ಔರಾದ್ಕರ್ ವರದಿ ಎಫೆಕ್ಟ್: ಸರ್ಕಾರದ ನಡೆಗೆ ಬೇಸತ್ತ ಪೋಲೀಸ್ ಸಿಬ್ಬಂದಿಯಿಂದ ಮತದಾನ ಬಹಿಷ್ಕಾರಕ್ಕೆ ತೀರ್ಮಾನ

 ರಾಘವೇಂದ್ರ ಔರಾದ್ಕರ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ರಾಜ್ಯ ಸರ್ಕಾರದ ನಡೆ ಬಗ್ಗೆ ಅಸಮಾಧಾನ,ಹೊಂದಿರುವ ಪೊಲೀಸ್ ಸಿಬ್ಬಂದಿಗಳು ರಾಜ್ಯದಲ್ಲಿ ಡಿಸೆಂಬರ್ 5 ರಂದು ನ್ಬಡೆಯುವ ಉಪಚುನಾವಣೆಗಳಲ್ಲಿ  ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಘವೇಂದ್ರ ಔರಾದ್ಕರ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ರಾಜ್ಯ ಸರ್ಕಾರದ ನಡೆ ಬಗ್ಗೆ ಅಸಮಾಧಾನ,ಹೊಂದಿರುವ ಪೊಲೀಸ್ ಸಿಬ್ಬಂದಿಗಳು ರಾಜ್ಯದಲ್ಲಿ ಡಿಸೆಂಬರ್ 5 ರಂದು ನ್ಬಡೆಯುವ ಉಪಚುನಾವಣೆಗಳಲ್ಲಿ  ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಈ ಸಂಬಂಧ ಪತ್ರವೊಂದರ ಭಾವಚಿತ್ರ ಬಿಡುಗಡೆಯಾಗಿದ್ದು ಇದರಲ್ಲಿ ಪೋಲೀಸರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ವಾಟ್ಸಾಪ್ ಗುಂಪುಗಳಲ್ಲಿ ವೈರಲ್ ಅಆಗಿರುವ ಈ ಪತ್ರ ಯಾವ ಸಹಿಯನ್ನೂ ಹೊಂದಿಲ್ಲ. ಆದರೆ ಮತದಾನವನ್ನು ಬಹಿಷ್ಕರಿಸುವ ಸಂದೇಶವನ್ನು ಎಲ್ಲೆಡೆ ಹರಡುವ ಉದ್ದೇಶದಿಂದ ರಚನೆಯಾಗಿದೆ.

ಔರಾದ್ಕರ್ ಸಮಿತಿಯ ವರದಿಯನ್ನು ಅದರ ಅನುಕೂಲಕ್ಕೆ ತಕ್ಕಂತೆ ಜಾರಿಗೆ ತಂದ ರಾಜ್ಯ ಸರ್ಕಾರವು ಪೊಲೀಸ್ ಅಧಿಕಾರಿಗಳನ್ನು ಕಂಗೆಡುವಂತೆ ಮಾಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.  ವರದಿಯ ಆಧಾರದ ಮೇಲೆ ಸರ್ಕಾರ ಮಾಡಿದ ಬದಲಾವಣೆಗಳಿಂದ ಯಾವುದೇ ಪ್ರಯೋಜನವಿಲ್ಲ ಮತ್ತು ಅದನ್ನು ಹಿಂಪಡೆಯಬೇಕು ಎಂದು ವಾದಿಸಲಾಗಿದೆ.ಇನ್ನು ನಾಲ್ಕನೇ ಶನಿವಾರದ ರಜೆಯ ಬಗ್ಗೆಯೂ ಮಾತನಾಡಿದ್ದು ಇದು ಪೊಲೀಸ್ ಸಿಬ್ಬಂದಿಗೆ ಅನ್ವಯಿಸುವುದಿಲ್ಲ, ಆದರೆ ಕ್ಯಾಶುಯಲ್ ರಜೆಯನ್ನು 15 ದಿನಗಳಿಂದ 10 ದಿನಗಳವರೆಗೆ ಕಡಿಮೆ ಮಾಡಿರುವುದು ಅನ್ಯಾಯ ಎಂದು ಸಾರಿದೆ.’"ರಾಜ್ಯದಲ್ಲಿ ಸುಮಾರು 90 ಸಾವಿರದಿಂದ -ಒಂದು ಲಕ್ಷ ಪೊಲೀಸ್ ಸಿಬ್ಬಂದಿ ಮತ್ತು ಸುಮಾರು 4-5 ಲಕ್ಷ ಅವಲಂಬಿತರು ಮತ್ತು ಕುಟುಂಬ ಸದಸ್ಯರು ಇದ್ದಾರೆ. ಪೊಲೀಸರ ಬಗ್ಗೆ ಸರ್ಕಾರದ ಮಲತಾಯಿ ಮನೋಭಾವದ ಬಗ್ಗೆ ನಾವೆಲ್ಲರೂ ನಿಜವಾಗಿಯೂ ಅಸಮಾಧಾನಗೊಂಡಿದ್ದೇವೆ. ಆದ್ದರಿಂದ, ನಾವು ಮತ್ತು ನಮ್ಮ ಕುಟುಂಬ ಸದಸ್ಯರು ಉಪಚುನಾವಣೆಗಳಲ್ಲಿ ಮತ್ತು ಮುಂದಿನ ಚುನಾವಣೆಗಳಲ್ಲಿ ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ”ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಹಲವಾರು ಪೊಲೀಸರು ಪತ್ರಿಕೆಯ ಜತೆ ಮಾತನಾಡಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ."ಇದು ದೊಡ್ಡ ವ್ಯತ್ಯಾಸವನ್ನು ಮಾಡದಿದ್ದರೂ, ಪ್ರತಿಭಟನೆಯ ಸಂಕೇತವಾಗಿ ಈ ಬಾರಿ ನನ್ನ ಮತ ಚಲಾಯಿಸದಿರಲು ನಾನು ನಿರ್ಧರಿಸಿದ್ದೇನೆ ಮತ್ತು ಪ್ರತಿಭಟನೆಯ ಸಂಕೇತವಾಗಿ ಮತ ಚಲಾಯಿಸದಂತೆ ನನ್ನ ಕುಟುಂಬ ಸದಸ್ಯರನ್ನು ಕೇಳಿದ್ದೇನೆ. ಯಾವುದೇ ಸರ್ಕಾರವು ನಮ್ಮ ದುಃಖಗಳನ್ನು ಆಲಿಸಲು ಸಿದ್ಧವಾಗಿಲ್ಲ ಮತ್ತು ಕೆಲವು ಅಪ್ರಸ್ತುತ ಘೋಷಣೆಗಳನ್ನು ಮಾಡಿ ನಂತರ ಅವರು ನಮ್ಮ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ನಾವು ಹಾಕುವ ಮತದ ಅರ್ಥವೇ ಕೆಟ್ಟುಹೋಗಿದೆ" ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಮತದಾರರಾದ ಮುಖ್ಯ ಕಾನ್‌ಸ್ಟೆಬಲ್ ಓರ್ವರು ಹೇಳಿದ್ದಾರೆ.

ಶಿವಾಜಿನಗರ ಕ್ಷೇತ್ರದ ಮತದಾರರಾದ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಯಲ್ಲಿರುವ ಮತ್ತೊಬ್ಬ ಪೊಲೀಸ್ ಕೂಡ ಇದೇ ಅಭಿಪ್ರಾಯವನ್ನು ತಾಳಿದ್ದು  ಅವರ ಹೆಚ್ಚಿನ ಸಹೋದ್ಯೋಗಿಗಳು ಸಹ ಇದೇ ರೀತಿ ನಿರ್ಧರಿಸಿದ್ದಾರೆ ಎಂದು ಹೇಳಿದರು. "ನಾವು ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಲು ಯೋಜಿಸಿದ್ದೆವು, ಆದರೆ ಇದು ನಮ್ಮ ಬೇಡಿಕೆಗಳಿಗೆ ಯಾವುದೇ ರೀತಿಯಲ್ಲಿ ಸಂಬಂಧವಿರದ ಕಾರಣ ಆಆಲೋಚನೆಯನ್ನು ಕೈಬಿಟ್ಟಿದ್ದೆವು. ಆದರೆ ಈ ಬಾರಿ ನಾವು ಉದ್ದೇಶಕ್ಕೆ ಬದ್ದವಾಗಿದ್ದೇವೆ.  ಮತ್ತು ಮತದಾನದಿಂದ ದೂರವಿರಲು ನಿರ್ಧರಿಸಿದ್ದೇವೆ, ”ಎಂದು ಅವರು ಹೇಳಿದರು.ಪತ್ರದ ಬಗ್ಗೆ ತಮಗೆ ತಿಳಿದಿದೆ ಎಂದು ಒಪ್ಪಿಕೊಂಡ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ತಮ್ಮ ಕಳವಳವನ್ನು ಸರ್ಕಾರ ಅರ್ಥ ಮಾಡಿಕೊಳ್ಲಬೇಕಿದೆ.ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com