ಅಯೋಧ್ಯೆ ತೀರ್ಪನ್ನು ಬಿಜೆಪಿ ರಾಜಕೀಯಗೊಳಿಸುವುದಿಲ್ಲ ಎಂದು ಭಾವಿಸುತ್ತೇವೆ: ದಿನೇಶ್ ಗುಂಡೂ ರಾವ್ 

ಅಯೋಧ್ಯೆ ಭೂ ವಿವಾದ ಕುರಿತು ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪನ್ನು ಸ್ವಾಗತಿಸಿದ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿ ಇದನ್ನು ರಾಜಕೀಯ ಲಾಭ ಪಡೆದುಕೊಳ್ಳಲು ಬಳಸಿಕೊಳ್ಳದಿರಲಿ ಎಂದು ಹೇಳಿದೆ.
ದಿನೇಶ್ ಗುಂಡೂ ರಾವ್
ದಿನೇಶ್ ಗುಂಡೂ ರಾವ್

ಬೆಂಗಳೂರು: ಅಯೋಧ್ಯೆ ಭೂ ವಿವಾದ ಕುರಿತು ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪನ್ನು ಸ್ವಾಗತಿಸಿದ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿ ಇದನ್ನು ರಾಜಕೀಯ ಲಾಭ ಪಡೆದುಕೊಳ್ಳಲು ಬಳಸಿಕೊಳ್ಳದಿರಲಿ ಎಂದು ಹೇಳಿದೆ.


ನಿನ್ನೆ ಕೆಪಿಸಿಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪು ಭಾರತದ ಜಾತ್ಯತೀತ ತತ್ವವನ್ನು ಪ್ರತಿಬಿಂಬಿಸುವುದಲ್ಲದೆ ದಶಕಗಳ ಕಾಲದ ವಿವಾದವನ್ನು ಬಗೆಹರಿಸಿದಂತಾಗಿದೆ. ಈ ತೀರ್ಪನ್ನು ಸುಪ್ರೀಂ ಕೋರ್ಟ್ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳದಿರಲಿ. ತೀರ್ಪಿನಿಂದ ದೇಶದ ಐಕ್ಯತೆ ಮತ್ತು ಕೋಮು ಸಾಮರಸ್ಯ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ನಂಬುತ್ತೇನೆ ಎಂದಿದ್ದಾರೆ. 


ಮಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಕಾಂಗ್ರೆಸ್ ನಾಯಕ ಯು ಟಿ ಖಾದರ್, ಸುಪ್ರೀಂ ಕೋರ್ಟ್ ತೀರ್ಪನ್ನು ಚುನಾವಣೆಯಲ್ಲಿ ಮತ ಗಳಿಸಲು ಬಳಸಿಕೊಂಡರೆ ಅಂತವರು ದೇಶದ್ರೋಹಿಗಳನೆಸಿಕೊಳ್ಳುತ್ತಾರೆ. ಈ ವಿಷಯವನ್ನು ರಾಜಕೀಯಗೊಳಿಸಬಾರದು. ನಾವು ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ. ಇದು ಯಾರಿಗೂ ಸೋಲು ಅಥವಾ ಗೆಲುವಲ್ಲ. ಇಲ್ಲಿಯವರೆಗೆ ಅಯೋಧ್ಯೆ ವಿವಾದವನ್ನು ರಾಜಕೀಯ ಲಾಭ ಪಡೆದುಕೊಳ್ಳಲು ಬಳಸಿಕೊಳ್ಳಲಾಗುತ್ತಿತ್ತು. ದೇಶದ ಹಿತಾಸಕ್ತಿಯಿಂದ ಸುಪ್ರೀಂ ಕೋರ್ಟ್ ವಿವಾದವನ್ನು ಬಗೆಹರಿಸಿದೆ. ತೀರ್ಪನ್ನು ರಾಜಕೀಯಗೊಳಿಸದೆ ನಮ್ಮ ಮಕ್ಕಳಾದರೂ ಶಾಂತಿ ಮತ್ತು ಏಕತೆಯಿಂದ ನೆಲೆಸುವಂತೆ ನೋಡಿಕೊಳ್ಳೋಣ ಎಂದರು.


ರಾಮಮಂದಿರ ವಿವಾದ ದೇಶದ ರಾಜಕೀಯದಲ್ಲಿ ಕೇಂದ್ರ ಭಾಗ ಪಡೆದುಕೊಳ್ಳುತ್ತಿದ್ದಂತೆ ಹಿಂದಿ ಭಾಷಿಕರ ನೆಲದಲ್ಲಿ ಬಿಜೆಪಿ ಗಟ್ಟಿಯಾದ ನೆಲೆಯನ್ನು ಕಂಡುಕೊಳ್ಳಲು ಆರಂಭಿಸಿ ಅಷ್ಟೇ ವೇಗವಾಗಿ ಹಿಂದುತ್ವದ ಅಜೆಂಡಾ ಇಟ್ಟುಕೊಂಡು ದೇಶದ ವಿವಿಧ ರಾಜ್ಯಗಳಲ್ಲಿ ತನ್ನ ಅಧಿಕಾರ ಬಾಹುಳ್ಯವನ್ನು ವಿಸ್ತರಿಸಿದೆ. 


ಇನ್ನೊಂದೆಡೆ ರಾಜಕೀಯವಾಗಿ ಕಾಂಗ್ರೆಸ್ ಶಕ್ತಿ ಕುಂದುತ್ತಾ ಬಂದಿದೆ. ದೇಶದ ಅತಿದೊಡ್ಡ ಹಳೆಯ ಪಕ್ಷವೆನಿಸಿರುವ ಕಾಂಗ್ರೆಸ್ 1984ರ ನಂತರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಬರಲೇ ಇಲ್ಲ. ಕೇಂದ್ರದಲ್ಲಿ ಬೇರೆ ಪಕ್ಷಗಳ ಸಹಾಯ ಪಡೆದು ಸರ್ಕಾರ ರಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com