ಬೆಂಗಳೂರು: ಟಿಕ್‌ಟಾಕ್‌ನಲ್ಲಿ ಸುಂದರ ಯುವತಿಯ ಮೋಡಿಗೆ ಬಿದ್ದು ಲಕ್ಷ ಲಕ್ಷ ಕಳೆದುಕೊಂಡ ಉದ್ಯಮಿ

ಉದ್ಯಮಿಯೊಬ್ಬರು ಟಿಕ್ ಟಾಕ್ ನಲ್ಲಿ ಪರಿಚಯವಾದ ಯುವತಿಯೊಬ್ಬಳಿಗೆ ಲಕ್ಷ ಲಕ್ಷ ರುಪಾಯಿ ಕೊಟ್ಟು ಮೋಸ ಹೋಗಿದ್ದಾರೆ.
ವಿಜಯಲಕ್ಷ್ಮಿ
ವಿಜಯಲಕ್ಷ್ಮಿ

ಬೆಂಗಳೂರು: ಉದ್ಯಮಿಯೊಬ್ಬರು ಟಿಕ್ ಟಾಕ್ ನಲ್ಲಿ ಪರಿಚಯವಾದ ಯುವತಿಯೊಬ್ಬಳಿಗೆ ಲಕ್ಷ ಲಕ್ಷ ರುಪಾಯಿ ಕೊಟ್ಟು ಮೋಸ ಹೋಗಿದ್ದಾರೆ.

ಶಿವಕುಮಾರ್ ಎಂಬಾತ ಟಿಕ್ ಟಾಕ್ ಸ್ಟಾರ್ ವಿಜಯಲಕ್ಷ್ಮಿ ಎಂಬ ಮಹಿಳೆಯನ್ನು ನಂಬಿ ನಾಲ್ಕು ಲಕ್ಷ ರುಪಾಯಿ ಕಳೆದುಕೊಂಡಿದ್ದು ಇದೀಗ ಡಿಜಿ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಟಿಕ್ ಟಾಕ್ ನಲ್ಲಿ ವಿಜಯಲಕ್ಷ್ಮಿ ವಿಡಿಯೋಗಳನ್ನು ನೋಡಿ ಶಿವಕುಮಾರ್ ಫಿದಾ ಆಗಿದ್ದಾರೆ. ನಂತರ ಮೊಬೈಲ್ ನಂಬರ್ ಪಡೆದು ಫೇಸ್ ಬುಕ್ ನಲ್ಲಿ ಆಕೆ ಜೊತೆ ಚಾಟಿಂಗ್ ನಡೆಸಿದ್ದರು. ಸ್ನೇಹ ನಂತರ ಪ್ರೇಮಕ್ಕೆ ತಿರುಗಿ ಕೆಲ ದಿನಗಳು ಇಬ್ಬರು ಒಂದೇ ಮನೆಯಲ್ಲಿ ವಾಸವಾಗಿದ್ದರು. ಮದುವೆಯಾಗುವುದಾಗಿ ನಂಬಿಸಿ ಯುವತಿ ಲಕ್ಷಾಂತರ ರುಪಾಯಿ ದೋಚಿದ್ದಾಳೆ. 

ಮದುವೆಯಾಗುವುದಾಗಿ ಶಿವಕುಮಾರ್ ವಿಜಯಲಕ್ಷ್ಮಿಯನ್ನು ಕೇಳಿದಾಗ ಮದುವೆ ಎಂದಿದ್ದ ಆಕೆ ಆತನಿಂದ ದೂರ ಉಳಿದ್ದಿದ್ದಳು. ಇದಾದ ಬಳಿಕ ಶಿವಕುಮಾರ್ ಕೊಟ್ಟ ಹಣ ವಾಪಸು ಕೊಡುವಂತೆ ಕೇಳಿದಾಗ ಆಕೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾಳೆ. ಹೀಗಾಗಿ ಶಿವಕುಮಾರ್ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com