇ ನೋಡಿ ಎಂದು ವಿದ್ಯಾರಣ್ಯ ಶ್ರೀಗಳು ಸಚಿವರ ಮುಂದೆ ಅಸಮಾಧಾನ ತೋಡಿಕೊಂಡರು.

Stay up to date on all the latest ರಾಜ್ಯ news
Poll
DJ-Halli-Violence12

ಹಿಂಸಾಚಾರದಲ್ಲಿ ತೊಡಗಿ ಆಸ್ತಿಪಾಸ್ತಿಗೆ ಹಾನಿ ಮಾಡುವ ಗಲಭೆಕೋರರಿಂದಲೇ ನಷ್ಟದ ಹಣ ವಸೂಲಿ ಮಾಡುವುದರಿಂದ ಗುಂಪು ಗಲಭೆ ತಡೆಯಬಹುದೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp