ಅಲ್ಲಾಹ್ ಮತ್ತು ರಾಮನ ನಡುವೆ ಯಾವ ವ್ಯತ್ಯಾಸವಿಲ್ಲ-ರಾಮಮಂದಿರ ಸ್ವಚ್ಚ ಕರ್ಮಚಾರಿ ಸದ್ದಾಂ ಹುಸೇನ್

ಶನಿವಾರ ಬೆಳಿಗ್ಗೆ ಅಯೋಧ್ಯೆಯ ವಿವಾದಿತ ಭೂಮಿ ಶ್ರೀರಾಮನ ಪಾಲಾಗಿದೆ ಎಂದು ಪ್ರೀಂ ಕೋರ್ಟ್ ತನ್ನ ತೀರ್ಪು ನೀಡುತ್ತಿರುವಾಗ ಅಯೋಧ್ಯೆಯಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ರಾಜಾಜಿನಗರದಲ್ಲಿ ಮಸೀದಿ ಮತ್ತು ಮಂದಿರ ಎರಡನ್ನೂ ಸ್ವಚ್ಚಗೊಳಿಸುವ 27 ವರ್ಷದ ಸದ್ದಾಂ ಹುಸೇನ್ ಗೆ ಈ ವಿಷಯ ತಿಳಿದಿದ್ದು ಮಧ್ಯಾಹ್ನದ ನಂತರವಾಗಿತ್ತು
ಸದ್ದಾಂ ಹುಸೇನ್
ಸದ್ದಾಂ ಹುಸೇನ್

ಬೆಂಗಳೂರು: ಶನಿವಾರ ಬೆಳಿಗ್ಗೆ ಅಯೋಧ್ಯೆಯ ವಿವಾದಿತ ಭೂಮಿ ಶ್ರೀರಾಮನ ಪಾಲಾಗಿದೆ ಎಂದು ಪ್ರೀಂ ಕೋರ್ಟ್ ತನ್ನ ತೀರ್ಪು ನೀಡುತ್ತಿರುವಾಗ ಅಯೋಧ್ಯೆಯಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ರಾಜಾಜಿನಗರದಲ್ಲಿ ಮಸೀದಿ ಮತ್ತು ಮಂದಿರ ಎರಡನ್ನೂ ಸ್ವಚ್ಚಗೊಳಿಸುವ 27 ವರ್ಷದ ಸದ್ದಾಂ ಹುಸೇನ್ ಗೆ ಈ ವಿಷಯ ತಿಳಿದಿದ್ದು ಮಧ್ಯಾಹ್ನದ ನಂತರವಾಗಿತ್ತು. ಅವರು  ಹೆಚ್ಚಿನ ಸಮಯ ರಾತ್ರಿ ವೇಳೆ ಕೆಲಸ ಮಾಡುವ ಕಾರಣ ಬೆಳಿಗ್ಗೆ ಏಳುವುದು ನಿಧಾನವಾಗಿರಲಿದೆ. . ಶನಿವಾರವೂ ತಡವಾಗಿ ಎದ್ದು ನಮಾಜ್ ಗಾಗಿ ಮಸೀದಿಗೆ ಹೋಗಿ ತಾನು ಕೆಲಸ ಮಾಡುವ ‘ಅಂಗಡಿಯ ಕಡೆಗೆ (ಪೂಜಾ ಸಾಮಗ್ರಿ ಮಾರುವ ಅಂಗಡಿ)ತೆರಳಿದ್ದಾರೆ. ಆಗ ಅವರಿಗೆ ತೀರ್ಪಿನ ಅರಿವಾಗಿದೆ.

"ತೀರ್ಪು ಇಂದು ಹೊರಬರುತ್ತದೆ ಎಂದು ನನಗೆ ತಿಳಿದಿರಲಿಲ್ಲ. ನಾನು ಟಿವಿ ಅಥವಾ ಪತ್ರಿಕೆ ನೋಡಲ್ಲ, ನನ್ನ ಸಹೋದರ ಅದರ ಬಗ್ಗೆ ಹೇಳಿದ್ದರು, ”ಅವರು ಹೇಳಿದರು “ಇದು ದೇವರ ಆಸೆ. ಅಲ್ಲಾಹ್ ಮತ್ತು ರಾಮನ  ನಡುವೆ ನನಗೆ ಯಾವುದೇ ವ್ಯತ್ಯಾಸವಿಲ್ಲ. ನಾನು ಪ್ರಾರ್ಥನೆ ಮತ್ತು ಸ್ವಚ್ಚಗೊಳಿಸಲು ಮಸೀದಿಗೆ ಹೋಗುತ್ತೇನೆ ಮತ್ತು ಅದೇ ರೀತಿ ರಾಮಮಂದಿರವನ್ನೂ ಸ್ವಚ್ಚಚಾಗಿಡಲು ನಾನು ತೆರಳುತ್ತೇನೆ. ಎರಡೂ ಸ್ಥಳಗಳಲ್ಲಿ ನನಗೆ ಶಾಂತಿ ಮತ್ತು ಸಂತೋಷ ಸಿಗುತ್ತದೆ. ನಮ್ಮ ಹೃದಯ ಹಾಗೂ ಮನಸ್ಸಿನಲ್ಲಿ ಸಮಾಧಾನವಿದೆ" ಅವರು ಹೇಳಿದ್ದಾರೆ.

ಅದು ರಂಜಾನ್ ಅಥವಾ ರಾಮನವಮಿ ಆಗಿರಲಿ ಸದ್ದಾಂ ಹುಸೇನ್ ಭಾಗವಹಿಸುತ್ತಾರೆ. ಸದ್ದಾಂ ಸ್ಥಳೀಯ ಮಸೀದಿಯನ್ನು ಸ್ವಚ್ಚಗೊಳಿಸುತ್ತಾರೆ. ಸ್ವಚ್ಚಗೊಳಿಸಲು ಅವರು ಮಿನಾರ್ ಏರುತ್ತಾರೆ. ರಂಜಾನ್ ಸಮಯದಲ್ಲಿ, ಅವರು ಮಸೀದಿಗೆ ಹೋಗುತ್ತಾರೆ,  ಹಣ್ಣುಗಳನ್ನು ಸ್ವಚ್ಚಗೊಳಿಸಿ ಕತ್ತರಿಸಿ ಉಪವಾಸ ಮುಗಿಸುವವರಿಗೆ ಹಂಚುತ್ತಾರೆ. ಇದೇ ರೀತಿ ಸದ್ದಾಂ ರಾಮ ಮಂದಿರಕ್ಕೆ ಹೋಗುತ್ತಾರೆ. ಗೋಪುರವನ್ನು ಹತ್ತಿ ಸ್ವಚ್ಚಗೊಳಿಸುತ್ತಾರೆ. ವಾಲಯದ ಆವರಣವನ್ನೂ ಸ್ವಚ್ಚ ಮಾಡುತ್ತಾರೆ. ರಾಮ ನವಮಿ ಸಮಯದಲ್ಲಿ, ಅವರು ರಥದ ಸೇವೆ ಸಹ ನೆರವೇರಿಸುತ್ತಾರೆ.  ದೇವಾಲಯದ ಆಡಳಿತವು ಯಾವಾಗಲೂ ಶುಚಿಗೊಳಿಸುವ ಕೆಲಸಕ್ಕಾಗಿ ಅರಿಗೇ ಕರೆ ಮಾಡುತ್ತದೆ. ಸದ್ದಾಂ 2 ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದು ಈ ಬಗ್ಗೆ ಅವರಿಗೆ ಎಲ್ಲಿಯೂ ಕೀಳರಿಮೆ ಇಲ್ಲ. ಅವರೀಗ ತಮ್ಮ ತಾಯಿ ಹಾಗೂ ಸೋದರರೊಂದಿಗೆ ವಾಸವಿದ್ದಾರೆ.

ಪೂಜಾ ದೇವಾಲಯಗಳೆರಡನ್ನೂ ಸಮಾನ ನಂಬಿಕೆಯಿಂದ ಸ್ವಚ್ಚಗೊಳಿಸುವ ಸದ್ದಾಂ, ಹಿಂದೂಗಳು ಮತ್ತು ಮುಸ್ಲಿಮರು ಸಹೋದರರು ಎಂದು ಹೇಳುತ್ತಾರೆ. ಎಲ್ಲವೂ ದೇವರ ಮಾರ್ಗವೇ ಆಗಿದೆ. 

ಸದ್ದಾಂ ಕೆಲಸ ಮಾಡುವ ಅಂಗಡಿ ಮಾಲೀಕ ವೆಂಕಟೇಶ್ ಬಾಬು,ಮಾತನಾಡಿ " “ಸದ್ದಾಂ ನನ್ನ ಕಾರು ಚಾಲಕನಾಗಿ ಕೆಲಸ ಮಾಡುತ್ತಾರೆ.  ನನ್ನ ಮಗನ ವಿವಾಹವು ಶೀಘ್ರವಾಗಿ ಸಮೀಪಿಸುತ್ತಿದೆ ಮತ್ತು ಆಹ್ವಾನ ಪತ್ರಿಕೆ ವಿತರಣೆಗಾಗಿ ನಾನು ಅವರೊಡನೆ ತೆರಳುತ್ತೇನೆ. ಆದರೆ ಅವರು ನಮಾಜ್ ಗಾಗಿ ಮಸೀದಿಯ ಬಳಿ ಕಾರನ್ನು ನಿಲ್ಲಿಸುತ್ತಾರೆ. ಅವರು ಬರುವವರೆಗೆ ನಾನು ಹೊರಗೆ ಕಾಯುತ್ತೇನೆ. ನಾವು ಹೀಗಿದ್ದೇವೆ, ಸಾಮಾಜಿಕ ಸಾಮರಸ್ಯದಿಂದಿದ್ದೇವೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com