ಬೆಂಗಳೂರು: ಅನುಮಾನದ ಭೂತ, ಪ್ರೇಯಸಿಗೆ ಇರಿದು ಅದೇ ಚಾಕುವಿನಿಂದ ಚುಚ್ಚಿಕೊಂಡ ಪಾಗಲ್ ಪ್ರೇಮಿ!
ಪ್ರೇಯಸಿಯ ಮನೆಗೆ ಬಂದ ಪಾಲಗ್ ಪ್ರೇಮಿಯೊಬ್ಬ ಚಾಕುವಿನಿಂದ ಆಕೆಗೆ ಇರಿದು ನಂತರ ತಾನೂ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Published: 11th November 2019 08:42 PM | Last Updated: 11th November 2019 08:42 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಪ್ರೇಯಸಿಯ ಮನೆಗೆ ಬಂದ ಪಾಲಗ್ ಪ್ರೇಮಿಯೊಬ್ಬ ಚಾಕುವಿನಿಂದ ಆಕೆಗೆ ಇರಿದು ನಂತರ ತಾನೂ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಚಂದ್ರಾ ಲೇಔಟ್ ನಲ್ಲಿ ದೆಹಲಿ ಮೂಲದ ಅಂತ್ರಾಜ್ ಜೈಸ್ವಾಲ್ ಎಂಬಾತ ಜಾರ್ಖಂಡ್ ಮೂಲದ ಟಾಲ್ಡ್ರಾನ್ ಟೆನ್ಜಿನ್ ಳನ್ನು ಪ್ರೀತಿಸುತ್ತಿದ್ದ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಟಾಲ್ಡ್ರಾನ್ ಮನೆಗೆ ಅಂತ್ರಾಜ್ ಬಂದಿದ್ದಾನೆ.
ಅಂತ್ರಾಜ್ ಗೆ ಟಾಲ್ಡ್ರಾನ್ ಮೇಲೆ ಅನುಮಾನ ಪಡುತ್ತಿದ್ದ. ಆದರೆ ಇಂದು ಕೋಪದಲ್ಲಿ ಟಾಲ್ಡ್ರಾನ್ ಗೆ ಚಾಕುವಿನಿಂದ ಚುಚ್ಚಿ ನಂತರ ತಾನು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.