ಬೆಂಗಳೂರು: ಚಲಿಸುತ್ತಿದ್ದ ಬಸ್ ನಿಂದ ವಿದ್ಯಾರ್ಥಿನಿಯನ್ನು ಹೊರದಬ್ಬಿದ ಕಂಡಕ್ಟರ್ 

ವಿದ್ಯಾರ್ಥಿನಿಯು ಬಸ್ ಪಾಸ್ ಹೊಂದಿದ್ದು, ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸಿದಳೆಂಬ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ವಿದ್ಯಾರ್ಥಿನಿಯನ್ನು ಚಲಿಸುವ ಬಸ್‌ನಿಂದ ಹೊರಕ್ಕೆ ದಬ್ಬಿದ್ದಾನೆ, ವಿದ್ಯಾರ್ಥಿನಿಗೆ ಹಲವು ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚಲಿಸುವ ಬಸ್ಸಿನಿಂದ ವಿದ್ಯಾರ್ಥಿನಿಯನ್ನು ಕಂಡಕ್ಟರ್ ಒಬ್ಬ ಹೊರದಬ್ಬಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ. 

ವಿದ್ಯಾರ್ಥಿನಿಯು ಬಸ್ ಪಾಸ್ ಹೊಂದಿದ್ದು, ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸಿದಳೆಂಬ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ವಿದ್ಯಾರ್ಥಿನಿಯನ್ನು ಚಲಿಸುವ ಬಸ್‌ನಿಂದ ಹೊರಕ್ಕೆ ದಬ್ಬಿದ್ದಾನೆ, ವಿದ್ಯಾರ್ಥಿನಿಗೆ ಹಲವು ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. 

ಜ್ಯೋತಿ ಕೇಂದ್ರಿಯ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ ಭೂಮಿಕ ಕಾಲೇಜು ಮುಗಿದ ಬಳಿಕ ತನ್ನ ಊರು ಕನಕಪುರಕ್ಕೆ ಹೋಗಲು ಕೆ.ಎಸ್.ಆರ್‌.ಟಿ.ಸಿ ಬಸ್ ಹತ್ತಿದ್ದಾಳೆ, ಆಗ ಆಕೆಯನ್ನು ಟಿಕೆಟ್ ಖರೀದಿಸುವಂತೆ ನಿರ್ವಾಹಕ ಕೇಳಿದ್ದಾನೆ. ಆದರೆ ತನ್ನ ಬಳಿ ಬಸ್ ಪಾಸ್ ಇರುವುದಾಗಿ ವಿದ್ಯಾರ್ಥಿನಿ ಉತ್ತರಿಸಿದ್ದಾಳೆ. ಇದರಿಂದ ಸಿಟ್ಟುಕೊಂಡ ನಿರ್ವಾಹಕ, ಇದು ದೂರದ ಊರಿಗೆ ಪ್ರಯಾಣಿಸುವ ಬಸ್ಸು ಇದರಲ್ಲಿ ಪಾಸ್ ನಡೆಯುವುದಿಲ್ಲ ಖಡ್ಡಾಯವಾಗಿ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ.

ತಾನು ಟಿಕೆಟ್ ತೆಗೆದುಕೊಳ್ಳುವುದಿಲ್ಲ, ಮುಂದಿನ ಸ್ಟಾಪ್‌ನಲ್ಲಿ ಇಳಿದುಬಿಡುತ್ತೇನೆ ಎಂದು ಭೂಮಿಕ ಮನವಿ ಮಾಡಿದ್ದಾಳೆ. ಭೂಮಿಕಾ ಮನವಿಗೆ ಒಪ್ಪದ ನಿರ್ವಾಹಕ ಮಾರ್ಗಮಧ್ಯದಲ್ಲಿಯೇ ಇಳಿಯುವಂತೆ ಹೇಳಿದ್ದಾನೆ. ಆದರೆ ಇದಕ್ಕೆ ಭೂಮಿಕ ಒಪ್ಪದೇ ಇದ್ದಾಗ, ಆಕೆಯನ್ನು ಬಸ್ಸಿನಿಂದ ಹೊರಕ್ಕೆ ತಳ್ಳಿದ್ದಾನೆ. ಭೂಮಿಕಾಗೆ ಮುಖ, ಎದೆ ಭಾಗ, ಮೊಣಕಾಲಿಗೆ ಗಾಯಗಳಾಗಿದ್ದು, ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಭೂಮಿಕಾಳನ್ನು ಹೊರಕ್ಕೆ ದಬ್ಬಿದ ಕಂಡಕ್ಟರ್ ನನ್ನು ಅಮಾನತು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com