ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ ಬ್ಯಾಟರಿ ಚಾಲಿತ ವಾಹನ ಪಲ್ಟಿ, ಆರು ಪ್ರವಾಸಿಗರಿಗೆ ಗಾಯ!

ವಿಶ್ವ ವಿಖ್ಯಾತ ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಬ್ಯಾಟರಿ ಚಾಲಿತ ವಾಹನವೊಂದು ಚಾಲಕಿಯ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಆಂದ್ರ ಪ್ರದೇಶ ಮೂಲದ ಐದು ಜನ ಪ್ರವಾಸಿಗರು ಮತ್ತು ಚಾಲಕಿ ಗಾಯಗೊಂಡಿದ್ದಾರೆ.
ಅಪಘಾತದ ಚಿತ್ರ
ಅಪಘಾತದ ಚಿತ್ರ

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಬ್ಯಾಟರಿ ಚಾಲಿತ ವಾಹನವೊಂದು ಚಾಲಕಿಯ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಆಂದ್ರ ಪ್ರದೇಶ ಮೂಲದ ಐದು ಜನ ಪ್ರವಾಸಿಗರು ಮತ್ತು ಚಾಲಕಿ ಗಾಯಗೊಂಡಿದ್ದಾರೆ.

ವಿಜಯ ವಿಠಲ ದೇವಸ್ಥಾನ ವೀಕ್ಷಣೆ ಮಾಡಿಕೊಂಡು ಮರಳುವ ವೇಳೆಯಲ್ಲಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡವರೆಲ್ಲರೂ ಆಂದ್ರ ಪ್ರದೇಶದ ಕಡಪ ಜಿಲ್ಲೆಯ ಆರ್.ಎಸ್.ಕೊಂಡಪುರದವರು. ರಾಮಾಂಜಿನಮ್ಮ, ಅರುಣ, ಲಕ್ಷ್ಮಿ ದೇವಿ, ಶಾರದ, 4 ವರ್ಷದ ಗುರು ರಿತಿಕಾ ರೆಡ್ಡಿ ಮತ್ತು ಬ್ಯಾಟರಿ ವಾಹನದ ಚಾಲಕಿ ಭಾಗ್ಯಲಕ್ಷ್ಮಿ. ಇನ್ನು ಗಾಯಾಳುಗಳಿಗೆ ಹೊಸಪೇಟೆ ನಗರದ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಇಲ್ಲಿನ ಪರಿಸರ ಸಂರಕ್ಷಣೆ ಮತ್ತು ಸ್ಮಾರಕ ರಕ್ಷಣೆಯ ದೃಷ್ಠಿಯಿಂದ ವಿಜಯ ವಿಠಲ ದೇವಸ್ಥಾನದಿಂದ ಮುಖ್ಯ ರಸ್ತೆಯವರೆಗೆ ಒಂದು ಕಿಲೋಮಿಟರ ದೂರ ಯಾವುದೇ ಸಾರ್ವಜನಿಕ ವಾಹನಿಗಳಿಗೆ ಪ್ರವೇಶ ನಿಷೇದಿಸಲಾಗಿದೆ. ಹಾಗಾಗಿ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಇಲ್ಲಿ ಈ ಬ್ಯಾಟರಿ ವಾಹನಗಳ ವ್ಯವಸ್ಥೆ ಮಾಡಿದೆ. ಆದರೆ, ಸೂಕ್ತ ನಿರ್ವಹಣೆ ಇಲ್ಲದ್ದೆ 25ವಾಹನಗಳಲ್ಲಿ ಕೇವಲ ಆರು ವಾಹನಗಳು ಮಾತ್ರ ಚಾಲನೆಯಲ್ಲಿದ್ದು ಉಳಿದ ಎಲ್ಲವೂ ಮೂಲೆ ಗುಂಪಾಗಿವೆ. 

ಈ ಸಂಭಂದ ಇಲ್ಲಿಗೆ ಬರುವ ಪ್ರವಾಸಿಗರು ಸಾಕಷ್ಟು ಬಾರಿ ಇಲ್ಲಿನ ಸಿಬ್ಬಂದಿಗಳ ಜೊತೆ ಜಗಳ ಆಡಿದ ಉದಾಹರಣೆಗಳಿವೆ. ಅದಲ್ಲದೆ ಈ ಬ್ಯಾಟರಿ ಚಾಲಿತ ವಾಹನ ಸಂಚರಿಸುವ ರಸ್ತೆ ಕೂಡ ಕಿರಿದಾಗಿದ್ದು ರಸ್ತೆ ಅಭಿವೃದ್ದಿ ಪಡಿಸಲು ಇಲ್ಲಿನ ಭಾರತೀಯ ಪುರಾತತ್ವ ಇಲಾಖೆಯ ಹಲವು ನಿಯಮಗಳು ಅಡ್ಡಿಯಾಗಿರುವುದು ಒಂದು ಪ್ರಮುಖ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com