ಸುಧಾಕರ್ ಕೈ ಕಡಿಯುವೆ ಎಂದಿದ್ದ ಶಾಸಕ ಶಿವಶಂಕರ ರೆಡ್ಡಿ ವಿರುದ್ಧ ಎಫ್‍ಐಆರ್

ಅನರ್ಹ ಶಾಸಕರ ವಿಚಾರದಲ್ಲಿ ರಾಜಕೀಯವಾಗಿ ಕೆಸರೆರಚಾಟ ಮುಂದುವರೆದಿರುವ ಬೆನ್ನಲ್ಲೇ ಮಾಜಿ ಸಚಿವ, ಶಾಸಕ ಎಚ್.ಎನ್.ಶಿವಶಂಕರ್ ರೆಡ್ಡಿ ವಿರುದ್ಧ ಗೌರಿ ಬಿದನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published: 10th November 2019 04:26 PM  |   Last Updated: 10th November 2019 04:26 PM   |  A+A-


ಎಚ್.ಎನ್.ಶಿವಶಂಕರ್ ರೆಡ್ಡಿ

Posted By : Raghavendra Adiga
Source : UNI

ಗೌರಿಬಿದನೂರು: ಅನರ್ಹ ಶಾಸಕರ ವಿಚಾರದಲ್ಲಿ ರಾಜಕೀಯವಾಗಿ ಕೆಸರೆರಚಾಟ ಮುಂದುವರೆದಿರುವ ಬೆನ್ನಲ್ಲೇ ಮಾಜಿ ಸಚಿವ, ಶಾಸಕ ಎಚ್.ಎನ್.ಶಿವಶಂಕರ್ ರೆಡ್ಡಿ ವಿರುದ್ಧ ಗೌರಿ ಬಿದನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನರ್ಹಗೊಂಡ ಶಾಸಕ ಡಾ.ಕೆ.ಸುಧಾಕರ್ ಅವರ ಕೈ ಕಡಿಯುವುದಾಗ ಹೇಳಿಕೆ ನೀಡಿದ ಆರೋಪದಡಿ ಬೆಂಗಳೂರಿನ ೮೧ನೇ ಅಡಿಷನಲ್ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯ ಶಿವಶಂಕರ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶಿಸಿತ್ತು.

ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಹೊಸ ತಾಲೂಕಾಗಿ ಘೋಷಣೆ ಮಾಡಿ, ಹಲವು ಗ್ರಾಮ ಪಂಚಾಯತ್‌ಗಳನ್ನು ಇದರಲ್ಲಿ ಸೇರ್ಪಡೆಗೊಳಿಸಿತ್ತು. ಈ ವೇಳೆ ತೊಂಡೇಬಾವಿಯನ್ನು ಮಂಚೇನಹಳ್ಳಿ ತಾಲೂಕಿಗೆ ಸೇರ್ಪಡೆ ಮಾಡುವುದಕ್ಕೆ ವಿರೋಧಿಸಿದ್ದ ಶಾಸಕ ಶಿವಶಂಕರ ರೆಡ್ಡಿ ತನ್ನ ಕ್ಷೇತ್ರದ ತಂಟೆಗೆ ಬಂದರೆ ಕೈ ಕತ್ತರಿಸುತ್ತೇನೆ ಎಂದು ಅನರ್ಹ ಶಾಸಕ ಡಾ.ಕೆ. ಸುಧಾರ್ ಅವರಿಗೆ ಧಮಕಿ ಹಾಕಿದ್ದರು. 

ಶಿವಶಂಕರ ರೆಡ್ಡಿ  ವಿರುದ್ಧ  ಐಪಿಸಿ ಸೆಕ್ಷನ್ 120b, 124, 121, 141, 506, 506b, 159 ಅಡಿಯಲ್ಲಿ ಪ್ರಕರಣದ ದಾಖಲಾಗಿದೆ.

Stay up to date on all the latest ರಾಜ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp