ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳೆವಿಮೆ ಹಣ ವಿತರಣೆಗಾಗಿ ಪ್ರಧಾನಿಗೆ ಪತ್ರ ಬರೆದ ರೈತ

ಅಡಿಕೆ ಬೆಳೆಗಾರರಿಗೆ ಹವಾಮಾನ ಆಧಾರಿತ ಬೆಳೆವಿಮೆ ಹಣ ವಿತರಣೆಯಾಗಿಲ್ಲ. ಕಡಿಮೆ ಪರಿಹಾರ ಬಂದಿರುವ ರೈತರಿಗೆ ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕು ಅಂಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಶಿರಸಿ: ಅಡಿಕೆ ಬೆಳೆಗಾರರಿಗೆ ಹವಾಮಾನ ಆಧಾರಿತ ಬೆಳೆವಿಮೆ ಹಣ ವಿತರಣೆಯಾಗಿಲ್ಲ. ಕಡಿಮೆ ಪರಿಹಾರ ಬಂದಿರುವ ರೈತರಿಗೆ ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕು ಅಂಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡದ ಪ್ರಕಾರ ಅಡಿಕೆ ಬೆಳೆಗಾರರಿಗೆ ಹವಾಮಾನ ಆಧಾರಿತ ಬೆಳೆವಿಮೆ ಹಣ ವಿತರಣೆಯಾಗಿಲ್ಲ. ಕಡಿಮೆ ಪರಿಹಾರ ಬಂದಿರುವ ರೈತರಿಗೆ ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ತಾಲೂಕಿನ ಅಂಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ರೈತ ಮಲ್ಲಸರ್ಜನ ಪಾಟೀಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. 

ಜೊತೆಗೆ ಪಿಎಂಒ ಇಂಡಿಯಾ ಟ್ವೀಟ್ ಖಾತೆಗೆ ಇದನ್ನು ಲಗತ್ತಿಸಿದ್ದಾರೆ.  ‘ಸಂಘದ ಸದಸ್ಯರಲ್ಲಿ ಸುಮಾರು ೩೦೦ ರೈತರಿಗೆ, ಸರ್ಕಾರ ನಿರ್ಧರಿಸಿದ ಮಾನದಂಡದನ್ವಯ ವಿಮೆ ಹಣ ಜಮಾ ಆಗಿಲ್ಲ. ನಿಯಮದಂತೆ ಅಡಿಕೆಗೆ ಒಂದು ಹೆಕ್ಟೇರ್‌ಗೆ ೩೮,೩೮೧ ಪರಿಹಾರ ಬರಬೇಕು. ಆದರೆ. ರೈತರಿಗೆ ಕೇವಲ ೧೩,೩೩೦ ಅಷ್ಟೇ ಜಮಾ ಆಗಿದೆ. ೨೦೧೭-೧೮ನೇ ಸಾಲಿನ ಅಡಿಕೆ ಬೆಳೆಯ ಕ್ಷೇತ್ರ ಒಟ್ಟು ೮೩೭.೩೪ ಎಕರೆ ಇದೆ. ರೈತರು ೫೩೮ ಎಕರೆ ಕ್ಷೇತ್ರಕ್ಕೆ ಮಾತ್ರ ವಿಮೆ ಮಾಡಿದ್ದಾರೆ. ಹೀಗಾಗಿ ಅಂಡಗಿ ಪಂಚಾಯ್ತಿಗೆ ಯಾವುದೇ ರೀತಿಯಿಂದ ಕಡಿತ ಅನ್ವಯವಾಗುವುದಿಲ್ಲ. ಇದನ್ನು ಪರಿಗಣಿಸಿ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು’ ಎಂದು ಅವರು ಪತ್ರದಲ್ಲಿ ವಿನಂತಿಸಿದ್ದಾರೆ.

‘ಬೆಳೆ ವಿಮೆ ಹಣ ಸರಿಯಾಗಿ ಬರದೇ ರೈತರಿಗೆ ತೊಂದರೆಯಾಗಿದೆ. ಹೀಗಾಗಿ ಪ್ರಧಾನಿಯವರಿಗೇ ನೇರವಾಗಿ ಪತ್ರ ಬರೆದಿದ್ದೇನೆ. ರೈತರಿಗೆ ನ್ಯಾಯ ಸಿಗುವ ಭರವಸೆಯಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com