ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದ ಕಾರ್ಮಿಕ ಸಾವು, ಬಿಲ್ಡರ್ ವಿರುದ್ಧ ಪ್ರಕರಣ ದಾಖಲು

ಲಹಳ್ಳಿಯ ಬಿಇಎಲ್ ನಾರ್ತ್ ಗೇಟ್ ರಸ್ತೆಯಲ್ಲಿರುವ ಅಂಡರ್ ಕನ್ಸ್ಟ್ರಕ್ಷನ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು 4 ವರ್ಷದ ಕಾರ್ಮಿಕನೊಬ್ಬ ಶುಕ್ರವಾರ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜಾಲಹಳ್ಳಿಯ ಬಿಇಎಲ್ ನಾರ್ತ್ ಗೇಟ್ ರಸ್ತೆಯಲ್ಲಿರುವ ಅಂಡರ್ ಕನ್ಸ್ಟ್ರಕ್ಷನ್ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು 4 ವರ್ಷದ ಕಾರ್ಮಿಕನೊಬ್ಬ ಶುಕ್ರವಾರ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಣ ಕಾರ್ಯವನ್ನು ನಿರ್ವಹಿಸುತ್ತಿದ್ದ ವಿಶಾಲ್ ಬಿಲ್ಡರ್ಸ್ ಕಂಪನಿಯ ಮೂವರು ಸಿಬ್ಬಂದಿ ಮತ್ತು ಅಲುಬುಲ್ಡ್ ಟೆಕ್ ಸೊಲ್ಯೂಷನ್ಸ್‌ನ ಸಿಬ್ಬಂದಿಗಳ ವಿರುದ್ಧ ಪೊಲೀಸರು ನಾಲ್ಕು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ಬಿಲ್ಡರ್, ಮಾಲೀಕರು ಮತ್ತು ವ್ಯವಸ್ಥಾಪಕರ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಲಾಗಿದೆ. ಮೃತ ಉತ್ತರಪ್ರದೇಶ ಮೂಲದ ಹೇಮಂತ್ ಕುಮಾರ್. ಅವರು ನಾಗವಾರದಲ್ಲಿ ವಾಸಿಸುತ್ತಿದ್ದರು. 

ಸಂಜೆ 4 ಗಂಟೆ ಸುಮಾರಿಗೆ ಹೇಮಂತ್ ಮೂರನೇ ಮಹಡಿಯಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಶೀಟ್‌ಗಳನ್ನು ಸರಿಪಡಿಸುತ್ತಿದ್ದಾಗ ಸಮತೋಲನ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಕಾರ್ಮಿಕ ಹೇಮಂತ್ ಕೆಳಗೆ ಬಿದ್ದಾಗ ತಕ್ಷಣ ಅವರನ್ನು  ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಆದರೆ ಚಿಕಿತ್ಸೆ ಫ;ಲಿಸದೆ ಅವರು ಸಾವನ್ನಪ್ಪಿದ್ದಾರೆ ಎಂದು  ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. . ಅಲ್ಯೂಮಿನಿಯಂ ಹಾಳೆಗಳನ್ನು ಸರಿಪಡಿಸಲು ವಿಶಾಲ್ ಬಿಲ್ಡರ್ ಗಳು ಅಲುಬುಲ್ಡ್ ಟೆಕ್ ಸೊಲ್ಯೂಷನ್ಸ್ ಗೆ ಗುತ್ತಿಗೆ ನೀಡಿದ್ದರು.

ಕಾರ್ಮಿಕರ ಸುರಕ್ಷತೆಗೆ ಗುತ್ತಿಗೆದಾರರು ಯಾವ ಕ್ರಮ ತೆಗೆದುಕೊಂಡಿಲ್ಲ. ಕಾರ್ಮಿಕರಿಗೆ ಸುರಕ್ಷತೆ ಕಿಟ್ ನೀಡಲಾಗಿಲ್ಲ. ಇದರಿಂದಾಗಿಯೇ ಈ ಅವಘಡ ಸಂಭವಿಸಿದೆ.  "ವಿಶಾಲ್ ಗೌಡ, ಸುರೇಂದ್ರ ಸಿಂಗ್ ಸಂಧು  ಅನೂಪ್ ಸರ್ಕಾರ್ ಮತ್ತು ಅಲುಬುಲ್ಡ್ ಟೆಕ್ ಸೊಲ್ಯೂಷನ್ಸ್ ನ ಪ್ರಸಾದ್ ಬಿ ಎಸ್, ಜಾಸೀರ್ ಮೊಹಮ್ಮದ್, ರಘು ಮತ್ತು ಅಶೋಕ್ ಕುಮಾರ್ ವಿರುದ್ಧ ನಾವು ಪ್ರಕರಣಗಳನ್ನು ದಾಖಲಿಸಿದ್ದೇವೆ" ಎಂದು ತನಿಖಾ ಅಧಿಕಾರಿ ತಿಳಿಸಿದ್ದಾರೆ. ಮೃತ ಹೇಮಂತ್ ತಂದೆ ಸಹ ಕಾರ್ಮಿಕರ ಸುರಕ್ಷತೆ ಬಗ್ಗೆ ನಿರ್ಲಕ್ಷ ವಹಿಸಲಾಗಿದೆ ಎಂದು ಆರೋಪಿಸಿದ್ದಾರೆ. ನಾವು ಆರೋಪಿಗಳಿಗೆ ಪೊಲೀಸರ ಮುಂದೆ ಹಾಜರಾಗುವಂತೆ ನೋಟಿಸ್ ನೀಡಿದ್ದೇವೆ. ಒಮ್ಮೆ ನಾವು ಅವರಿಂದ ಹೇಳಿಕೆ ಪಡೆದರೆ, ಮುಂದಿನ ಕ್ರಮ ಕೈಗೊಳ್ಳಲಾಗುವುದು  ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com