ಕೊಪ್ಪಳ: 6 ವರ್ಷಗಳಿಂದ ಪತ್ರಗಳನ್ನು ಹಂಚದೆ ತನ್ನ ಬಳಿಯೇ ಇಟ್ಟುಕೊಂಡ ಪೋಸ್ಟ್ ಮೆನ್!

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಸಂಗನಾಳದ ಪೊಸ್ಟ್ ಮೆನ್ ಗ್ರಾಮಕ್ಕೆ ಬಂದಿರುವ ಅಂಚೆ ಚೀಟಿ ಆಧಾರ್ ಕಾರ್ಡಗಳನ್ನು ಕಳೆದ 4 ವರ್ಷಗಳಿಂದ ಸುಮಾರು 1 ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಮತ್ತು ಪ್ಯಾಕೇಟ್ ಗಳನ್ನು ಗ್ರಾಹಕರಿಗೆ...
ಸುರೇಶ್ ತಳವಾರ
ಸುರೇಶ್ ತಳವಾರ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಸಂಗನಾಳದ ಪೊಸ್ಟ್ ಮೆನ್ ಗ್ರಾಮಕ್ಕೆ ಬಂದಿರುವ ಅಂಚೆ ಚೀಟಿ ಆಧಾರ್ ಕಾರ್ಡಗಳನ್ನು ಕಳೆದ 4 ವರ್ಷಗಳಿಂದ ಸುಮಾರು 1 ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಮತ್ತು ಪ್ಯಾಕೇಟ್ ಗಳನ್ನು ಗ್ರಾಹಕರಿಗೆ ನೀಡದೆ ತನ್ನಲ್ಲಿ ಉಳಿಸಿಕೊಂಡ ಘಟನೆ ಸಂಗನಾಳ ಗ್ರಾಮದಲ್ಲಿ ನಡೆದಿದೆ.

ಸುರೇಶ್ ತಳವಾರ ಎಂಬ ಪೊಸ್ಟ್ ಮೆನ್ ನ ನಿರ್ಲಕ್ಷ್ಯದಿಂದ ಕಚೇರಿಗೆ ಸುಮಾರು 2016 ರಿಂದ 2019 ರವರೆಗೆ ಬಂದಂತಹ ಪತ್ರಗಳನ್ನು ಹಂಚಿಕೆ ಮಾಡದೆ ತನ್ನ ಬಳಿಯೇ ಉಳಿಸಿಕೊಂಡಿದ್ದಾನೆ.

ಕಚೇರಿಗೆ ಬಂದಿದ್ದ ಪತ್ರಗಳಲ್ಲಿ ಸರ್ಕಾರದ ಅಧಿಕೃತ ಪ್ರಕಟಣೆಗಳು, ಪರೀಕ್ಷೆಯ ಪ್ರವೇಶ ಪತ್ರಗಳು, ನೌಕರಿಯ ನೇಮಕ ಪತ್ರ ಹಾಗೂ ಬಹುಮುಖ್ಯವಾದ ಮಾಹಿತಿಯ ಪತ್ರಗಳು ಸೇರಿದೆ.

ಬ್ಯಾಂಕಿನಿಂದ ಹಾಗೂ ಇತರೆ ಸರ್ಕಾರಿ ಕಚೇರಿಗಳಿಂದ ಬಂದ ಪೋಸ್ಟ್, ಎಟಿಎಂ ಕಾರ್ಡ್ ಹಾಗೂ ಇತರೆ ದಾಖಲೆಗಳು ಬರುತ್ತಿಲ್ಲವೆಂದು ಗ್ರಾಹಕರು ತಲೆಕೆಡಿಸಿಕೊಂಡಿದ್ದಾರೆ. ನಂತರ ಅಂಚೆ ಕಚೇರಿಗೆ ತೆರಳಿ ಪರಿಶೀಲಿಸಿದ್ದಾರೆ. ಆಗ ಎಲ್ಲ ದಾಖಲೆಗಳು ಸಿಕ್ಕಿದ್ದು, ಸುಮಾರು ನಾಲ್ಕು ವರ್ಷಗಳಿಂದ ಹಂಚದೆ ಹಾಗೇ ಇಟ್ಟ ಪತ್ರಗಳೆಲ್ಲವನ್ನೂ ಕಂಡು ಬೆರಗಾಗಿದ್ದಾರೆ.

ನಿರ್ಲಕ್ಷ್ಯ ತೋರಿದ ಸುರೇಶ್ ತಳವಾರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2016 ರಿಂದ ಇಲ್ಲಿಯವರೆಗೆ ಪೋಸ್ಟಿಗೆ ಬಂದ ಎಲ್ಲ ಪತ್ರಗಳನ್ನು ಸುರೇಶ್ ವಿತರಣೆ ಮಾಡದೆ ಹಾಗೇ ಇಟ್ಟುಕೊಂಡಿದ್ದ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com