ಕರ್ತವ್ಯ ಲೋಪ: ಉಡುಪಿ ನಗರ ಎಸ್ಸೈ ಅನಂತಪದ್ಮನಾಭ ಅಮಾನತು

ಕರ್ತವ್ಯಲೋಪದ ಆರೋಪದ ಮೇಲೆ ಉಡುಪಿ ನಗರ ಠಾಣೆ ಪೋಲೀಸ್ ಉಪನಿರೀಕ್ಷಕ (ಎಸ್.ಐ) ಅನಂತಪದ್ಮನಾಭ ಹಾಗೂ ಓರ್ವ ಹೆಡ್ ಕಾಸ್ಟೇಬಲ್  ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೋಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಆದೇಶಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉಡುಪಿ: ಕರ್ತವ್ಯಲೋಪದ ಆರೋಪದ ಮೇಲೆ ಉಡುಪಿ ನಗರ ಠಾಣೆ ಪೋಲೀಸ್ ಉಪನಿರೀಕ್ಷಕ (ಎಸ್.ಐ) ಅನಂತಪದ್ಮನಾಭ ಹಾಗೂ ಓರ್ವ ಹೆಡ್ ಕಾಸ್ಟೇಬಲ್  ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೋಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಆದೇಶಿಸಿದ್ದಾರೆ.

ನವೆಂಬರ್ 2 ರಂದು ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಗೆಳತಿಯರೊಡನೆ ಯುವಕರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆಗೆ ಸಮ್ಬಂಧಿಸಿ ಕರ್ತವ್ಯ ಲೋಪ ಎಸಗಿದ ಆರೋಪ ಅನಂತಪದ್ಮನಾಭ ಅವರ ಮೇಲಿದೆ.

ಘಟನೆ ವಿವರ

ಸ್ನೇಹಿತರಾಗಿದ್ದ ಅಶೀಶ್ ಕಾನು, ತಾಹಿಮ್ ಹಾಗೂ ಶಿವಾನಿ ಎಂಬುವವರು ನವೆಂಬರ್ 2 ರಂದು ರಾತ್ರಿ ಎಂಟರ ಸಮಯದಲ್ಲಿ ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಕುಳಿತು ಮಾತನಾಡುತ್ತಿದ್ದ ವೇಳೆ ಸುನೀಲ್ ಪೂಜಾರಿ, ರಾಕೇಶ್ ಸುವರ್ಣ ಹಾಗೂ ಇತರರು ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ನವೆಂಬರ್ ಐದರಂದು ಉಡುಪಿ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.  ಆ ಪ್ರಕರಣದಲ್ಲಿ ಕೃಷ್ಣಾನಂದ ಎನ್ನುವವರು ಪ್ರತಿದೂರನ್ನೂ ಸಲ್ಲಿಸಿದ್ದರು.  ಈ ಕುರಿತಂತೆ ಕರ್ತವ್ಯ ಲೋಪ ಎಸಗಿದ್ದ ಎಸ್ಸೈಅನಂತಪದ್ಮ್ನಾಭ ಹಾಗೂ ಹೆಡ್ ಕಾನ್ಸ್ಟೇಬಲ್ ಅವರುಗಳನ್ನು ಇದೀಗ ಅಮಾನತು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com