ಶಾಲೆಗಳ ಸುತ್ತಮುತ್ತ ಕುರುಕಲು ತಿಂಡಿ ಮಾರಾಟಕ್ಕೆ ನಿಷೇಧ!

ಶಾಲೆಗಳ ಸುತ್ತಮುತ್ತ ಕುರುಕಲು ತಿಂಡಿ ಮಾರಾಟಕ್ಕೆ ನಿಷೇಧ ಹೇರುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿರುವ ನಡುವಲ್ಲೇ ರಾಜ್ಯ ಸರ್ಕಾರ ಈ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಂಡಿದ್ದು, ರಾಜ್ಯದ ಶಾಲೆಗಳ ಸುತ್ತಮುತ್ತಲು ಕುರುಕುಲು ತಿಂಡಿಗಳಿಗೆ ನಿಷೇಧ ಹೇರಿದೆ. 

Published: 07th November 2019 07:59 AM  |   Last Updated: 07th November 2019 07:59 AM   |  A+A-


Representative image

ಸಾಂದರ್ಭಿಕ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ಶಾಲೆಗಳ ಸುತ್ತಮುತ್ತ ಕುರುಕಲು ತಿಂಡಿ ಮಾರಾಟಕ್ಕೆ ನಿಷೇಧ ಹೇರುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿರುವ ನಡುವಲ್ಲೇ ರಾಜ್ಯ ಸರ್ಕಾರ ಈ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಂಡಿದ್ದು, ರಾಜ್ಯದ ಶಾಲೆಗಳ ಸುತ್ತಮುತ್ತಲು ಕುರುಕುಲು ತಿಂಡಿಗಳಿಗೆ ನಿಷೇಧ ಹೇರಿದೆ. 

ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡಿದ್ದು, ಇನ್ನು ಮುಂದೆ ಶಾಲೆಗಳ ಸುತ್ತಮುತ್ತಲು ಕುರುಕಲು ತಿಂಡಿಗಳನ್ನು ಮಾರಾಟ ಮಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. 

ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಶಾಲೆಗಳ ಕ್ಯಾಂಟೀನ್ ಆಹಾರ ಪದಾರ್ಥ ಮತ್ತು ಶಾಲೆಗಳ ಸುತ್ತಮುತ್ತಲು ಮಾರಾಟ ಮಾಡುವ ಆಹಾರಗಳ ಮೇಲೆ ನಿಷೇಧ ಹೇರಿ ಹತ್ತು ಅಂಶಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಸಮಗ್ರ ಯೋಜನೆಯನ್ನು ಎಲ್ಲಾ ಶಾಲೆಗಳು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಬೇಕೆಂದು ಎಫ್ಏಸ್ಎಸ್ಐಎ ಹೇಳಿದೆ. 

ಶಾಲೆಗಳ ಆಹಾರ ಮಾರಾಟ ಮಾಡುವ ಅಥವಾ ಪೂರೈಸುವ ಗುತ್ತಿಗೆದಾರರು ಇಲಾಖೆಯಿಂದ ಅಧಿಕೃತ ಪರವಾನಗಿ ಜೊತೆಗೆ ಕಡ್ಡಾಯ ನೈರ್ಮಲ್ಯ ಮತ್ತು ನೈರ್ಮಲ್ಯದ ಅವಶ್ಯಕತೆಗಳನ್ನು ಅನುಸರಿಸುವ ನೋಂದಣಿ ಪಡೆಯಬೇಕಾಗುತ್ತದೆ. ಮಕ್ಕಳಿಗೆ ಅತ್ಯಂತ ಗುಣಮಟ್ಟದ ಆಹಾರವನ್ನು ಒದಗಿಸಬೇಕು. ಅತಿಯಾದ ಕೊಬ್ಬು ಮತ್ತು ಸಕ್ಕರೆ ಅಂಶಗಳಿರುವ ಹಾಗೂ ಜಂಕ್ ಫುಡ್, ತಂಪು ಪಾನೀಯಗಳು, ಚಿಪ್ಸ್, ಇನ್ ಸ್ಟಂಟ್ ನೂಡಲ್ಸ್ ಮತ್ತು ಮುಚ್ಚಿರುವ ಆಹಾರವನ್ನು ಶಾಲೆಯ ಕ್ಯಾಂಟೀನ್ ಮತ್ತು ಶಾಲೆಗಳಿಂದ 50 ಮೀಟರ್ ಸುತ್ತಮುತ್ತ ಮಾರಾಟ ಮಾಡುವಂತಿಲ್ಲ ಎಂಬುದು ಸೇರಿ ಹಲವು ಮಾನದಂಡಗಳನ್ನು ಎಫ್ಎಸ್ಎಸ್ಎಐ ಸಿದ್ಧಪಡಿಸಿರುವ ಪ್ರಸ್ತಾವನೆಯಲ್ಲಿದೆ ಎಂದು ವರದಿಗಳು ತಿಳಿಸಿವೆ. 

ಬಹಳ ಹಿಂದೆಯೇ ಈ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಇದೀಗ ನಿಷೇಧ ಹೇರಲಾಗಿದೆ. ಶಾಲೆಗಳ ಸುತ್ತಮುತ್ತಲಿನಲ್ಲಿ ಕುರುಕಲು ತಿಂಡಿಗಳನ್ನು ಮಾರಾಟ ಮಾಡದಂತೆ ನೋಡಿಕೊಳ್ಳಲು ಪೊಲೀಸರು ಸಹಾಯ ಪಡೆದುಕೊಳ್ಳಲಾಗುತ್ತದೆ. ಕುರುಕಲು ತಿಂಡಿಗಳತ್ತ ಮಕ್ಕಳು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದನ್ನು ತಡೆಯಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. 

ಊಟದ ಡಬ್ಬಿಗೆ ವಿದ್ಯಾರ್ಥಿಗಳ ಪೋಷಕರೂ ಕೂಡ ಕುರುಕಲು ತಿಂಡಿಗಳನ್ನು ಹಾಕುತ್ತಿದ್ದಾರೆ. ಇದನ್ನು ನಿಯಂತ್ರಿಸುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಸುತ್ತೋಲೆಯನ್ನು ಶೀಘ್ರದಲ್ಲಿಯೇ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp