ಕಲಬುರಗಿ: ಕಣ್ಮುಂದೆಯೇ ಮುಳುಗುತ್ತಿದ್ದರು ನೋಡುತ್ತಿದ್ದ ಸ್ನೇಹಿತರು, ವಿಡಿಯೋ ವೈರಲ್!

ಯುವಕನೋರ್ವ ಸ್ನೇಹಿತರ ಜೊತೆ  ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿದ್ದ. ಈಜಾಡುತ್ತಿದ್ದವನ ಕೈ ಸೋತ್ತಿದ್ದರಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಆದರೆ ಪಕ್ಕದಲ್ಲೇ ಇದ್ದ ಸ್ನೇಹಿತರು ಮಾತ್ರ ಹುಡುಗಾಟ ಎಂದು ಭಾವಿಸಿ ವಿಡಿಯೋ ಮಾಡಿದ್ದಾರೆ.

Published: 16th November 2019 03:28 PM  |   Last Updated: 16th November 2019 03:28 PM   |  A+A-


Kalaburagi: Young man Drowns as his Friends take a video of him dying

ಕಲಬುರಗಿ: ಕಣ್ಮುಂದೆಯೇ ಮುಳುಗುತ್ತಿದ್ದರು ನೋಡುತ್ತಿದ್ದ ಸ್ನೇಹಿತರು

Posted By : Vishwanath S
Source : Online Desk

ಕಲಬುರಗಿ: ಯುವಕನೋರ್ವ ಸ್ನೇಹಿತರ ಜೊತೆ  ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿದ್ದ. ಈಜಾಡುತ್ತಿದ್ದವನ ಕೈ ಸೋತ್ತಿದ್ದರಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಆದರೆ ಪಕ್ಕದಲ್ಲೇ ಇದ್ದ ಸ್ನೇಹಿತರು ಮಾತ್ರ ಹುಡುಗಾಟ ಎಂದು ಭಾವಿಸಿ ವಿಡಿಯೋ ಮಾಡಿದ್ದಾರೆ. 

ಮಿಜುಗುರಿ ಬಡಾವಣೆಯ 22 ವರ್ಷದ ಜಾಫರ್ ಅಯೂಬ್ ಮೃತ ಯುವಕ. ಕುಕ್ಮೋದ್ದೀನ್ ಕಲ್ಲಿನ ಕ್ವಾರಿಯಲ್ಲಿ ಈ ಘಟನೆ ನಡೆದಿದೆ. 

ನೀರಿಗೆ ಜಿಗಿದು ಆರಾಮವಾಗಿ ಈಜುತ್ತಿದ್ದ. ಆದರೆ ಕೆಲವೊತ್ತಿನಲ್ಲೇ ಜಾಫರ್ ಕೈಗಳು ಸೋತಿವೆ. ದಡಕ್ಕೆ ಬಂದರು ಹಿಡಿದುಕೊಳ್ಳಲಾಗದೆ ಮತ್ತೆ ನೀರಿನಲ್ಲಿ ಮುಳುಗಿದ್ದಾನೆ. ಅಲ್ಲೇ ಇದ್ದ ಸ್ನೇಹಿತನೊಬ್ಬ ಜಾಫರ್ ನೀರಿನಲ್ಲಿ ಆಟವಾಡುತ್ತಿರಬೇಕು ಎಂದು ಭಾವಿಸಿ ನೋಡುತ್ತಾ ನಿಂತಿದ್ದಾನೆ. ಆದರೆ ಎರಡು ಮೂರು ಬಾರಿ ಮೇಲಕ್ಕೆ ಬಂದ ಜಾಫರ್ ಕೊನೆಗೆ ಮುಳುಗಿದ್ದಾನೆ. 

ಸ್ನೇಹಿತರು ಇದನ್ನು ವಿಡಿಯೋ ಮಾಡುತ್ತಿದ್ದರೇ ಹೊರತು ಆತನಿಗೆ ಏನಾಗುತ್ತಿದೆ ಎಂದು ನೋಡಲಿಲ್ಲ. ಸದ್ಯ ಯುವಕ ಮುಳುಗುತ್ತಿರುವ ವಿಡಿಯೋ ವೈರಲ್ ಆಗಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp