ಬೆಂಗಳೂರು:  ಮೂವರು ಅಂತಾರಾಜ್ಯ ಮಾದಕ ವಸ್ತು ಮಾರಾಟಗಾರರ ಬಂಧನ

ಮೂವರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, ಅಂದಾಜು 10 ಲಕ್ಷ ರೂ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೂವರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, ಅಂದಾಜು 10 ಲಕ್ಷ ರೂ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ ಮೂಲದ ಶಾಕೀರ್ (32), ನಜೀಲ್ (30), ಎಂ. ಮುಹಮ್ಮದ್ ಜಿಯಾದ್ ಬಂಧಿತ ಆರೋಪಿಗಳು.

ನಗರದ ಬೇಗೂರಿನ ಮನೆಯೊಂದರಲ್ಲಿ ಮಾದಕ ವಸ್ತುಗಳಾದ ಹ್ಯಾಶಿಶ್, ಗಾಂಜಾ, ಎಂಡಿಎಂಎ ಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಸಜ್ಜಾಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಶನಿವಾರ ಕಾರ್ಯಾಚರಣೆ ನಡೆಸಿ, ಮೂವರನ್ನು ಬಂಧಿಸಿದ್ದಾರೆ.

ಬಂಧಿತರಿದ್ದ ಮನೆಯಲ್ಲಿ ಎರಡು ಕೆಜಿ ಸೆಮಿಪಾಲಿಶ್ ಹ್ಯಾಶಿಸ್ ಆಯಿಲ್, 200 ಗ್ರಾಮ್ ಗಾಂಜಾ, 12 ಗ್ರಾಂ ಎಂಡಿಎಂ, ಮೂರು ಯಂತ್ರ ಮತ್ತಿತರೆ ವಸ್ತುಗಳು ಪತ್ತೆಯಾಗಿದೆ.

ಆರೋಪಿಗಳು ಮೇಲಿಂದ ಮೇಲೆ ಆಂಧ್ರಪ್ರದೇಶದ ವೈಜಾಕ್ ಗೆ ತೆರಳಿ ಅಲ್ಲಿನ ಮಾದಕವಸ್ತು ಜಾಲದೊಡನೆ ಅಆಂಪರ್ಕ ಬೆಳೆಸಿ ಕಡಿಮೆ ದುಡ್ಡಿಗೆ ಇಂತಹಾ ವಸ್ತುಗಳ ಖರೀದಿ ನಡೆಸಿದ್ದರು. ಮತ್ತೆ ಇದನ್ನು ಬೆಂಗಳೂರಿಗೆ ತಂದು ಇಲ್ಲಿ ಅದನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಅವರು ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿದ್ದದ್ದು ತನಿಖೆ ವೇಳೆ ಪತ್ತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com