ಬೆಂಗಳೂರಿನಲ್ಲಿಯೇ ಫಿಲಂ ಸಿಟಿ ನಿರ್ಮಾಣ ಮಾಡಲು ಸರ್ಕಾರ ಮುಂದು:ಡಾ ಸಿ ಎನ್ ಅಶ್ವಥ್ ನಾರಾಯಣ 

ಬೆಂಗಳೂರಿನಲ್ಲಿಯೇ ಫಿಲಂ ಸಿಟಿ ಮಾಡಬೇಕೆಂಬ ಯೋಜನೆಯಿದೆ. ಇದಕ್ಕಾಗಿ ಸೂಕ್ತ ಸ್ಥಳ ಹುಡುಕುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ ಎನ್ ಅಶ್ವಥನಾರಾಯಣ ತಿಳಿಸಿದರು.

Published: 17th November 2019 01:54 PM  |   Last Updated: 18th November 2019 08:31 AM   |  A+A-


Sumalatha Ambareesh got Dr Sarojamma national award on behalf of Dr Ambareesh

ಡಾ ಸರೋಜಮ್ಮ ಪ್ರಶಸ್ತಿಯನ್ನು ಡಾ.ಅಂಬರೀಷ್ ಅವರ ಪರವಾಗಿ ಅವರ ಪತ್ನಿ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಪ್ರದಾನ ಮಾಡಿದ ಸಂದರ್ಭ

Posted By : Sumana Upadhyaya
Source : Online Desk

ಬೆಂಗಳೂರು: ಚಲನಚಿತ್ರ ಅಧ್ಯಯನ ಮತ್ತು ಕಲೆ, ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಫಿಲಂ ಸಿಟಿಯನ್ನು ಶೀಘ್ರವೇ ನಿರ್ಮಿಸಬೇಕೆಂಬುದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಆಶಯವಾಗಿದೆ. ಬೆಂಗಳೂರಿನಲ್ಲಿಯೇ ಫಿಲಂ ಸಿಟಿ ಮಾಡಬೇಕೆಂಬ ಯೋಜನೆಯಿದೆ. ಇದಕ್ಕಾಗಿ ಸೂಕ್ತ ಸ್ಥಳ ಹುಡುಕುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ ಎನ್ ಅಶ್ವಥನಾರಾಯಣ ತಿಳಿಸಿದರು.


ಅವರು ಇಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಹಿರಿಯ ನಟ ಅಂಬರೀಷ್ ಗೆ ಮರಣೋತ್ತರವಾಗಿ ಡಾ. ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಅಂಬರೀಶ್​ ಓರ್ವ ಮಹಾನ್ ನಟ. ನನ್ನ ಪ್ರತಿಯೊಂದು ವಿಷಯದಲ್ಲೂ ಅವರ ಪ್ರಭಾವ ಇದೆ. ಅವರಿಗೆ ಈ ಪ್ರಶಸ್ತಿ ನೀಡುವ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ಚಿತ್ರರಂಗದಲ್ಲಿ‌ ಇಂಥ ಏನೇ ಸಮಸ್ಯೆ ಇದ್ದರೂ ಅಂಬರೀಶ್​ ಪರಿಹಾರ ನೀಡುತ್ತಿದ್ದರು. ಅವರ ದಾರಿಯಲ್ಲಿ ನಾವು ಸಾಗಬೇಕಾಗಿದೆ ಎಂದು ಹೇಳಿದರು.


ದಿವಂಗತ ಅಂಬರೀಷ್ ಅವರ ಪರವಾಗಿ ಅವರ ಪತ್ನಿ ಸಂಸದೆ ಸುಮಲತಾ ಅಂಬರೀಷ್ ಪ್ರಶಸ್ತಿ ಸ್ವೀಕರಿಸಿದರು. ಹಿರಿಯ ನಟಿ ಡಾ. ಸರೋಜಾದೇವಿ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp