'ವಾಟರ್ ಬೆಲ್ ಕಾನ್ಸೆಪ್ಟ್': ಸರ್ಕಾರದ ನಿರ್ಧಾರಕ್ಕೆ ಖಾಸಗಿ, ಅನುದಾನಿತ ಶಾಲೆಗಳು ಸಹಮತ 

ಶಾಲೆಗಳಲ್ಲಿ ಮಕ್ಕಳು ಸಾಕಷ್ಟು ನೀರು ಕುಡಿಯಲು ಇರುವ ನೀರಿನ ಸೂಚನೆ ಪರಿಕಲ್ಪನೆ(ವಾಟರ್ ಬೆಲ್ ಕಾನ್ಸೆಪ್ಟ್)ಯನ್ನು ಜಾರಿಗೆ ತರಲು ಮುಂದಾಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಆಲೋಚನೆಯನ್ನು ರಾಜ್ಯದಲ್ಲಿನ ಖಾಸಗಿ ಮತ್ತು ಅನುದಾನಿತ ಶಾಲೆಗಳು ಸ್ವಾಗತಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶಾಲೆಗಳಲ್ಲಿ ಮಕ್ಕಳು ಸಾಕಷ್ಟು ನೀರು ಕುಡಿಯಲು ಇರುವ ನೀರಿನ ಸೂಚನೆ ಪರಿಕಲ್ಪನೆ(ವಾಟರ್ ಬೆಲ್ ಕಾನ್ಸೆಪ್ಟ್)ಯನ್ನು ಜಾರಿಗೆ ತರಲು ಮುಂದಾಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಆಲೋಚನೆಯನ್ನು ರಾಜ್ಯದಲ್ಲಿನ ಖಾಸಗಿ ಮತ್ತು ಅನುದಾನಿತ ಶಾಲೆಗಳು ಸ್ವಾಗತಿಸಿವೆ.


ಮಕ್ಕಳಲ್ಲಿ ನಿರ್ಜಲೀಕರಣ(ಡಿಹೈಡ್ರೇಶನ್)ಮತ್ತು ಮೂತ್ರ ಸೋಂಕಿನಂತಹ ತೊಂದರೆಗಳನ್ನು ತಪ್ಪಿಸಲು ವಾಟರ್ ಬೆಲ್ ಪರಿಕಲ್ಪನೆ ಅತ್ಯಂತ ಸಹಾಯವಾಗಲಿದ್ದು ವಿರಾಮದ ಅವಧಿಯಲ್ಲಿ ಮಕ್ಕಳಿಗೆ ನೀರು ಕುಡಿಯುವಂತೆ ತಿಳಿಸಲಾಗುತ್ತದೆ.


ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿರುವ ಇಂದ್ರಪ್ರಸ್ಥ ಶಾಲೆಯಲ್ಲಿ ಮೊದಲ ಬಾರಿಗೆ ಈ ಪರಿಕಲ್ಪನೆಯನ್ನು ಜಾರಿಗೆ ತರಲಾಗುತ್ತದೆ. ಶಾಲೆಗೆ ನೀರು ತೆಗೆದುಕೊಂಡ ಹೋದ ಮಕ್ಕಳು ಅದನ್ನು ಕುಡಿಯದೆ ವಾಪಸ್ ತರುತ್ತಾರೆ ಎಂದು ಪೋಷಕರು ದೂರು ನೀಡಿದ ಹಿನ್ನಲೆಯಲ್ಲಿ ಶಾಲೆ ಈ ಯೋಜನೆ ತರಲು ಮುಂದಾಗಿದೆ.


ಇಂದ್ರಪ್ರಸ್ಥ ವಿದ್ಯಾಲಯದ ಪ್ರಾಂಶುಪಾಲ ಜೋಸ್ ಎಂಜೆ, ಪೋಷಕರು ಮಕ್ಕಳ ಬಗ್ಗೆ ತಮ್ಮ ದೂರು ಸಲ್ಲಿಸಿದ ನಂತರ ನಾವು ಆ ಬಗ್ಗೆ ಪರಿಶೀಲನೆ ಮಾಡಿದೆವು. ಹಲವು ಮಕ್ಕಳು ತಲೆನೋವು, ಹೊಟ್ಟೆನೋವು ಎಂದು ಆಗಾಗ ಹೇಳುತ್ತಿರುತ್ತಾರೆ. ಮಕ್ಕಳ ದೇಹದಲ್ಲಿ ನೀರಿನ ಕೊರತೆಯಿಂದ ಹೀಗೆ ಆಗುತ್ತದೆ ಎಂದು ನಮಗೆ ಗೊತ್ತಾಯಿತು. ಹೀಗಾಗಿ ವಾಟರ್ ಬೆಲ್ ಪರಿಕಲ್ಪನೆಯನ್ನು ಜಾರಿಗೆ ತರಲು ನಿರ್ಧರಿಸಿದೆವು. ಶಾಲೆಯಲ್ಲಿ ಮೊದಲ ಬೆಲ್ ಬೆಳಗ್ಗೆ 10.35ಕ್ಕೆ ಆಗುತ್ತದೆ. ಮೊದಲ ಅವಧಿ ಮುಗಿದ ನಂತರ ಎರಡನೇ ಬೆಲ್ ಮಧ್ಯಾಹ್ನ 12 ಗಂಟೆಗೆ ಮತ್ತು ಕೊನೆಯ ಬೆಲ್ ಅಪರಾಹ್ನ 2 ಗಂಟೆಗೆ. ಮಕ್ಕಳು ಸಾಕಷ್ಟು ನೀರು ಕುಡಿಯುತ್ತಾರೆಯೇ ಇಲ್ಲವೇ ಎಂದು ಶಿಕ್ಷಕರು ನೋಡುತ್ತಾರೆ ಎಂದರು.


