ಮಹಾರಾಷ್ಟ್ರದಲ್ಲಿ ಶಿವಸೇನೆ ಬದಲು ಕಾಂಗ್ರೆಸ್ ಬಿಜೆಪಿ ಜೊತೆಗೆ ಕೈಜೋಡಿಸುವುದೇ ಒಳಿತು: ಹೆಚ್'ಡಿಕೆ

ಮಹಾರಾಷ್ಟ್ರದಲ್ಲಿ ಶಿವಸೇನೆ ಬದಲು ಕಾಂಗ್ರೆಸ್ ಬಿಜೆಪಿ ಜೊತೆಗೆ ಕೈಜೋಡಿಸಿದರೆ ಉತ್ತಮವಾಗಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ. 
ಕುಮಾರಸ್ವಾಮಿ
ಕುಮಾರಸ್ವಾಮಿ

ಬೆಂಗಳೂರು; ಮಹಾರಾಷ್ಟ್ರದಲ್ಲಿ ಶಿವಸೇನೆ ಬದಲು ಕಾಂಗ್ರೆಸ್ ಬಿಜೆಪಿ ಜೊತೆಗೆ ಕೈಜೋಡಿಸಿದರೆ ಉತ್ತಮವಾಗಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ. 

ಮಹಾರಾಷ್ಟ್ರ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಎನ್'ಸಿಪಿ ಪಕ್ಷಗಳು ಶಿವಸೇನೆ ಜೊತೆಗೆ ಸೇರಿಕೊಂಡು ಸರ್ಕಾರ ರಚನೆಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿಯವರು, ಶಿವಸೇನೆಗಿಂತಲೂ ಕಾಂಗ್ರೆಸ್ ಬಿಜೆಪಿ ಜೊತೆಗೆ ಕೈಜೋಡಿಸುವುದೇ ಒಳಿತು ಎಂದು ಹೇಳಿದ್ದಾರೆ. 

ಬಿಜೆಪಿ ಮೃದು ಹಿಂದುತ್ವ ಧೋರಣೆಯನ್ನು ಹೊಂದಿದೆ. ಶಿವಸೇನೆ ಕಠಿಣ ಹಿಂದುತ್ವ ಧೋರಣೆಯನ್ನು ಹೊಂದಿದೆ. 1/3 ಗಿಂತಲೂ 1/2 ರಾಜಕೀಯದ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಬೇಕಿದೆ. ಶಿವಸೇನೆ ಕಠಿಣ ಹಿಂದುತ್ವ ಧೋರಣೆ ಹೊಂದಿದ್ದು, ಬಿಜೆಪಿ ಮೃದು ಹಿಂದುತ್ವ ಧೋರಣೆಯನ್ನು ಹೊಂದಿದೆ. ಹೀಗಾಗಿ ಕಾಂಗ್ರೆಸ್ ಕಠಿಣ ಹಿಂದುತ್ವ ಧೋರಣೆಯ ಬದಲಾಗಿ ಮೃದು ಹಿಂದುತ್ವ ಧೋರಣೆ ಹೊಂದಿರುವ ಬಿಜೆಪಿಯೊಂದಿಗೇ ಕೈಜೋಡಿಸುವುದೇ ಒಳಿತು ಎಂದು ತಿಳಿಸಿದ್ದಾರೆ. 

ಇದೇ ವೇಳೆ ಕರ್ನಾಟಕ ಉಪ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಾರಿಯ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 15 ವಿಧಾನಸಭಾ ಕ್ಷೇತ್ರಗಳ ಪೈಕಿ 8-10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಮಹಾರಾಷ್ಟ್ರದಂತೆಯೇ ರಾಜ್ಯದಲ್ಲಿಯೂ ರಾಜಕೀಯದ ಹೊಸ ಅಧ್ಯಾಯ ಆರಂಭಗೊಳ್ಳಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com