ಹನಿಟ್ರ್ಯಾಪ್​ಗೆ​ ಬಿದ್ದ ಅರ್ಚಕನಿಗೆ ಪಂಗನಾಮ, ಆರೋಪಿಗಳು ಪೊಲೀಸ್ ಬಲೆಗೆ

ಸದ್ಯ ಹನಿಟ್ರ್ಯಾಪ್​ಗೆ ಬೀಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂತಹದೇ ಒಂದು ಪ್ರಕರಣ ಈಗ ಚಾಮರಾಜನಗರ ಜಿಲ್ಲೆಯಲ್ಲಿಬೆಳಕಿಗೆ ಬಂದಿದೆ. ಹನಿಟ್ರ್ಯಾಪ್ ಹೆಸರಿನಲ್ಲಿ ಅರ್ಚಕನಿಂದ ಆರೋಪಿಗಳು ಲಕ್ಷ-ಲಕ್ಷ ಪೀಕಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಹನಿಟ್ರ್ಯಾಪ್​ಗೆ​ ಬಿದ್ದ ಅರ್ಚಕನಿಗೆ ಪಂಗನಾಮ, ಆರೋಪಿಗಳು ಪೊಲೀಸ್ ಬಲೆಗೆ
ಹನಿಟ್ರ್ಯಾಪ್​ಗೆ​ ಬಿದ್ದ ಅರ್ಚಕನಿಗೆ ಪಂಗನಾಮ, ಆರೋಪಿಗಳು ಪೊಲೀಸ್ ಬಲೆಗೆ

ಚಾಮರಾಜನಗರ: ಹನಿಟ್ರ್ಯಾಪ್​ ಬಲೆಗೆ ಬಿದ್ದು ಅರ್ಚಕನೊಬ್ಬ ಬರೋಬ್ಬರಿ 18 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. 

ಅರ್ಚಕ ಹಣ ಕಳೆದುಕೊಂಡಿದ್ದು, ಈ ಸಂಬಂಧ ಬೆಂಗಳೂರಿನ ಹೆಸರಘಟ್ಟ ನಿವಾಸಿಗಳಾದ ಸರೋಜಮ್ಮ, ಬಸವರಾಜು, ನಾಗರತ್ನಮ್ಮ ಎಂಬುವವರನ್ನು ಬಂಧಿಸಲಾಗಿದೆ. 

ಈ ಮೂವರು ಆರೋಪಿಗಳು ಆಗಾಗ್ಗೆ ಅರ್ಚಕರು ಆದ ರಾಘವನ್ ಬಳಿ ಪೂಜೆ ಮಾಡಿಸುತ್ತಿದ್ದರು. ಜೊತೆಗೆ ಬೆಂಗಳೂರಿಗೆ ಪೂಜೆಗೆ ತೆರಳಿದ್ದ ವೇಳೆ ಬಲೆಗೆ ಬಿದ್ದ ಈತನಿಂದ ಲಕ್ಷ ಲಕ್ಷ ಪೀಕಿದ್ದಾರೆ. ನೀನು ಲೈಂಗಿಕ ಕಿರುಕುಳ ನೀಡಿದ್ದೀಯಾ, ಅಶ್ಲೀಲವಾಗಿ ಮಾತನಾಡಿದ್ದೀಯಾ ನಾವು ನಿನ್ನ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಬೆದರಿಕೆವೊಡ್ಡಿ 20 ಲಕ್ಷ ರೂ. ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೇ ಸುಮ್ಮನಾಗದೇ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರಿಂದ ನ.8 ರಂದು ಅರ್ಚಕ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅರ್ಚಕನ ಮೂಲಕ ಆರೋಪಿಗಳನ್ನು ಮದ್ದೂರಿನಲ್ಲಿ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com