ನಾವು ಶಾಲೆಯಲ್ಲಿ ವಾಟರ್ ಪ್ಯೂರಿಫೈರ್ ನ್ನು ಇಡುತ್ತೇವೆ. ನಾವು ವಾಟರ್ ಬೆಲ್ ಕಾನ್ಸೆಪ್ಟ್ ನ್ನು ಬೆಂಬಲಿಸುತ್ತೇವೆ, ಹಾಗೆಂದು ನಿರ್ದಿಷ್ಟ ಸಮಯವೆಂದು ಇಟ್ಟಿಲ್ಲ, ಮಕ್ಕಳು ಯಾವಾಗ ಬೇಕಾದರೂ ನೀರು ಕುಡಿಯಬಹುದು ಎನ್ನುತ್ತಾರೆ ಸೈಂಟ್ ಮೆರಿಸ್ ಗರ್ಲ್ಸ್ ಹೈಸ್ಕೂಲ್ ನ ಸಿಸ್ಟರ್ ಶಾರ್ಲೆಟ್.


ಬೆಂಗಳೂರಿನ ಕಾಡುಗೋಡಿಯ ವಿಬ್ ಗೊಯಾರ್ ಶಾಲೆಯ ಪ್ರಾಂಶುಪಾಲೆ ಕವಿತಾ ನೀಲಾಯತ್, ಈ ಬಗ್ಗೆ ಪತ್ರಿಕೆಯಲ್ಲಿ ಓದಿದೆವು. ಕರ್ನಾಟಕ ಮತ್ತು ಕೇರಳದಲ್ಲಿ ವಾಟರ್ ಬೆಲ್ ಕಾನ್ಸೆಪ್ಟ್ ನ್ನು ಜಾರಿಗೆ ತರಲಾಗಿದೆ. ನಮಗೆ ಈ ಬಗ್ಗೆ ಸಾಕಷ್ಟು ಕುತೂಹಲವಿದೆ. ಇದನ್ನು ನಮ್ಮ ಶಾಲೆಯಲ್ಲಿ ಜಾರಿಗೆ ತರುತ್ತೇವೆ ಎಂದರು.


ಮಕ್ಕಳ ವೈದ್ಯರು ಏನನ್ನುತ್ತಾರೆ; ಶಾಲೆಗಳಲ್ಲಿ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗುತ್ತದೆ ಎಂದು ಮತ್ತು ಶೌಚಾಲಯ ಸ್ವಚ್ಛವಿರುವುದಿಲ್ಲವೆಂದು ಮಕ್ಕಳು ಅದರಲ್ಲೂ ಬಾಲಕಿಯರು ಶಾಲೆಯಲ್ಲಿ ಸಾಕಷ್ಟು ನೀರು ಕುಡಿಯುವುದಿಲ್ಲ. ಇದರಿಂದ ಕ್ರಮೇಣ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಮೂತ್ರ ಸೋಂಕು ಉಂಟಾಗುತ್ತದೆ ಎನ್ನುತ್ತಾರೆ.


ಏನಿದು ವಾಟರ್ ಬೆಲ್ ಕಾನ್ಸೆಪ್ಟ್: ಮಕ್ಕಳು ಶಾಲೆಯಲ್ಲಿ ನೀರು ಹೆಚ್ಚೆಚ್ಚು ಕುಡಿಯಲು ನಿರ್ದಿಷ್ಟ ಅವಧಿಯಲ್ಲಿ ಬೆಲ್ ಕೊಡಲಾಗುತ್ತದೆ. ಆ ಹೊತ್ತಿನಲ್ಲಿ ಬಂದು ಮಕ್ಕಳು ನೀರು ಕುಡಿಯಬೇಕು. ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಇದನ್ನು ಜಾರಿಗೆ ತರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com