ಬೆಂಗಳೂರು:ಮನೆಯ 'ಅಂದ'ಕ್ಕೆ ಅಡ್ಡಿಯಾದ ಮರಕ್ಕೆ ವಿಷವಿಕ್ಕಿದ ವೈದ್ಯ!

ರಸ್ತೆಯಿಂದ ತನ್ನ ಮನೆ ಸುಂದರವಾಗಿ ಕಾಣಬೇಕೆಂಬ ಉದ್ದೇಶಕ್ಕೆ ವೈದ್ಯರೊಬ್ಬರು ರಸ್ತೆ ಬದಿ ಇದ್ದ ಮರಕ್ಕೆ "ವಿಷ" ಹಾಕಿರುವ ಆಘಾತಕಾರಿ ಘಟನೆ ಉದ್ಯಾನ ನಗರಿ ಬೆಂಗಳುರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಸ್ತೆಯಿಂದ ತನ್ನ ಮನೆ ಸುಂದರವಾಗಿ ಕಾಣಬೇಕೆಂಬ ಉದ್ದೇಶಕ್ಕೆ ವೈದ್ಯರೊಬ್ಬರು ರಸ್ತೆ ಬದಿ ಇದ್ದ ಮರಕ್ಕೆ "ವಿಷ" ಹಾಕಿರುವ ಆಘಾತಕಾರಿ ಘಟನೆ ಉದ್ಯಾನ ನಗರಿ ಬೆಂಗಳುರಿನಲ್ಲಿ ನಡೆದಿದೆ.

ನಗರದ ರಾಜರಾಜೇಶ್ವರಿ ನಗರ ಡಬಲ್ ರಸ್ತೆ ನಿವಾಸಿ  ಡಾ.ನರೇಂದ್ರ ಹೀಗೆ ಬೀದಿ ಬದಿಯ ಮರಕ್ಕೆ ವಿಷವಿಕ್ಕಲು ಹೊರಟ ವ್ಯಕ್ತಿ. ಅವರು ಮರದ ಕಾಂಡದಲ್ಲಿ ನಾಲ್ಕು ಇಂಚುಗಳಷ್ಟು ರಂಧ್ರಗಳನ್ನು ಕೊರೆದು ಅದರಲ್ಲಿ ವಿಷವನ್ನು ತುಂಬಿಸಿದರೆಂದು ವರದಿಯಾಗಿದೆ.

ವೈದ್ಯರು ಈ ಬಗೆಯಾಗಿ ಮರಕ್ಕೆ ವಿಷ ಹಾಕುತ್ತಿದ್ದ ವೇಳೆ ರಸ್ತೆ ಮೇಲೆ ಹಾದುಹೋಗುತ್ತಿದ್ದ ಸ್ಥಳೀಯರೊಬ್ಬರು ಇದನ್ನು ಗಮನಿಸಿದ್ದಾರೆ, ಅವರು ತಕ್ಷಣ ಬೃಹತ್  ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅರಣ್ಯ ವಿಭಾಗಕ್ಕೆ  ಮಾಹಿತಿ ನೀಡಿದ್ದಾರೆ. ಇದು ಕರ್ನಾಟಕ ಮರ ಸಂರಕ್ಷಣಾ ಕಾಯ್ದೆ 1976 ರ ಅಡಿಯಲ್ಲಿ ಅಪರಾಧವಾಗಿದ್ದು ವೈದ್ಯ ನರೇಂದ್ರ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪಂಚಶೀಲ ಬ್ಲಾಕ್ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಶನ್ ಸದಸ್ಯ ರಾಜ್‌ಕುಮಾರ್ ಜೆ ಜಿ, ಹೇಳಿದಂತೆ ವೈದ್ಯರು ರಸ್ತೆಯಿಂದ ತಮ್ಮ ಮನೆ ಸುಂದರವಾಗಿ ಕಾಣಲು ಮರವು ಅಡ್ಡಿಯಾಗಿದೆ ಎಂದು ಭಾವಿಸಿದ್ದರು. ಇದಕ್ಕಾಗಿ ಅವರು ಕಾಂಡದಲ್ಲಿ ರಂಧ್ರಗಳನ್ನು ಕೊರೆದಿದ್ದರು. ಇದನ್ನು ಪ್ರಶ್ನಿಸಿದಾಗ ಮರವಿರುವ ಕಾರಣ ತನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿದ್ದಾರೆ ಎಂದರು.

ಇನ್ನು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿ ಅರ್ಜುನ ಮಾತನಾಡಿ "ಮರವು ಯಾವುದೇ ಉಸಿರಾಟದ ಸಮಸ್ಯೆಗೆ ಕಾರಣವಾಗುವುದಿಲ್ಲ ಎಂದಿದ್ದಲ್ಲದೆ ತಾವು ಆರೋಪಿಗೆ ಶಿಕ್ಷೆ ವಿಧಿಸುವುದು ಖಚಿತವೆಂದು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.

ಏತನ್ಮಧ್ಯೆ ನಗರದ ದ ಪರಿಸರ ಕಾರ್ಯಕರ್ತ ವಿಜಯ್ ನಿಶಾಂತ್  ವಿಷಪ್ರಾಶನವಾಗಿರುವ ಮರವನ್ನು ರಕ್ಷಿಸುವಂತೆ ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com