ಮಂಗಳೂರು ಬಂದರಿನಿಂದ ಪ್ರವಾಸಿ ತಾಣಗಳಿಗೆ ಹೆಲಿಕಾಪ್ಟರ್ ಸೌಲಭ್ಯ 

ದೇಶದಲ್ಲಿಯೇ ಮೊದಲ ಬಾರಿಗೆ ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ (ಎನ್ಎಂಪಿಟಿ) ಇದೇ 12ರಿಂದ ಹಡಗು ಪ್ರಯಾಣಿಕರಿಗೆ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸುತ್ತಿದೆ.
ಮಂಗಳೂರು ಬಂದರಿನಿಂದ ಹಾರಾಡಲು ಸಿದ್ದವಾಗಿರುವ ಹೆಲಿಕಾಪ್ಟರ್
ಮಂಗಳೂರು ಬಂದರಿನಿಂದ ಹಾರಾಡಲು ಸಿದ್ದವಾಗಿರುವ ಹೆಲಿಕಾಪ್ಟರ್

ಮಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ (ಎನ್ಎಂಪಿಟಿ) ಇದೇ 12ರಿಂದ ಹಡಗು ಪ್ರಯಾಣಿಕರಿಗೆ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸುತ್ತಿದೆ.


ಇದಕ್ಕಾಗಿ ಖಾಸಗಿ ನಿರ್ವಾಹಕ ಕಂಪೆನಿ ಚಿಪ್ಸೊನ್ ಏವಿಯೇಷನ್ ಬಳಿ ಒಪ್ಪಂದ ಮಾಡಿಕೊಳ್ಳಲಾಗಿದ್ದು ಇದು ಮಂಗಳೂರು ಬಂದರಿಗೆ ಬರುವ ಪ್ರವಾಸಿಗರಿಗೆ ಹೆಲಿಕಾಪ್ಟರ್ ಸೇವೆಯನ್ನು ಒದಗಿಸಲಿದೆ. ಮಂಗಳೂರು ಬಂದರಿನಿಂದ ಕಾಸರಗೋಡಿನ ಬೇಕಲ ಕೋಟೆ, ಮೂಡಬಿದ್ರಿಯ ಸಾವಿರ ಕಂಬದ ಬಸದಿ ಮತ್ತು ಶೃಂಗೇರಿ ದೇವಸ್ಥಾನಗಳಿಗೆ ಕರೆದುಕೊಂಡು ಹೋಗಿ ಮತ್ತೆ ಪ್ರವಾಸಿಗರನ್ನು ಮಂಗಳೂರು ಪೋರ್ಟ್ ಗೆ ತಂದಿಳಿಸಲಿದೆ.


ಇಲ್ಲಿಯವರೆಗೆ 16 ಮಂದಿ ಪ್ರವಾಸಿಗರಿಗೆ ಈ ಸೇವೆಗೆ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಬಂದರು ಇದಕ್ಕಾಗಿ ಎರಡು ಹೆಲಿಪ್ಯಾಡ್ ಗಳನ್ನು ರಚಿಸಿದೆ. ಚಿಪ್ಸೊನ್ ಏವಿಯೇಷನ್ 5 ಸೀಟುಗಳ ಹೆಲಿಕಾಪ್ಟರ್ ನ್ನು ಕಾರ್ಯನಿರ್ವಹಿಸಲಿದ್ದು ಇನ್ನೊಂದು ಹೆಲಿಕಾಪ್ಟರ್ ಕಂಪೆನಿ ಜೊತೆ ಸೇವೆ ಒದಗಿಸಲು ಮಾತುಕತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಬೇಲೂರು ಮತ್ತು ಹಳೆಬೀಡುಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಉದ್ದೇಶವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com