ಮಹಿಳಾ ಮತದಾರರ ಸೆಳೆಯಲು ಸೀರೆ ಹಂಚಿಕೆ: ಮಂಡ್ಯದಲ್ಲಿ ನೂರಾರು ಸೀರೆ ವಶಕ್ಕೆ 

ಮತದಾರರಿಗೆ ಹಂಚಲು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ  ಸುಮಾರು 1೦೦೦ ಕ್ಕೂ ಹೆಚ್ಚು ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ.

Published: 20th November 2019 11:45 AM  |   Last Updated: 20th November 2019 11:45 AM   |  A+A-


Sarees seized in Karnataka poll

ವಶ ಪಡಿಸಿಕೊಂಡ ಸೀರೆ

Posted By : Shilpa D
Source : RC Network

ಮಂಡ್ಯ: ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಈಗಿನಿಂದಲೇ ಅಭ್ಯರ್ಥಿಗಳಿಂದ  ವಿವಿಧ ರೀತಿಯ ಕಸರತ್ತು ಆರಂಭವಾಗಿದೆ. ಇದರ ಭಾಗವಾಗಿ ಮತದಾರರಿಗೆ ಹಂಚಲು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ  ಸುಮಾರು 1೦೦೦ ಕ್ಕೂ ಹೆಚ್ಚು ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ.

ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರ ಪೋಟೋವನ್ನು ಹೊಂದಿರುವ ಸೀರೆಗಳನ್ನು ಚುನಾವಣಾಧಿಕಾರಿಗಳು. ಕೆ.ಆರ್.ಪೇಟೆ ತಾಲ್ಲೂಕಿನ ಸಾಕ್ಷಿಬೀಡು ಗ್ರಾಮದ ಬಳಿ ವಶಪಡಿಸಿಕೊಂಡಿದ್ದಾರೆ.

(ಕೆ.ಎ.05, ಎಂ.ಇ.0599) ಮಾರುತಿ ಓಮ್ನಿ  ಕಾರಿನಲ್ಲಿ ಸಾಗಿಸುತ್ತಿದ್ದ ನಾರಾಯಣಗೌಡ ಅವರ ಪೋಟೋ ದೊಂದಿಗೆ ದೀಪಾವಳಿ ಶುಭಾಶಯ ಕೋರುವ ಸುಮಾರು ಸಾವಿರಾರು ಸೀರೆಯುಳ್ಳ ಬಂಡಲ್ ಗಳನ್ನು ಚುನಾವಣಾ ತಪಾಸಣಾಧಿಕಾರಿ ಅಶೋಕ್ ನೇತೃತ್ವದ ಅಧಿಕಾರಿಗಳು ವಶಪಡಿಕೊಂಡಿದ್ದಾರೆ.

ಘಟನೆ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್.ಐ ಶಿವಕುಮಾರ್ ಯಾದವ್ ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

Stay up to date on all the latest ರಾಜ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp