ಕಳೆದ 6 ವರ್ಷದಲ್ಲಿ ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರ ನನ್ನ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ: ಸಚಿವ ಸಿ.ಟಿ.ರವಿ 

ನನ್ನ ಕ್ಷೇತ್ರ ಕಳೆದ 6 ವರ್ಷಗಳಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಅನುದಾನದಿಂದ ವಂಚಿತವಾಗಿತ್ತು ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ. 
ಕಳೆದ 6 ವರ್ಷದಲ್ಲಿ ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರ ನನ್ನ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ: ಸಚಿವ ಸಿ.ಟಿ.ರವಿ
ಕಳೆದ 6 ವರ್ಷದಲ್ಲಿ ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರ ನನ್ನ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ: ಸಚಿವ ಸಿ.ಟಿ.ರವಿ

ಕೊಪ್ಪಳ: ನನ್ನ ಕ್ಷೇತ್ರ ಕಳೆದ 6 ವರ್ಷಗಳಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಅನುದಾನದಿಂದ ವಂಚಿತವಾಗಿತ್ತು ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ. 

ಕೊಪ್ಪಳದಲ್ಲಿ ಮಾತನಾಡಿರುವ ಸಿಟಿ ರವಿ, ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರ್ಕಾರ ಅನುದಾನ ನೀಡದೇ ಇದ್ದ ಕಾರಣ ನನ್ನ ಕ್ಷೇತ್ರದಲ್ಲಿ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದವು. ಇದರಿಂದ ದುರದೃಷ್ಟವಶಾತ್ ಉಂಟಾಗಿರುವ ಸಾವುಗಳಿಗೆ ವಿಷಾಧಿಸುತ್ತೇನೆ ಎಂದು ಸಿಟಿ ರವಿ ಹೇಳಿದ್ದಾರೆ.

RCEP ಒಪ್ಪಂದಕ್ಕೆ ಸಹಿ ಹಾಕುವುದನ್ನು ಪ್ರಧಾನಿ ಕೈಬಿಟ್ಟಿದ್ದಾರೆ

ಆರ್ ಸಿಇಪಿ ಒಪ್ಪಂದಕ್ಕೆ  ಸಹಿ ಹಾಕದೇ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ರೈತ ನಾಯಕ ಆಗಿದ್ದು, ಪ್ರಧಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಟಿ ರವಿ ತಿಳಿಸಿದ್ದಾರೆ. 

ಟಿಪ್ಪು ಇತಿಹಾಸ ಪಠ್ಯದಿಂದ ಕೈಬಿಡುವ ವಿಚಾರ

ಇದೇ ವೇಳೆ ಟಿಪ್ಪು ವಿಷಯವಾಗಿಯೂ ಸಿಟಿ ರವಿ ಮಾತನಾಡಿದ್ದು, ಟಿಪ್ಪು ಮತ್ತು ಬ್ರಿಟಿಷರು ಇಬ್ಬರೂ ಆಕ್ರಮಣಕಾರರು,  ಟಿಪ್ಪು ಹೈದರಾಲಿ ಮಗ ಎಂಬುದನ್ನು ನಾವು ನೆನಪು ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 
 

-ವರದಿ: ಬಸವರಾಜ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com