ಬೆಂಗಳೂರು: ಜವಳಿ ವಾಶಿಂಗ್ ಘಟಕದಲ್ಲಿ ಬಾಯ್ಲರ್ ಸ್ಫೋಟ, ಇಬ್ಬರು ಸಾವು

ಜವಳಿ ವಾಶಿಂಗ್ ಘಟಕದಲ್ಲಿ ಬಾಯ್ಲರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರು ಪೀಣ್ಯ ಕೈಗಾರಿಕಾ ಪ್ರದೇಶದ ದೊಡ್ಡಬಿದರಕಲ್ಲು ಬಳಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜವಳಿ ವಾಶಿಂಗ್ ಘಟಕದಲ್ಲಿ ಬಾಯ್ಲರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರು ಪೀಣ್ಯ ಕೈಗಾರಿಕಾ ಪ್ರದೇಶದ ದೊಡ್ಡಬಿದರಕಲ್ಲು ಬಳಿ ನಡೆದಿದೆ. ಶುಕ್ರವಾರ ರಾತ್ರಿ  ಫೀನಿಕ್ಸ್ ವಾಶ್ಟೆಕ್ ಗಾರ್ಮೆಂಟ್ ನಲಿ ಸಂಭವಿಸಿದ ಸ್ಫೋಟದಿಂದಾಗಿ  ಪೀಣ್ಯದ ಭವಾನಿ ನಗರ  ನಿವಾಸಿ ಮತ್ತು ಘಟಕದ ಮಾಲೀಕರಲ್ಲಿ ಒಬ್ಬರಾದ ಕಾಂತಿ (45) ಮತ್ತು ಉತ್ತರ ಪ್ರದೇಶದ ರಮೇಶ್ (46). ಸಾವನ್ನಪ್ಪಿದ್ದಾರೆ.

ಬಾಯ್ಲರ್ ಸ್ನಿಂದ ಅನಿಲಸೋರಿಕೆಯಾಗಿದೆ ಹಾಗಾಗಿ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ರಾತ್ರಿ ಪಾಳಿಯಲ್ಲಿ ಎಂಟು ಜನರು ಕೆಲಸ ಮಾಡುತ್ತಿದ್ದರು. ರಾತ್ರಿ 10.30ರ ಸುಮಾರು  ಸ್ಫೋಟಗೊಂಡಾಗ ಕಾಂತಿ ಹಾಗೂ  ಮತ್ತು ಇನ್ನೊಬ್ಬ ಕೆಲಸಗಾರ ಬಾಯ್ಲರ್ ಪರೀಕ್ಷೆಗೆ ತೆರಳಿದ್ದು ಇಬ್ಬರೂ ಸ್ಥಳದಲ್ಲೇ ಸಾವಿಗಿಡಾಗಿದಾರೆ. . ಶಬ್ದ ಕೇಳಿದ ಇತರ ಕಾರ್ಮಿಕರು ಬಾಯ್ಲರ್ ಕೋಣೆಗೆ ಧಾವಿಸಿ ರಕ್ತದ ಕೋಡಿಯಲ್ಲಿ ಬಿದ್ದಿದ್ದ ಇಬ್ಬರ ಮೃತದೇಹವನ್ನು ಕಂಡಿದ್ದಾರೆ.

ಕಾರ್ಖಾನೆಯು ಸಂತೋಷ್, ಕಾಂತಿ ಮತ್ತು ಜಿ ಟಿ ಗೌಡ ಎಂಬ ಮೂವರು ಪಾಲುದಾರರ ಒಡೆತನದಲ್ಲಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರು 2016 ರಲ್ಲಿ ಅನ್ನಪೂರ್ಣೇಶ್ವರಿ ಲೇಔಟ್ ನಲ್ಲಿ ಘಟಕವನ್ನು ತೆರೆದಿದ್ದರು. ಘಟನೆಯ ನಂತರ ಸಂತೋಷ್ ಮತ್ತು ಗೌಡ ಪರಾರಿಯಾಗಿದ್ದಾರೆ ಮತ್ತು ಅವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ.ಶವಗಳ ಶವಪರೀಕ್ಷೆಯನ್ನು ಶನಿವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಕಾಂತಿ ಅವರ ಪತ್ನಿಯೊಡನೆ ವಾಸವಿದ್ದರು. ರಮೇಶ್ ಅವರ ಸಹೋದರ ಇಬ್ಬರು ಮಾಲೀಕರ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com