ಬೆಂಗಳೂರು: ಉದ್ಯಮಿ ಪುತ್ರನ ಅಪಹರಣಕ್ಕೆ ಯತ್ನಿಸಿದ ಇಬ್ಬರ ಕಾಲಿಗೆ ಗುಂಡೇಟು

ಉದ್ಯಮಿ ಪುತ್ರನ ಅಪಹರಣಕ್ಕೆ ಯತ್ನ ನಡೆಸಿ ವಿಫಲಗೊಂಡಾಗ ಅವರ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ತಮಿಳುನಾಡಿದ ಇಬ್ಬರು ದುಷ್ಕರ್ಮಿಗಳಿಗೆ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಗುಂಡು ಹಾರಿಸಿ ಬಂಧಿಸುವಲ್ಲಿ ಸೋಲದೇವನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

Published: 12th November 2019 04:16 PM  |   Last Updated: 12th November 2019 04:16 PM   |  A+A-


ಬೆಂಗಳೂರು: ಉದ್ಯಮಿ ಪುತ್ರನ ಅಪಹರಣಕ್ಕೆ ಯತ್ನಿಸಿದ ಇಬ್ಬರ ಕಾಲಿಗೆ ಗುಂಡೇಟು

Posted By : Raghavendra Adiga
Source : UNI

ಬೆಂಗಳೂರು: ಉದ್ಯಮಿ ಪುತ್ರನ ಅಪಹರಣಕ್ಕೆ ಯತ್ನ ನಡೆಸಿ ವಿಫಲಗೊಂಡಾಗ ಅವರ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ತಮಿಳುನಾಡಿದ ಇಬ್ಬರು ದುಷ್ಕರ್ಮಿಗಳಿಗೆ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಗುಂಡು ಹಾರಿಸಿ ಬಂಧಿಸುವಲ್ಲಿ ಸೋಲದೇವನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ ತಿರ್‌ನಲ್‌ವೇಲಿ ಮೂಲದ ಮುಹ್ಮದ್ ರಿಯಾಜ್ (21) ಹಾಗೂ ಮುಹ್ಮದ್ ಬಾಸಿತ್ (23) ಬಂಧಿತ ಆರೋಪಿಗಳು. ಇಬ್ಬರ ಕಾಲಿಗೂ ಗುಂಡು ತಗುಲಿದ್ದು, ಅವರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಸರಹಳ್ಳಿಯ ನೀಲಂಮಹೇಶ್ವರಂ ರಸ್ತೆಯ ಶುದ್ಧ ನೀರಿನ ಪೂರೈಕೆ ಘಟಕದ ಮಾಲೀಕನಾಗಿದ್ದ ಶ್ರೀನಿವಾಸ್ ಅವರ ಪುತ್ರ ಶರತ್ ಪಿಯುಸಿ ಮುಗಿಸಿದ ನಂತರ ತಂದೆಯ ಜತೆಯಲ್ಲೇ ವ್ಯವಹಾರದಲ್ಲಿ ತೊಡಗಿದ್ದು ಇನ್‌ಸ್ಟ್ರಾಗ್ರಾಮ್‌ನಲ್ಲಿ ದುಬಾರಿ ಬೈಕ್‌ಗಳು, ಕಾರಿನ ಜತೆಗಿರುವ ಫೋಟೊಗಳನ್ನು ಅಪ್‌ಲೋಡ್ ಮಾಡುತ್ತ ಶ್ರೀಮಂತನೆಂದು ಬಿಂಬಿಸಿಕೊಳ್ಳುತ್ತಿದ್ದ. ಶರತ್ ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದುದನ್ನು ಗಮನಿಸಿದ್ದ ಆರೋಪಿಗಳು ಆತನ ಅಪಹರಣಕ್ಕೆ ಎರಡು ಬಾರಿ ಯತ್ನಿಸಿ ವಿಫಲರಾಗಿದ್ದರು. ಕಡೆಗೊಮ್ಮೆ ಶರತ್ ಮೊಬೈಲ್ ಗೆ ಕರೆ ಮಾಡಿ ನೀವು ನಮಗೆ ಐವತ್ತು ಲಕ್ಷ ರು. ಕೊಡಬೇಕು, ಇಲ್ಲವಾದರೆ ನಿಮ್ಮನ್ನು ಅಪಹರಿಸುತ್ತೇವೆ. ನಿಮ್ಮ ವಾಹನಗಳಿಗೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಆದರೆ ಶರತ್ ಇದು ತನ್ನ ಸ್ನೇಹಿತರ ತರಲೆ ಕೆಲಸ ಎಂದು ಸುಮ್ಮನಾಗಿದ್ದಾರೆ. ಮಂಗಳವಾರ ಬೆಳಿಗ್ಗೆ 1.30ರ ಸುಮಾರಿನಲ್ಲಿ ಟಿ.ದಾಸರಹಳ್ಳಿಯ 4ನೆ ಕ್ರಾಸ್, ನೀಲಮಹೇಶ್ವರಿ ರಸ್ತೆಯಲ್ಲಿರುವ ವಾಟರ್ ಪ್ಲಾಂಟ್ ಮಾಲೀಕ ಬಿ.ಟಿ.ಶ್ರೀನಿವಾಸ್ ನಿವಾಸದ ಬಳಿ ಆಗಮಿಸಿದ ಆರೋಪಿಗಳು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ  ಎರಡು ಡಿಯೋ ಬೈಕ್, ಜ್ಯುಪಿಟರ್ ಬೈಕ್ ಮತ್ತು ಸ್ಪ್ಲೆಂಡರ್ ಬೈಕ್‍ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಬಳಿಕ ಪರಾರಿಯಾಗಿದ್ದಾರೆ.

