ಪ್ರತ್ಯೇಕ ಪ್ರಕರಣ;ಇಬ್ಬರು ಯುವಕರು ರೈಲಿಗೆ ಸಿಲುಕಿ ಸಾವು

ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಯುವಕರಿಬ್ಬರು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮಂಡ್ಯನಗರದ ರೈಲ್ವೆ ನಿಲ್ದಾಣದ ಸಮೀಪ ಮಂಗಳವಾರ ನಡೆದಿದೆ.

Published: 06th November 2019 03:14 PM  |   Last Updated: 06th November 2019 03:14 PM   |  A+A-


Mandya: Two youth die in railway accident in two different cases

ಪ್ರತ್ಯೇಕ ಪ್ರಕರಣ;ಇಬ್ಬರು ಯುವಕರು ರೈಲಿಗೆ ಸಿಲುಕಿ ಸಾವು

Posted By : Srinivas Rao BV
Source : RC Network

ಮಂಡ್ಯ: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಯುವಕರಿಬ್ಬರು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮಂಡ್ಯನಗರದ ರೈಲ್ವೆ ನಿಲ್ದಾಣದ ಸಮೀಪ ಮಂಗಳವಾರ ನಡೆದಿದೆ.

ಕಾರ್ತಿಕ್ ಬಿನ್ ನಾಗಶೆಟ್ಟಿ(23) ಮತ್ತು ಸಂತೋಷ್ ಬಿನ್ ಸ್ವಾಮಿ(27) ಎಂಬ ಯುವಕರೇ ಪ್ರತ್ಯೇಕವಾಗಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಾರ್ತಿಕ್ ರೈಲ್ವೆ ಟ್ರಾಕನ್ನು ದಾಟುವ ವೇಳೆ ಆಕಸ್ಮಿಕವಾಗಿ ಹಂಪಿ ರೈಲಿಗೆ ಸಿಲುಕಿ ಸಾವನ್ನಪ್ಪಿದರೆ,ಸಂತೋಷ್ ಗೋಲ್‌ಗುಂಬಜ್ ರೈಲಿಗೆ ಅಡ್ಡಲಾಗಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈಲ್ವೆಪೊಲೀಸರು ತಿಳಿಸಿದ್ದಾರೆ.ಮೂಲತಃ ಮೈಸೂರು ಜಿಲ್ಲೆ ಟಿ.ನರಸೀಪುರ ಕುಂತನಹಳ್ಳಿ ನಿವಾಸಿ ನಾಗಶೆಟ್ಟಿರವರ ಪುತ್ರ ಕಾರ್ತಿಕ್(23)  ಮಂಗಳವಾರ ಸಂಜೆ 7.45ರಲ್ಲಿ ಮಂಡ್ಯದ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಟ್ರಾಕನ್ನು ಒಂದುಕಡೆಯಿAದ ಮತ್ತೊಂದು ಕಡೆಗೆ ದಾಟುವ ಸಂದರ್ಭದಲ್ಲಿ ಮೈಸೂರಿನಿಂದ ಬೆಂಗಳೂರು ಕಡೆಗೆ ಹೊರಟ್ಟಿದ್ದ ಹಂಪಿ ಎಕ್ಸ್ಪ್ರೆಸ್ ರೈಲಿಗೆ ಆಕಸ್ಮಿಕವಾಗಿ ಸಿಲುಕಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಮೂಲತಃ ಮೈಸೂರು ಸಮೀಪದ ತುಂಬುನೇರಳೆ ಗ್ರಾಮದ ಸ್ವಾಮಿ ಎಬುವವರ ಪುತ್ರ ಸಂತೋಷ್(27) ಮಂಗಳವಾರ ಬೆಳಿಗ್ಗೆ 10 ರ ಸುಮಾರಿನಲ್ಲಿ ಮಂಡ್ಯ ರೈಲ್ವೆ ನಿಲ್ದಾಣದ ಸಮೀಪ ಬೆಂಗಳೂರಿನಿದ ಮೈಸೂರು ಕಡೆಗೆ ತೆರಳುತ್ತಿದ್ದ ಗೋಲ್ ಗುಂಬಜ್ ರೈಲಿಗೆ ಅಡ್ಡಲಾಗಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪಿಎಸೈ ಜಗದೀಶ್ ಮತ್ತು ದಪೇದಾರ್ ಮಂಜುನಾಥ್ ಅವರನ್ನೊಳಗೊಂಡ ಮಂಡ್ಯ ರೈಲ್ವೆಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬAಧ ಎರಡೂ ಪ್ರಕರಣಗಳ ಬಗ್ಗೆ ಮಂಡ್ಯರೈಲ್ವೆ ಠಾಣೆಯಲ್ಲಿ ದೂರು ದಾಖಲಾಗಿದೆ.
ವರದಿ: ನಾಗಯ್ಯ

Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp