ಕಲಬುರಗಿ: ಪತ್ನಿ ಕೊಂದು ಮೂರು ದಿನ ಶವದ ಜೊತೆ ಕಳೆದಿದ್ದ ಪತಿ ಬಂಧನ

ಪತಿಯೊಬ್ಬ ತನ್ನ ಪತ್ನಿಯನ್ನ ಕೊಲೆಗೈದು ಮೃತದೇಹವನ್ನು ಮಂಚದ ಕೆಳಗೆ ಮೂರು ದಿನ ಮುಚ್ಚಿಟ್ಟಿದ್ದ ಅಮಾನವೀಯ ಘಟನೆ ಆಳಂದ ತಾಲೂಕಿನಲ್ಲಿ ನಡೆದಿದೆ.

Published: 06th November 2019 07:59 AM  |   Last Updated: 06th November 2019 07:59 AM   |  A+A-


Srishial Sakkarage (L) with wife Sangeeta

ಶ್ರೀಶೈಲ್ ಮತ್ತು ಸಂಗೀತಾ

Posted By : Shilpa D
Source : The New Indian Express

ಕಲಬುರಗಿ: ಪತಿಯೊಬ್ಬ ತನ್ನ ಪತ್ನಿಯನ್ನ ಕೊಲೆಗೈದು ಮೃತದೇಹವನ್ನು ಮಂಚದ ಕೆಳಗೆ ಮೂರು ದಿನ ಮುಚ್ಚಿಟ್ಟಿದ್ದ ಅಮಾನವೀಯ ಘಟನೆ ಆಳಂದ ತಾಲೂಕಿನಲ್ಲಿ ನಡೆದಿದೆ.

ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದ ಸಂಗೀತಾ ಸಕ್ಕರಗಿ (35) ಕೊಲೆಯಾದ ಪತ್ನಿ. ಶ್ರೀಶೈಲ್ ಸಕ್ಕರಗಿ (45) ಕೊಲೆಗೈದ ಪಾಪಿ ಪತಿ. ಮಾದನಹಿಪ್ಪರಗಾ ಗ್ರಾಮದ ಮನೆಯಲ್ಲಿ ಶ್ರೀಶೈಲ್ ಶನಿವಾರ ಕೃತ್ಯ ಎಸಗಿದ್ದಾನೆ. ಶವ ಕೊಳೆತ ವಾಸನೆ ಬಂದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಶ್ರೀಶೈಲ್ 15 ವರ್ಷಗಳ ಹಿಂದೆಯೇ ಸಂಗೀತಾಳನ್ನು ಮದುವೆಯಾಗಿದ್ದರು. ಮಾದನಹಿಪ್ಪರಗಾ ಗ್ರಾಮದಲ್ಲಿ ಇಬ್ಬರು ಕೂಲಿ ಮಾಡಿಕೊಂಡು ಸಂತೋಷವಾಗಿದ್ದರು. ಮದುವೆಯಾಗಿ 15 ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎನ್ನುವ ಕೊರಗು ದಂಪತಿಗೆ ಇತ್ತು. 

ಸಂಗೀತಾ ಮೂರು ದಿನಗಳಿಂದ ಕಾಣದೆ ಇರುವುದರಿಂದ ಶ್ರೀಶೈಲ್‌ನನ್ನು ಅಕ್ಕ ಪಕ್ಕದ ಮನೆಯವರು ವಿಚಾರಿಸಿದ್ದರು.  ಜೊತೆಗೆ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದರಿಂದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದರು.ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಸಂಗೀತಾ ಮೃತದೇಹ ಪತ್ತೆಯಾಗಿದೆ. ಕೊಲೆಗೆ ಶ್ರೀ ಶೈಲನ ತಾಯಿ ಕುಮ್ಮಕ್ಕು ನೀಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಈ ಸಂಬಂಧ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶ್ರೀಶೈಲ್‌ನನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Stay up to date on all the latest ರಾಜ್ಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp