ಭರಚುಕ್ಕಿ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್: ವಿಶ್ವ ದರ್ಜೆಯ ಬಯೋ ಡೈವರ್ಸಿಟಿ  ಪಾರ್ಕ್!

ಅದು ಗಡಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಅದನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲು ಒಂದು ಮಾಸ್ಟರ್ ಪ್ಲಾನ್ ರೆಡಿಯಾಗಿದೆ. ಅರೆ, ಯಾವುದಪ್ಪಾ ಅದು ಅಂತೀರಾ. ಇಲ್ಲಿದೆ ನೋಡಿ ಅದರ ಕಂಪ್ಲೀಟ್ ಡೀಟೈಲ್ಸ್.
ಭರಚುಕ್ಕಿ ಪಾಲ್ಸ್
ಭರಚುಕ್ಕಿ ಪಾಲ್ಸ್

ಚಾಮರಾಜನಗರ: ಅದು ಗಡಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಅದನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲು ಒಂದು ಮಾಸ್ಟರ್ ಪ್ಲಾನ್ ರೆಡಿಯಾಗಿದೆ. ಅರೆ, ಯಾವುದಪ್ಪಾ ಅದು ಅಂತೀರಾ. ಇಲ್ಲಿದೆ ನೋಡಿ ಅದರ ಕಂಪ್ಲೀಟ್ ಡೀಟೈಲ್ಸ್.

ಗಡಿ ಜಿಲ್ಲೆ ಚಾಮರಾಜನಗರದಲ್ಲಿರುವ ಪ್ರಕೃತಿ ಸೊಬಗಿಗೆ ಹೆಸರಾಗಿದೆ. ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಶಿವನ ಸಮುದ್ರದ ಬಳಿ ಕಾವೇರಿ ನದಿ ಹರಿಯುವ ಮಾರ್ಗ ಮಧ್ಯ ಭರಚುಕ್ಕಿ ಜಲಪಾತವಿದೆ. ಇದು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಈ ಪ್ರವಾಸಿ ತಾಣವನ್ನು ವಿಶ್ವ ದರ್ಜೆಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲು ಪ್ರವಾಸೋದ್ಯಮ  ಇಲಾಖೆ ಮತ್ತು ಅರಣ್ಯ ಇಲಾಖೆ  ಚಿಂತನೆ ನಡೆಸಿದೆ.

ಈಗಾಗಲೇ ಈ ಕುರಿತು ಒಂದು ಮಾಸ್ಟರ್ ಪ್ಲಾನ್ ಅನ್ನು ಕೂಡ ಅರಣ್ಯ ಇಲಾಖೆ ರೆಡಿ ಮಾಡಿ ವಿಶ್ವ ದರ್ಜೆಯ ಬಯೋ ಡೈವರ್ಸಿಟಿ ಪಾರ್ಕ್ ನಿರ್ಮಾಣ ಮಾಡಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಈ ಯೋಜನೆ ಅಂದುಕೊಂಡಂತೆ ನಡೆದ್ರೆ ಸುಮಾರು 100 ಕೋಟಿ ವೆಚ್ಚದಲ್ಲಿ ಒಂದು ವಿಶ್ವ ಮಟ್ಟದ ದೊಡ್ಡ ಬಯೋ ಡೈವರ್ಸಿಟಿ ಪಾರ್ಕ್ ತಲೆ ಎತ್ತಲಿದೆ. ಇದರಿಂದ ಚಾಮರಾಜನಗರದ ಹಿರಿಮೆ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್.

ಇನ್ನೂ, ಇಲ್ಲಿ ಸುಮಾರು 155 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಜೀವಿಕ ಉದ್ಯಾನವನದಲ್ಲಿ ವೈಲ್ಡ್‌ ಲೈಫ್ ಗಾರ್ಡನ್,  ಚಿಲ್ಡ್ರನ್ ಗಾರ್ಡನ್, ಸ್ಕೈ ವಾಕ್, ಹೋಂ ಸ್ಟೇ, ವ್ಯೂ ಪಾಯಿಂಟ್, ವಾಕಿಂಗ್ ಪಾರ್ಕ್,  ಸೇರಿದಂತೆ ಸುಮಾರು 21 ರೀತಿಯ ವಿವಿಧ ರೀತಿಯ ಪಾರ್ಕ್ಗಳನ್ನು ನಿರ್ಮಿಸಿ ಇಲ್ಲಿ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತದೆ.

ಈ ಪ್ರಾಜೆಕ್ಟ್ ಪೂರ್ಣಗೊಳ್ಳಲು ಕನಿಷ್ಠ 5 ರಿಂದ 6 ವರ್ಷಗಳ ಕಾಲ
ಬೇಕಾಗಿದೆ  ಇದಕ್ಕೆ ಬೇಕಾಗಿರುವ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಲು ಯತ್ನಿಸುವುದಾಗಿ ತಿಳಿಸಿದರು.
 

ವರದಿ: ಗೂಳಿಪುರ ನಂದೀಶ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com