ಕೆಲ ಸಮಯದ ಬಳಿಕ ನೆರೆಹೊರೆಯವರ ಸಹಾಯದಿಂದ ಬೆಂಕಿ ನಂದಿಸಿದ ಶ್ರೀನಿವಾಸ್ ಕುಟುಂಬ ಬಗಲಗುಂಟೆ ಪೋಲೀಸರಿಗೆ ಈ ಕುರಿತು ದೂರು ಸಲ್ಲಿಸಿದೆ. ಆ ಸಂಬಂಧ ಪೋಲೀಸರು ಆರೋಪಿಗಳ ಶೋಧ ನಡೆಸುತಿದ್ದಾಗಲೇ ಅತ್ತ ಆರೋಪಿಗಳಿಂದ ಶರತ್ ಗೆ ಮತ್ತೆ ಕರೆ ಬಂದಿದೆ. ಇದು ಸ್ಯಾಂಪಲ್, ನೀವೇನಾದರೂ ಹಣ ನೀಡದೆ ಹೋದಲ್ಲಿ ನಿಮ್ಮ ಕಚೇರಿ, ಕಾರುಗಳಿಗೆ ಸಹ ಬೆಂಕಿ ಹಚ್ಚುವೆವು ಎಂದು ಹೇಳಿ ಹೆದರಿಸಿದ್ದಾರೆ. ಇದನ್ನು ತಕ್ಷಣವೇ ಶರತ್ ಪೋಲೀಸರಿಗೆ ತಿಳಿಸಿದ್ದಾರೆ.

ಪ್ರಕರಣವನ್ನು ಗಂಭೀರ ಪರಿಗಣಿಸಿದ ಸೋಲದೇವನಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಶಿವಸ್ವಾಮಿ ಅವರು ಸಿಬ್ಬಂದಿಗಳಾದ ಮಲ್ಲಿಕಾರ್ಜುನ್ ಮತ್ತು ಶ್ರೀನಿವಾಸ್ ಅವರೊಂದಿಗೆ ಕಾರ್ಯಾಚರಣೆ  ನಡೆಸಿದ್ದಾರೆ.

ನಗರದ ಆಚಾರ್ಯ ಕಾಲೇಜು ಸಮೀಪ ಆರೋಪಿಗಳು ತಿರುಗುತ್ತಿದ್ದಾರೆ ಎಂಬ ಮಾಹಿತಿ ಪಡೆದ ಪೋಲೀಸರು ಅಲ್ಲಿಗೆ ತೆರಳಿ ಅವರ ಬಂಧನಕ್ಕೆ ಯತ್ನಿಸಿದ್ದಾರೆ. ಆದರೆ ಆರೋಪಿಗಳು ಪೋಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.ತಕ್ಷಣ ಶಿವಸ್ವಾಮಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗಳಿಗೆ ಶರಣಾಗಲು ಎಚ್ಚರಿಸಿದ್ದಾರೆ. ಆದರೆ ಆರೋಪಿಗಳು ಅವರ ಂಆತು ಕೇಳದಾದಾಗ ಇಬ್ಬರ ಕಾಲುಗಳಿಗೆ ಗುಂಡು ಹೊಡೆದು ಬಳಿಕ ಬಂಧಿಸಿದ್ದಾರೆ. ಸಧ್ಯ ಆರೋಪಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.

Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp